ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 12 ಮಂದಿ ಸಾವು,1,325 ಮಂದಿಗೆ ಸೋಂಕು 

ಬೆಂಗಳೂರು,ಡಿಸೆಂಬರ್,06,2020(www.justkannada.in) : ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 12 ಮಂದಿ ಸಾವಿಗೀಡಾಗಿದ್ದಾರೆ ಮತ್ತು 1,325 ಹೊಸ ಸೋಂಕಿತರು ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿದ್ದಾರೆ.

logo-justkannada-mysore

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಸಂಜೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 12 ಜನ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,325 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 11,846 ಮಂದಿ ಸತ್ತಿದ್ದು, ಸೋಂಕಿತರ ಸಂಖ್ಯೆ 8,91,685 ಮಂದಿಗೆ ಏರಿಕೆಯಾಗಿದೆ.

12 deaths-1,325 infections-coronavirus-state

ಸೋಂಕಿತರ ಪೈಕಿ 8,54,861 ಮಂದಿ ಗುಣಮುಖರಾಗಿದ್ದಾರೆ. ಉಳಿದ 24,959 ಮಂದಿ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

key words : 12 deaths-1,325 infections-coronavirus-state