Sunday, August 9, 2026

BDA Apartments

Home Front Page ಜಾತ್ಯಾತೀತ ಶಕ್ತಿಗಳನ್ನೇ ನಿರ್ನಾಮ ಮಾಡಬೇಕೆಂಬ ನಡವಳಿಕೆ ಕಾಂಗ್ರೆಸ್ ನವರದ್ದು- ಮಾಜಿ ಸಿಎಂ ಹೆಚ್.ಡಿಕೆ ಕಿಡಿ.

ಜಾತ್ಯಾತೀತ ಶಕ್ತಿಗಳನ್ನೇ ನಿರ್ನಾಮ ಮಾಡಬೇಕೆಂಬ ನಡವಳಿಕೆ ಕಾಂಗ್ರೆಸ್ ನವರದ್ದು- ಮಾಜಿ ಸಿಎಂ ಹೆಚ್.ಡಿಕೆ ಕಿಡಿ.

ರಾಮನಗರ,ಡಿಸೆಂಬರ್,10,2021(www.justkannada.in):  ಕಾಂಗ್ರೆಸ್ ನಡವಳಿಕೆ ಹೊರ‌ನೋಟಕ್ಕೆ ಜಾತ್ಯತೀತ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿಯ ವಾತಾವರಣ ಇಲ್ಲ. ಜಾತ್ಯತೀತ ಶಕ್ತಿಗಳನ್ನೇ ನಿರ್ನಾಮ ಮಾಡಬೇಕೆಂಬ ನಡವಳಿಕೆ ಅವರದ್ದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಮನಗರದಲ್ಲಿ ಇಂದು ಮಾಧ್ಯಮಗಳಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬೆಂಬಲ ಕೊಟ್ಟಂತೆ ಮಾಡಿ ಕುತ್ತಿಗೆ ಕೊಯ್ಯುವುದೇ ಇವರ ಕೆಲಸ. ಈ ರೀತಿ ನನಗೆ ಎರಡು ಮೂರು ಬಾರಿ ಅನುಭವವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ದೇವೇಗೌಡರು ಪ್ರಧಾನಿ ಆಗಿದ್ದು ಕಾಂಗ್ರೆಸ್ ನಿಂದ ಎನ್ನುತ್ತಾರೆ. ಆದರೆ  ದೇವೇಗೌಡರು ಪ್ರಧಾನಿ ಮಾಡಿ ಎಂದು ಅರ್ಜಿ‌ ಇಟ್ಟುಕೊಂಡು ಹೋಗಿದ್ರಾ. ನಾನು ಮುಖ್ಯಮಂತ್ರಿ ಆದಾಗ ಕಾಂಗ್ರೆಸ್ ಮುಂದೆ ಅರ್ಜಿ ಇಟ್ಟುಕೊಂಡು ಹೋಗಿದನ್ನಾ. ನಮ್ಮನ್ನ ಬೆಂಬಲ ಕೊಟ್ಟಾಗೆ ಮಾಡಿ ಕುತ್ತಿಗೆ ಕುಯ್ಯುವುದೇ ಇವರ ಕೆಲಸ ಎಂದು ಹೆಚ್.ಡಿಕೆ ಕಿಡಿಕಾರಿದರು.

ಆರು ವಿಧಾನಪರಿಷತ್ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಹೆಚ್.ಡಿಕೆ, ಒಂದು ವರ್ಷದ ಅವಧಿಯಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ಎಂದು ಯಾರು ನಿರೀಕ್ಷೆ ‌ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ನಮಗೆ ವೈಯಕ್ತಿಕವಾಗಿ ಮನವಿ ಮಾಡಿದ್ದು ಅಷ್ಟೇ. ಎಲ್ಲಿ ನಿಮ್ಮ ಅಭ್ಯರ್ಥಿಗಳು ಇಲ್ಲವೂ ಬಿಜೆಪಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದರು. ಅದು ಅವರ ದೊಡ್ಡತನ ತೋರಿಸಿದೆ. ಯಡಿಯೂರಪ್ಪ ಕೃತಜ್ಞತೆ ಸಲ್ಲಿಸುವ ಔದಾರ್ಯ ತೋರಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸೌಜನ್ಯವೂ ಇಲ್ಲ ಎಂದು ಹರಿಹಾಯ್ದರು.

Key words: behavior – Congress – destroy – secular-Former CM HD Kumaraswamy