ಹಿರಿಯ ನಟ ಶಿವರಾಂ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ.

kannada t-shirts

ಬೆಂಗಳೂರು,ಡಿಸೆಂಬರ್,4,2021(www.justkannada.in):  ಕನ್ನಡ ಹಿರಿಯ ನಟ ಶಿವರಾಂ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಹಿರಿಯ ನಟ ಶಿವರಾಂ ನಿಧನ ದುಃಖದ ವಿಷಯ. ಅವರ ನಿಧನ ದುಃಖ ತರಿಸಿದೆ. ಕನ್ನಡ ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ. ಶಿವರಾಂ ಅವರ ಆತ್ಮಕ್ಕೆ ಶಾಂತಿ ಸಿಗಲಿ.  ಶಿವರಾಂ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದರು.

ಇನ್ನು ಶಿವರಾಂ ಅವರ ಪಾರ್ಥೀವ ಶರೀರವನ್ನ ಪ್ರಶಾಂತ್ ಆಸ್ಪತ್ರೆಯಿಂದ ತ್ಯಾಗರಾಜನಗರ ನಿವಾಸಕ್ಕೆ ಸ್ಥಳಾಂತರಿಸಲಾಗಿದ್ದು ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

Key words: CM -Bommai – Condolences- death -veteran actor -Sivaram

 

website developers in mysore