ರಾಜ್ಯದಲ್ಲಿ ಇಂದು 12 ಒಮಿಕ್ರಾನ್ ಪ್ರಕರಣಗಳು ಪತ್ತೆ.

ಬೆಂಗಳೂರು,ಡಿಸೆಂಬರ್,23,2021(www.justkannada.in):  ಕೊರೋನಾ ರೂಪಾಂತರಿ ಒಮಿಕ್ರಾನ್ ಸೋಂಕು ದೇಶದಲ್ಲಿ ಹೆಚ್ಚುತ್ತಿದ್ದು ಈ ಮಧ್ಯೆ ಕರ್ನಾಟಕದಲ್ಲೂ ಸೋಂಕು ಕಾಣಿಸಿಕೊಂಡಿದೆ.

ಇಂದು ಒಂದೇ ದಿನ ರಾಜ್ಯದಲ್ಲಿ 12 ಒಮಿಕ್ರಾನ್ ಸೋಂಕು ಪ್ರಕರಣ ಕಂಡು ಬಂದಿದೆ. ಈ ಮೂಲಕ ಒಮಿಕ್ರಾನ್ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10, ಮೈಸೂರು ಮತ್ತು ಮಂಗಳೂರಿನಲ್ಲಿ ತಲಾ ಒಂದೊಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ.

ಮೈಸೂರಿನಲ್ಲಿ 9 ವರ್ಷದ ಬಾಲಕಿಗೆ ಒಮಿಕ್ರಾನ್ ತಗುಲಿದರೇ ಮಂಗಳೂರಿನಲ್ಲಿ 27 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಒಂದೇ ಅಪಾರ್ಟ್ ಮೆಂಟ್ ನಲ್ಲಿ  ನಾಲ್ವರಿಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಯುಕೆಯಿಂದ ಬಂದಿದ್ಧ  ಮಗಳಿಂದ ಕುಟುಂಬಸ್ಥರಿಗೆ ಒಮಿಕ್ರಾನ್ ತಗುಲಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

Key words: 12 Omicron -cases -detected – state -today.