ಅಮರನಾಥದಲ್ಲಿ ಮೇಘಸ್ಟೋಟದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವು: 40 ಮಂದಿ ನಾಪತ್ತೆ.  

ಜಮ್ಮುಕಾಶ್ಮೀರ,ಜುಲೈ,9,2022(www.justkannada.in):    ಜಮ್ಮುಕಾಶ್ಮೀರದ ಹಿಮಾಲಯದ ತಪ್ಪಲಿನ ಪ್ರಸಿದ್ಧ ಯಾತ್ರಾಸ್ಥಳ ಅಮರನಾಥದಲ್ಲಿ ಮೇಘ ಸ್ಫೋಟ ಸಂಭವಿಸಿದ್ದು,  ಇದರಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತೀಯ ಸೇನೆಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಅಮರನಾಥಗೆ ತೆರಳಿದ್ಧ ಕರ್ನಾಟಕದ ಯಾತ್ರಿಕರು ಸುರಕ್ಷಿತರಾಗಿದ್ದಾರೆ. ಶಿವಮೊಗ್ಗದಿಂದ ಪಾಲಿಕೆಯ ಮಾಜಿ ಉಪಮೇಯರ್ ಸುರೇಖಾ ಜತೆಗೆ 16 ಮಂದಿ ಮಹಿಳೆಯರು ಅಮರನಾಥಕ್ಕೆ ತೆರಳಿದ್ದರರು. ಇಂದು ಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಬೇಕಿತ್ತು. ಆದರೆ ಮೇಘಸ್ಪೋಟ ಸಂಭವಿಸಿದ ಹಿನ್ನೆಲೆ ಇವರು ಅಮರನಾಥ ಬೇಸ್ ಕ್ಯಾಂಪ್ ನಲ್ಲಿ ರಕ್ಷಣೆ ಪಡೆದಿದ್ದಾರೆ.

ಈ ಕುರಿತು ಮಾತನಾಡಿರುವ ಶಿವಮೊಗ್ಗಪಾಲಿಕೆಯ ಮಾಜಿ ಉಪಮೇಯರ್ ಸುರೇಖಾ, ಕನ್ನಡಿಗರೆಲ್ಲರೂ ಸೇಫ್ ಆಗಿದ್ದಾರೆ ಭಾರತೀಯ ಸೇನೆ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ. ಕ್ಯಾಂಪ್ ನಿರ್ಮಿಸಿ ರಕ್ಷಣೆ ಮಾಡಿ.  ಊಟ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಬೀದರ್ ನಿಂದ ತೆರಳಿದ್ದ 10 ಮಂದಿ ಯಾತ್ರಿಕರೂ ಸಹ ಸೇಫ್ ಆಗಿದ್ದಾರೆ. ಈ ಪೈಕಿ ಆರು ಮಂದಿ ಈಗಾಗಲೇ ದೇವಾಲಯದಲ್ಲಿ ದರ್ಶನ ಪಡೆದಿದ್ದರು ಎನ್ನಲಾಗಿದೆ.

Key words: 15 death-cloudburst – Amarnath- 40 missing