Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಕೇಂದ್ರದವರು ಏರಿಸೋದು ನಾವು ಕಡಿಮೆ ಮಾಡೋದಾ? ಸಿಎಂ ಸಿದ್ದರಾಮಯ್ಯ ಕಿಡಿ

ಕೇಂದ್ರದವರು ಏರಿಸೋದು ನಾವು ಕಡಿಮೆ ಮಾಡೋದಾ? ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು,ಮೇ,21,2026 (www.justkannada.in):  ಕೇಂದ್ರ ಸರ್ಕಾರದಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ,  ಕೇಂದ್ರ ಸರ್ಕಾರದವರು ಏರಿಸೋದು ನಾವು ಕಡಿಮೆ ಮಾಡೋದಾ? ಡಾ. ಮನ್ ಮೋಹನ್ ಸಿಂಗ್ ಅವಧಿಯಲ್ಲಿ ಪೆಟ್ರೋಲ್ 70 ರೂ, ಡೀಸೆಲ್ 48 ರೂ. ಇತ್ತು. ಯುಪಿಎ ಅವಧಿಯಲ್ಲಿ ಗ್ಯಾಸ್ ಬೆಲೆ 414 ರೂ.  ಇತ್ತು ಈಗ ಎಷ್ಟಿದೆ? ಎಂದು ಪ್ರಶ್ನಿಸಿದರು.

ಜನರಿಗೆ ರಾಜ್ಯ ಸರ್ಕಾರ ಏನಾದರೂ ಸಹಾಯ ಮಾಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ನಮಗೆ ತೆರಿಗೆ ಕಡಿಮೆ ಮಾಡಿ ಅಂತಾ ಯಾಕೆ ಪ್ರಶ್ನೆ ಮಾಡುತ್ತೀರಾ? ನೀವು ಪ್ರಶ್ನೆ ಕೇಳುವುದರಲ್ಲೇ ಗೊತ್ತಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು.ಕೇಂದ್ರದವರು ಏರಿಸೋದು ನಾವು ಕಡಿಮೆ ಮಾಡೋದಾ? ಸಿಎಂ ಸಿದ್ದರಾಮಯ್ಯ ಕಿಡಿ jk02_new jk02 new

Key words: petrol, diesel, Rate, Hike, Central Government, CM Siddaramaiah