ಬಳ್ಳಾರಿಯಲ್ಲಿ 2 ಲಕ್ಷ ರೂ.ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ…

ಬಳ್ಳಾರಿ,ಸೆಪ್ಟೆಂಬರ್,15,2020(www.justkannada.in) : ಬಳ್ಳಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ 2 ಲಕ್ಷ ರೂ.ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

jk-logo-justkannada-logo

ಹರಪನಹಳ್ಳಿ ಹಾಗೂ ಚಿಗಟೇರಿ ಪೊಲೀಸರು ಕಾರ್ಯಾಚರಣೆ ಮಾಡುವ ಮೂಲಕ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಬೆಳೆಯಲಾಗಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದು,  ಗ್ರಾಮದ ದಾಸಪ್ಪನವರ ಭರಮಪ್ಪ ಆರೋಪಿ ಬಂಧಿಸಿದ್ದಾರೆ.

2 lakh,worth,marijuana,seized,Bellary

ಖಚಿತ ಮಾಹಿತಿ ಮೇರೆಗೆ ಎಸ್ಪಿ ಸೈದುಲು ಅದಾವತ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸುವ ಮೂಲಕ ಬಂಧಿತನದಿಂದ 20ಕೆ.ಜಿ ತೂಕದ 20 ಗಾಂಜಾ ಗಿಡ ವಶಕ್ಕೆ ಪಡೆಯಲಾಗಿದ್ದು, ಬಳ್ಳಾರಿಯ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

key words : 2 lakh-worth-marijuana-seized-Bellary