ನರ್ಮದಾ ನದಿಗೆ ಬಸ್ ಉರುಳಿ 13 ಮಂದಿ ಸಾವು.

ಭೂಪಾಲ್,ಜುಲೈ,18,2022(www.justkannada.in): ನರ್ಮದಾ ನದಿಗೆ ಬಸ್ ಉರುಳಿ 13 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧರ್ ಎಂಬಲ್ಲಿ ನಡೆದಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದ  ಸರ್ಕಾರಿ ಬಸ್  ಮಧ್ಯಪ್ರದೇಶದ ಧರ್ ಎಂಬಲ್ಲಿ ನರ್ಮದಾ ನದಿಗೆ ಉರುಳಿ ಈ ದುರ್ಘಟನೆ ಸಂಭವಿಸಿದೆ. ಬಸ್‌ ನಲ್ಲಿ ಸುಮಾರು 50 ರಿಂದ 60 ಪ್ರಯಾಣಿಕರಿದ್ದರು. ಬಸ್ ನಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.

ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಸುಮಾರು 10 ಅಡಿ ಎತ್ತರದಿಂದ ಬಸ್ ನದಿಗೆ ಬಿದ್ದಿದೆ ಎನ್ನಲಾಗಿದೆ. ನದಿಯಲ್ಲಿ ಪ್ರವಾಹದ ಸೆಳೆತ ಹೆಚ್ಚಾಗಿದ್ದ ಕಾರಣ 9 ಶವಗಳು ಕೊಚ್ಚಿ ಹೋಗಿವೆ. ಧಮ್​ನೊದ್ ಪೊಲೀಸ್​ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು.

Key words: 13 death- bus falls – Narmada- river.