139 ಶಾಸಕರೂ ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ- ಶಾಸಕ ಗಣಿಗ ರವಿಕುಮಾರ್.

ಮಂಡ್ಯ, ಫೆಬ್ರವರಿ, 23,2024(www.justkannada.in):  ರಾಜ್ಯಸಭೆ ಚುನಾವಣೆ ಹಿನ್ನೆಲೆ, ಆಮಿಷ ಬೆದರಿಕೆಗಳು ಬರುತ್ತಿದೆ. ಆದರೆ  ನಮ್ಮಲ್ಲಿರುವ 139 ಶಾಸಕರೂ ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್  ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಗಣಿಗ ರವಿಕುಮಾರ್,  ಕುಪೇಂದ್ರ ರೆಡ್ಡಿ ಗೆಲ್ಲಲು ಸಂಖ್ಯಾಬಲ ಇಲ್ಲ. ಕಾಂಗ್ರೆಸ್ ಬಳಿ 139 ಮತಗಳಿವೆ. ಈ ನಡುವೆ ಆಮಿಷ ಬೆದರಿಕೆಗಳಿಂದ ಪಕ್ಷೇತರ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಕುಪೇಂಧ್ರ ರೆಡ್ಡಿ ಪುತ್ರ, ಮಾಜಿ ಶಾಸಕರಿಂದ ಸೆಳೆಯಲು ಅಮಿಷ ಬೆದರಿಕೆ ಹಾಕಿಸುತ್ತಿದ್ದಾರೆ.  10 ಕೋಟಿ,  5 ಕೋಟಿ ಕೊಡ್ತೀವಿ ಎಂದು ಹೇಳಿ ಆಮಿಷ ಒಡ್ಡುತ್ತಿದ್ದಾರೆ. ಬೆದರಿಕೆ ಹಾಕುತ್ತಿರುವ ಬಗ್ಗೆ ಸಿಎಂ ಡಿಸಿಎಂ ಗಮನಕ್ಕೂ ತಂದಿದ್ದರು.  ಪಕ್ಷದ ವತಿಯಿಂದ ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ.  ನಮ್ಮ ಶಾಸಕರಿಗೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.

ರಾಜ್ಯಸಭೆ ಹಿನ್ನೆಲೆ ಶಾಸಕರು ರೆಸಾರ್ಟ್ ಸೇರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಗಣಿಗ ರವಿಕುಮಾರ್,  ಸೋಮವಾರದವರೆಗೆ ಕಲಾಪವಿದೆ.  ಕಾಂಗ್ರೆಸ ಶಾಸಕರು ರೆಸಾರ್ಟ್  ಗೆ ಹೋಗಲು ಹೇಗೆ ಸಾಧ್ಯ…?  ಎಂದು ಪ್ರಶ್ನಿಸಿದರು.

ಹೆಚ್ ಡಿಕೆಯಿಂದಲೇ ಆಮಿಷ ಬೆದರಿಕೆ ಎಂಬ ಡಿ.ಕೆ ಶಿವಕುಮಾರ್ ಆರೋಪ ಕುರಿತು ಪ್ರತಿಕ್ರಿಯಿಸಿದ ಗಣಿಗ ರವಿಕುಮಾರ್, ಈ ಬಗ್ಗೆ ಡಿ.ಕೆ ಶಿವಕುಮಾರ್ ಅವರನ್ನೇ ಕೇಳಿ. ಆಮಿಷ ಬೆದರಿಕೆ ಬಗ್ಗೆ ದೂರು ನೀಡಿರುವೆ. ಈ ಬಗ್ಗೆ ಸ್ಪೀಕರ್ ಗಮನಕ್ಕೂ ತಂದಿರುವೆ ಎಂದು ತಿಳಿಸಿದರು.

Key words: 139 MLAs – not – any- lures – MLA -Ganiga Ravikumar.