ಹೊಸ ಸಂಪ್ರದಾಯಕ್ಕೆ ನಾಂದಿ: ಕಬಿನಿ ಜಲಾಶಯಕ್ಕೆ ಕೊನೆಗೂ ‘ಬಾಗಿನ ಭಾಗ್ಯ’

ಮೈಸೂರು,ಜುಲೈ,19,2025 (www.justkannada.in): ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಹೊಂದಿರುವ  ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಕೊನೆಗೂ ಬಾಗಿನ ಭಾಗ್ಯ ಲಭಿಸಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಈ ಮೂಲಕ ಸರ್ಕಾರ, ಜಿಲ್ಲಾಡಳಿತ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ. ಕೆ ಆರ್ ಎಸ್, ಕಬಿನಿಗೆ ಒಂದೇ ದಿನ ಬಾಗಿನ ಅರ್ಪಿಸುತ್ತಿದ್ದ ವಾಡಿಕೆ ಇತ್ತು. ಆದರೆ ರೈತರು, ಹೋರಾಟಗಾರರ ಪ್ರತಿಭಟನೆಗೆ ಹೆದರಿ ಸರ್ಕಾರ ಬಾಗಿನ ಕಾರ್ಯಕ್ರಮ ಮುಂದೂಡಿತ್ತು.

ಕಬಿನಿ ಹಿನ್ನೀರಿನಲ್ಲಿ ಅಕ್ರಮ ರೆಸಾರ್ಟ್ ಗಳ ಕಾರ್ಯಚಟುವಟಿಕೆ, ಕಬಿನಿ ಜಲಾಶಯದಲ್ಲಿ ಕಾಣಿಸಿಕೊಂಡಿದ್ದ ಬಿರುಕು, ಕಬಿನಿಯ ಸುಭಾಷ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಕ್ರಮ ಈ ಎಲ್ಲಾ ಹಲವು ಅಕ್ರಮಗಳ ಕುರಿತು ರೈತರು ದನಿ ಎತ್ತಿದ್ದರು. ಜಾಲತಾಣದಲ್ಲೂ ಕಬಿನಿ ಉಳಿಸಿ ಎಂಬ ಅಭಿಯಾನವನ್ನ ಯುವಪಡೆ ಆರಂಭಿಸಿದ್ದರು. ಈ‌ ಹಿನ್ನೆಲೆ ಜಲಾಶಯಕ್ಕೆ ಬಾಗಿನ  ಅರ್ಪಿಸುವ ಕಾರ್ಯಕ್ರಮವನ್ನ ತಾಲ್ಲೂಕು ಆಡಳಿತ ಕೈಬಿಟ್ಟಿತ್ತು. ಇದೀಗ ನಾಳೆ ಸಿಎಂ ಸಿದ್ದರಾಮಯ್ಯ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.vtu

Key words: CM Siddaramaiah, Bagina, Kabini reservoir, tomorrow