11,157.83 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ ಬಿಬಿಎಂಪಿ: ಹಲವು  ಯೋಜನೆಗಳಿಗೆ ಹಣ ಮೀಸಲು.

ಬೆಂಗಳೂರು,ಮಾರ್ಚ್,2,2023(www.justkannada.in):  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ ಬಜೆಟ್ ಇಂದು ಮಂಡನೆಯಾಗಿದ್ದು, ಹಲವು ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್‌ ಮಂಡನೆ ಮಾಡಿದರು. ಈ ಬಾರಿ 11,157.83 ಕೋಟಿ ರೂ ಮೊತ್ತದ ಬಜೆಟ್ ಮಂಡನೆಯಾಗಿದೆ.  ಇದು ಆತ್ಮನಿರ್ಭರ ಆಯವ್ಯಯ ಎಂದು ಬಿಬಿಎಂಪಿ ಘೋಷಣೆ ಮಾಡಿದೆ.

ಬಜೆಟ್ ನಲ್ಲಿ ಘೋಷಣೆಯಾದ ಕಾರ್ಯಕ್ರಮಗಳು ಹೀಗಿವೆ.

ಒಟ್ಟು 11,157.83 ಗಾತ್ರದ ಬಜೆಟ್ ಮಂಡನೆ‌ ಮಾಡಿದ್ದು, ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ ರೂ. ಹಾಗೂ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕಾಗಿ ಒಟ್ಟು 210 ಕೋಟಿ ರೂ ನೀಡಿದೆ. ಬೀದಿ ಮರಗಳ ನೆಡುವಿಕೆಗೆ ಮತ್ತು ನಿರ್ವಹಣೆಗಾಗಿ 40 ಕೋಟಿ ರೂಪಾಯಿ ಮೀಸಲು. ಬಿ ಖಾತೆ ನಿರ್ವೇಶನಗಳನ್ನ ಕ್ರಮಬದ್ಧಗೊಳಿಸಿ ಎ ಖಾತೆ ನೀಡುವ ಯೋಜನೆ ಈ ವರ್ಷವೇ ಆರಂಭವಾಗಲಿದೆ.

ಮಹಿಳೆಯರಿಗಾಗಿ ನಗರದಲ್ಲಿ 250 ಶೀ ಟಾಯ್ಲೆಟ್ ನಿರ್ಮಾಣ ಮಾಡುವುದು. ಬೆಂಗಳೂರಿನಲ್ಲಿ  ಈ ವರ್ಷ 4 ಮೇಲ್ಸೇತುವೆ ನಿರ್ಮಾಣ, ಪಾದಚಾರಿ ಸುರಂಗ ಮಾರ್ಗಗಳಿಗೆ 20 ಕೋಟಿ ರೂ. ಮೀಸಲು.   2000 ಮನೆ ನಿರ್ಮಾಣಕ್ಕೆ  100 ಕೋಟಿ  ರೂ. ಮೀಸಲು.  ಪಾಲಿಕೆಯ ವ್ಯಾಪ್ತಿಯ ಹೈಟೆಕ್ಲ್ ಲ್ಯಾಬ್ ಸ್ಥಾಪನೆ ಮಾಡುವುದು,  ರೇಬಿಸ್ ಲಸಿಕೆಗೆ 20 ಕೋಟಿ ರೂ ಮೀಸಲು.  ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ 5 ಕೋಟಿ ರೂ. ವೆಚ್ಚದಲ್ಲಿ ಕ್ರಿಮೇಟೋರಿಯಂ ನಿರ್ಮಾಣ ಮಾಡುವ ಬಗ್ಗೆ ಬಜೆಟ್ ನಲ್ಲಿ ಘೋಷಣೆಯಾಗಿದೆ.

ಸದಾಶಿನಗರ ಠಾಣೆ ವೃತ್ತದಲ್ಲಿ 40 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ, ಬೈಯ್ಯಪ್ಪನಹಳ್ಳಿಯಲ್ಲಿರುವ ಸರ್​ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಫ್ಲೈಓವರ್,  1,410 ಕೋಟಿ ವೆಚ್ಚದಲ್ಲಿ 150 ಕಿ.ಮೀ.​​ ರಸ್ತೆಗೆ ವೈಟ್ ಟಾಪಿಂಗ್. 345 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಫ್ಲೈಓವರ್​ ನಿರ್ಮಾಣ. 75 ಜಂಕ್ಷನ್​​ಗಳ ಅಭಿವೃದ್ಧಿಗೆ 150 ಕೋಟಿ ರೂಪಾಯಿ ಮೀಸಲಿಡುವ ಬಗ್ಗೆ ಬಜೆಟ್ ನಲ್ಲಿ ತಿಳಿಸಲಾಗಿದೆ.

ಸಿಗ್ನಲ್ ಮುಕ್ತ ಕಾರಿಡಾರ್​ಗಾಗಿ 70 ಕೋಟಿ ರೂಪಾಯಿ ಮೀಸಲು. ಯಶವಂತಪುರ ರೈಲ್ವೆ ನಿಲ್ದಾಣ ಬಳಿ ಕೆಳ‌ಸೇತುವೆಗಾಗಿ 125 ಕೋಟಿ

ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 80 ಕೋಟಿ ರೂ. ಮೀಸಲು, ಜನವಸತಿ ಪ್ರದೇಶಗಳಲ್ಲಿ 10 ಹೊಸ ಸಿಟಿ ಪ್ಲಾಜಾಗಳ ನಿರ್ಮಾಣ ಮಾಡುವುದು ಸೇರಿ ಹಲವು ಯೋಜನೆಗಳನ್ನ ಘೋಷಣೆ ಮಾಡಲಾಗಿದೆ.

Key words: 11,157.83 crores-BBMP – budget – amount