ನಾಳೆ ಪತ್ರಕರ್ತ ಶಿವಮೂರ್ತಿ ಜುಪ್ತಿಮಠ ವಿರಚಿತ ‘ಒಳಗಣ್ಣು’ ಕೃತಿ ಬಿಡುಗಡೆ.

0
1

ಮೈಸೂರು,ನವೆಂಬರ್,11,2021(www.justkannada.in):  ವಿಜಯ ಕರ್ನಾಟಕದ ಪತ್ರಕರ್ತ ಮೈಸೂರಿನ ಶಿವಮೂರ್ತಿ ಜುಪ್ತಿಮಠ ಬರೆದಿರುವ ಒಳಗಣ್ಣು ಕೃತಿ ಬಿಡುಗಡೆ ಕಾರ್ಯಕ್ರಮ ನ.13ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಮನಗುಂಡಿಯಲ್ಲಿ ನಡೆಯಲಿದೆ.

ಬಸವಾನಂದ ಸ್ವಾಮೀಜಿ ಸಾಧನೆ ಕುರಿತ ಈ ಕೃತಿಯನ್ನು ಶ್ರೀಗಳ ಜನ್ಮದಿನದ ಸುವರ್ಣ ಮಹೋತ್ಸವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೋಕಾರ್ಪಣೆಗೊಳಿಸುವರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸುವರು. ಸುತ್ತೂರು ಮಠದ‌ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸುವರು.

Key words: Journalist- Shivamoorthy Juptimath –book- olagannu-released- tomorrow