18 ಲಕ್ಷ ರೂ. ಮೌಲ್ಯದ 70 ಕ್ವಿಂಟಲ್ ಕಾಫಿ ಕಳ್ಳತನ: ಐವರ ಬಂಧನ

ಕೊಡಗು,ಸೆಪ್ಟಂಬರ್,4,2025 (www.justkannada.in):  18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಕೊಡಗು ಜಿಲ್ಲೆಯ ಕುಶಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುನೀಲ್, ರಾಜು, ಶರತ್, ದಿನೇಶ್, ಜಿತೇಂದ್ರ ಬಂಧಿತ ಆರೋಪಿಗಳು. ಬಂಧಿತರಿಂದ 6,495ಕೆಜಿ ಕಾಫಿ, ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರಿನ ಉಮಾಕಾಫಿ ವರ್ಕ್ಸ್ ನಲ್ಲಿ ಕಳ್ಳತನವಾಗಿತ್ತು

ಐವರು ಆರೋಪಿಗಳು 18 ಲಕ್ಷ ಮೌಲ್ಯದ  70 ಕ್ವಿಂಟಲ್ ಕಾಫಿ ಕಳ್ಳತನ ಮಾಡಿದ್ದರು.  ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

Key words:  70 quintals, coffee, stolen, Five,  arrested