Friday, August 14, 2026

BDA Apartments

Home Front Page ಕೃಷ್ಣಾನದಿಗೆ  1.14 ಲಕ್ಷ ಕ್ಯೂಸೆಕ್‌ ನೀರು ರಿಲೀಸ್.

ಕೃಷ್ಣಾನದಿಗೆ  1.14 ಲಕ್ಷ ಕ್ಯೂಸೆಕ್‌ ನೀರು ರಿಲೀಸ್.

ಬೆಳಗಾವಿ.ಜುಲೈ,24,2023(www.justkannada.in):  ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗಿದ್ದು, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 1.14  ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊಯ್ನಾ ಜಲಾಶಯ ಪ್ರದೇಶ 150 ಮಿಮೀ,  ಮಹಾಬಳೇಶ್ವರ 185 ಮಿಮೀ, ನವಜಾ 201ಮಿಮೀ ಮಳೆಯಾಗುತ್ತಿದ್ದು,  ಕೊಯ್ನಾ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ  ಕೊಯ್ನಾ ಜಲಾಶಯದಿಂದ  ಕೃಷ್ಣಾ ನದಿಗೆ 1 ಲಕ್ಷ 14 ಸಾವಿರ ಕ್ಯೂಸೆಕ್‌ಕ್ಕಿಂತ ಹೆಚ್ಚು ನೀರು ಬಿಡಲಾಗುತ್ತಿದೆ. ಈ ಮೂಲಕ ಕೃಷ್ಣಾ ನದಿಗೆ ಒಳಹರಿವು ಹೆಚ್ಚಳವಾಗಿದೆ.

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 9 ಕೆಳಹಂತದ ಸೇತುವೆಗಳ ಜಲಾವೃತವಾಗಿದ್ದು, ಕುಡಚಿ – ಉಗಾರ ಸೇತುವೆ ಮುಳುಗಡೆ ಹಂತ ತಲುಪಿದೆ. ಕುಡಚಿ – ಉಗಾರ ಸೇತುವೆ ಮುಳುಗಡೆಗೆ ಕೇವಲ 5 ಅಡಿ ಮಾತ್ರ ಬಾಕಿ ಇದೆ.

Key words: 1.14 lakh- cusec- water- release – Krishna river.