ತಾಯಿ ಮೊಬೈಲ್ ಕೊಡಲಿಲ್ಲವೆಂದು ನೇಣಿಗೆ ಶರಣಾದ 10 ನೇ ತರಗತಿ ವಿದ್ಯಾರ್ಥಿನಿ

 

ಬೆಂಗಳೂರು, ಸೆ.15, 2019 : (www.justkannada.in news) ಮೊಬೈಲ್ ನಲ್ಲಿ ಯಾವಾಗಲೂ ಟಿಕ್-ಟಾಕ್ ಆಪ್ ವೀಕ್ಷಿಸುವ ಗೀಳು ಹೊಂದಿದ್ದ ಮಗಳಿಗೆ, ತಾಯಿ ಬುದ್ಧಿ ಮಾತು ಹೇಳಿ ಮೊಬೈಲ್ ಕೊಡಲು ನಿರಾಕರಿಸಿದ್ದರಿಂದ ಬೇಸರಗೊಂಡ ಮಗಳು ನೇಣಿಗೆ ಶರಣಾದ ಘಟನೆ ನಡೆದಿದೆ.
ಪ್ರಿಯಾಂಕ(16) ನೇಣಿಗೆ ಶರಣಾಗಿರುವ ಬಾಲಕಿ. ಮೃತ ಬಾಲಕಿ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿನಿ. ಹನುಮಂತ ‌ನಗರದ 9ನೇ ರಸ್ತೆಯಲ್ಲಿ ನಡೆದಿರುವ ಘಟನೆ.

ಘಟನೆ ಹಿನ್ನೆಲೆ :

ಶನಿವಾರ ಸಂಜೆ ಸ್ನೇಹಿತೆ ಮನೆಗೆ ಹೋಗುವಾಗ ಬಾಲಕಿ ಪ್ರಿಯಾಂಕ ಮೊಬೈಲ್ ತೆಗೆದುಕೊಂಡು ಹೋಗಲು ಮುಂದಾದಳು.ಆಗ ಮೊಬೈಲ್ ತೆಗೆದುಕೊಂಡು ಹೋಗದಂತೆ ಪ್ರಿಯಾಂಕ ತಾಯಿ ಬುದ್ದಿ ಹೇಳಿದ್ದರು. ಇದೇ ವಿಚಾರಕ್ಕೆ ತಾಯಿಯೊಂದಿಗೆ ಸಣ್ಣ ಜಗಳ ಮಾಡಿಕೊಂಡಿದ್ದ ಪ್ರಿಯಾಂಕ.
ಮೊಬೈಲ್ ಕೊಡಲಿಲ್ಲ ಅಂತ ಸ್ನೇಹಿತೆ ಮನೆಗೆ ಹೋಗದೆ ರೂಂ ಸೇರಿದ್ದ ಪ್ರಿಯಾಂಕ. ತಾಯಿ ದೇವಸ್ಥಾನಕ್ಕೆ ಹೋಗಿದ್ದಾಗ ಪ್ರಿಯಾಂಕ ನೇಣಿಗೆ ಶರಣು. ಹನುಮಂತ ನಗರ ಠಾಣೆಯಲ್ಲಿ ದೂರು ದಾಖಲು.

 

key words : 10th-standerd-student-suicide-for-not-given-mobile-phone