ಬೆಂಗಳೂರು,ಏಪ್ರಿಲ್,7,2026 (www.justkannada.in): ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ನಾವೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್, ಉಪಚುನಾವಣೆ ಎರಡೂ ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ. 3 ವರ್ಷಗಳ ಕಾಲ ಆಡಳಿತ ನಡೆಸಿದ್ದೇವೆ. ಆಡಳಿತ ನೋಡಿ ಕಾಂಗ್ರೆಸ್ ಬೆಂಬಲ ನೀಡುವ ಲಕ್ಷಣ ಕಾಣುತ್ತಿದೆ. 2 ಕ್ಷೇತ್ರದಲ್ಲೂ ಕೋಮುಗಲಭೆ ಸೃಷ್ಠಿಗೆ ಪ್ರಯತ್ನ ಮಾಡಿದ್ದರು. ಆದರೆ ಕೋಮುಗಲಭೆ ಮಾಡುವುದಕ್ಕೆ ಅವರಿಗೆ ಆಗಲಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂಸೆ, ದ್ವೇಷ ಕೊಲೆ ಆಗುತ್ತಿತ್ತು. ಈಗ ಶಾಂತಿ ನೆಮ್ಮದಿಯಿಂದ ಜನ ಬದುಕುತ್ತಿದ್ದಾರೆ ಎಂದರು.
ದಾವಣಗೆರೆಯಲ್ಲಿ ಮುಸ್ಲೀಮರಿಗೆ ಟಿಕೆಟ್ ಕೈತಪ್ಪಿದ ವಿಚಾರ, ಅಲ್ಪಸಂಖ್ಯಾತರ ಸೀಟ ತೆಗೆದು ಬೇರೆಯವರಿಗೆ ಕೊಟ್ಟದ್ದರೆ ತಪ್ಪಾಗುತ್ತಿತ್ತು ಈಗ ಬಹುಸಂಖ್ಯಾತರ ಸೀಟನ್ನು ತೆಗೆದು ಬಹುಸಂಖ್ಯಾತರಿಗೆ ಕೊಟ್ಟಿದ್ದೇವೆ ಅದ್ದರಿಂದ ಯಾರು ಯಾವುದೇ ರೀತಿ ತಪ್ಪು ಅರ್ಥ ತಿಳಿದುಕೊಳ್ಳುವಿದಿಲ್ಲ ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.
Key words: People, support, win, both, constituencies, B.K. Hariprasad







