ವಿಧಾನಪರಿಷತ್ ಚುನಾವಣೆ: ಈ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಜೆಡಿಎಸ್.

0
1

ಚಿಕ್ಕಬಳ್ಳಾಪುರ,ನವೆಂಬರ್ ,26,2021(www.justkannada.in):  ಡಿಸೆಂಬರ್ 10 ರಂದು ನಡೆಯುವ 25 ಸ್ಥಾನಗಳ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಈಗಾಗಲೆ ಕೊನೆಗೊಂಡಿದ್ದು ನಾಮಪತ್ರ ಪರಿಶೀಲನೆ ನಡೆಯುತ್ತಿದೆ. ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಈ ಮಧ್ಯೆ ಕೊಡಗು ಕಣದಿಂದ ಜೆಡಿಎಸ್ ಹಿಂದೆ ಸರಿದಿದೆ.

ಹೌದು ಕೊಡಗು ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್ ಹಿಂದೆ ಸರಿದಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಣದಿಂದ ಹಿಂದೆ ಸರಿಯವಂತೆ ಸೂಚನೆ ನೀಡಿದ್ದೇನೆ. ನಾನೇ ಕೊಡಗಿಗೆ ಅಭ್ಯರ್ಥಿ ಹಾಕದಂತೆ ಸೂಚಿಸಿದ್ಧೆ ಎಂದಿದ್ದಾರೆ.

ಈ ಮೂಲಕ 25 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ಅಭ್ಯರ್ಥಿ ಹಾಕಿರುವ ಜೆಡಿಎಸ್ ಇದೀಗ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಈಗ 6 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Key words: Legislative council- elections-JDS –withdraw-competition -kodagu