ಕಾಂಗ್ರೆಸ್ ಅನ್ನು ಜೆಡಿಎಸ್‌ ಗೆ ಅಡ ಇಟ್ಟು ಚುನಾವಣೆ ಮಾಡಬೇಕಿರಲಿಲ್ಲ: ತನ್ವೀರ್ ಸೇಠ್  ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪಾಲಿಕೆ ಸದಸ್ಯ ಅಯೂಬ್ ಖಾನ್…

kannada t-shirts

 

ಮೈಸೂರು,ಫೆಬ್ರವರಿ,26,2021(www.justkannada.in):   ಮೈಸೂರು ಮಹಾನಗರ ಪಾಲಿಕೆ ಮೇಯರ್ –ಉಪಮೇಯರ್ ಚುನಾವಣೆಯಲ್ಲಿ ತನ್ವೀರ್ ಸೇಠ್ ನಮ್ಮ ನಾಯಕರ ವಿರುದ್ಧವೇ ತೀರ್ಮಾನ ಕೈಗೊಂಡರು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯ ಅಯೂಬ್ ಖಾನ್ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಆಯುಬ್ ಖಾನ್  , ಮೈಸೂರು ಮೇಯರ್ ಚುನಾವಣೆಯಲ್ಲಿ ಕೊನೆ ಹಂತದಲ್ಲಿ ಏನಾಯ್ತು ? ಎಂಬುದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು. ಬಿಜೆಪಿ ಅಧಿಕಾರದಿಂದ ದೂರ ಇಡಬೇಕಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಮೇಯರ್ ಆಗಬೇಕು ಅಂತ ಹೇಳಿದ್ದರು.  ಆದರೆ ತನ್ವೀರ್ ಸೇಠ್ ನಮ್ಮ ನಾಯಕರ ವಿರುದ್ಧವೇ ತೀರ್ಮಾನ ಕೈಗೊಂಡರು.  ಕಾಂಗ್ರೆಸ್ ಅನ್ನು ಜೆಡಿಎಸ್‌ಗೆ ಅಡ ಇಟ್ಟು ಚುನಾವಣೆ ಮಾಡಬೇಕಿರಲಿಲ್ಲ. ತನ್ವೀರ್ ಅವರ ಮನೆ ಮುಂದೆ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದರ ವಿರುದ್ಧ ಕೆಪಿಸಿಸಿ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

12 ಬಾರಿ ಕಾಲ್ ಮಾಡಿದ್ರೂ.ರಿಸೀವ್ ಮಾಡಲಿಲ್ಲ.

ತನ್ವೀರ್ ಅವರು 5 ಬಾರಿ ಶಾಸಕರಾಗಿದ್ದವರು.  ನಮ್ಮ ಪಕ್ಷದ ನಾಯಕರ ನಿಲುವಿನ ವಿರುದ್ಧ ನಿರ್ಧಾರ ಕೈಗೊಂಡಿದ್ದರು.  ಅದು ತನ್ವೀರ್ ಸೇಠ್ ಅವರ ಏಕಪಕ್ಷೀಯ ತೀರ್ಮಾನ. ಈ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರು ತನ್ವೀರ್ ಸೇಠ್ ಅವರಿಗೆ ಕರೆ ಮಾಡಿದ್ದಾರೆ. ಬರೋಬ್ಬರಿ 12 ಬಾರಿ ಕಾಲ್ ಮಾಡಿದ್ದಾರೆ. ಆದರೆ ರಿಸೀವ್ ಮಾಡಲಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂಬುದು ನಮ್ಮ ನಾಯಕರ ತೀರ್ಮಾನವಲ್ಲ.  ತನ್ವೀರ್ ಅವರು ಸಿದ್ದರಾಮಯ್ಯ ಋಣ ತೀರಿಸಬೇಕಿತ್ತು.  ಆದರೆ ಕಾಂಗ್ರೆಸ್ ಮೇಯರ್ ಅಭ್ಯರ್ಥಿಗೆ ಒಬ್ಬರೂ ಮತ ಹಾಕದಂತೆ ಮಾಡಿದರು.  ಅವರ ವಿರುದ್ಧ ಕಾಂಗ್ರೆಸ್ ನಾಯಕರು ಕ್ರಮ ಕೈಗೊಳ್ಳಬೇಕು ಎಂದು ಅಯೂಬ್ ಖಾನ್  ಒತ್ತಾಯಿಸಿದರು.

ತನ್ವೀರ್ ಸೇಠ್ ರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು- ಪಾಲಿಕೆ ಸದಸ್ಯ ಆರೀಫ್ ಹುಸೇನ್…

ಶಾಸಕ ತನ್ವೀರ್ ಸೇಠ್  ವಿರುದ್ಧ ಕಿಡಿಕಾರಿದ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಆರೀಫ್ ಹುಸೇನ್, ತನ್ವೀರ್ ಸೇಠ್ ರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ತನ್ವೀರ್ ಸೇಠ್ ಮೇಲೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.Yatnal's -come - Congress MLA- Tanveer Sait-mysore

ನಮ್ಮ ಜೊತೆ ಇದ್ದ ಎರಡು ಪಾಲಿಕೆ ಸದಸ್ಯರನ್ನ ಜೆಡಿಎಸ್ ಗೆ ಮಾರಟ ಮಾಡಿದ್ರು. ಇನ್ನೂ ಇಬ್ಬರನ್ನ ಮಾರಟ ಮಾಡಲು ಟ್ರೈ ಮಾಡಿದ್ರು. ನಾವು ತನ್ವೀರ್ ಸೇಠ್ ರನ್ನ ನಂಬಿ ಕುಮಾರಸ್ವಾಮಿ ಜೊತೆ ಮಾತುಕತೆಗೆ ಕಳುಹಿಸಿದ್ರು. ಕುಮಾರಸ್ವಾಮಿ ಒಂದು ಕಡೆ ಬಿಜೆಪಿಯವರನ್ನ ಮತ್ತೊಂದರಲ್ಲಿ ತನ್ವೀರ್ ಸೇಠ್ ಕೂರಿಸಿ‌ ಡೀಲ್ ಗೆ ಮುಂದಾದ್ರೂ. ಆ ಕಡೆ ಡೀಲ್ ಆಗಲಿಲ್ಲ ಈ ಕಡೆ ಡೀಲ್ ಆಯ್ತೂ. ಸಿದ್ದರಾಮಯ್ಯ ತನ್ವೀರ್ ಸೇಠ್ ನಂಬಿ ಚುನಾವಣೆ ಜವಾಬ್ದಾರಿ ನೀಡಿದ್ರೂ. ಆದರೆ ಆಗಿದ್ದೆ ಬೇರೆ.

ಇವತ್ತು ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದ ಕುಮಾರಸ್ವಾಮಿ ತನ್ವೀರ್ ಸೇಠ್ ಷಡ್ಯಂತ್ರ. ನಾಲ್ಕು ಜನ ಕಟ್ಟಿಕೊಂಡು ರಾಜಕೀಯ ಮಾಡೋಕೆ ಆಗಲ್ಲ. ಆದರೆ ಇಡೀ ನಗತ ಕಾಂಗ್ರೆಸ್ ಸಿದ್ದರಾಮಯ್ಯ ಜೊತೆ ಇದೆ. ಸಿದ್ದರಾಮಯ್ಯ ಮುಗಿಸಲು ಕುಮಾರಸ್ವಾಮಿ ಜೊತೆ ಸೇರಿ ಮಾಡುತ್ತಿರೊ ಕೆಲಸ. ಸಿದ್ದರಾಮಯ್ಯ ರಿಂದ ಇಡೀ ಮುಸಲ್ಮಾನ ಜನಾಂಗ ರಾಜಕೀಯದಲ್ಲಿ ಆಕ್ಟೀವ್ ಆಗಿದೆ. ಯಾರೋ ಒಬ್ಬ ಮುಸಲ್ಮಾನ ಅಗಿ ಅವರ ವಿರುದ್ದ ಕೋಗಿದ್ರೆ ಮುಸಲ್ಮಾನ ರು ಸಿದ್ದರಾಮಯ್ಯ ರನ್ನ ವಿರೋಧಿಸೊಲ್ಲ. ಇಡೀ ದೇಶದ ಮುಸಲ್ಮಾನರ ನಾಯಕ ಸಿದ್ದರಾಮಯ್ಯ. ಪುಡೀ ಕಾಸಿಗೆ ಅವರ ವಿರುದ್ದ ಘೋಷಣೆ ಕೂಗಿತಿದ್ದಾರೆ. ತನ್ವೀರ್ ಸೇಠ್ ಎತ್ತಿ ಕಟ್ಟಿ ಸಿದ್ದರಾಮಯ್ಯ ವಿರುದ್ದ ಕೆಲಸ ಮಾಡಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಕೆಲಸ ಮಾಡೋಕಾಗಿ ಮಾಜಿ ಮುಖ್ಯಮಂತ್ರಿ ಇಲ್ಲಿ ಬಂದು ಚುನಾವಣೆಯಲ್ಲಿ ಭಾಗಿಯಾಗ್ಬೇಕಿತ್ತಾ ಎಂದು ಆರೀಫ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

Key words: Congress –JDS-mayor election-Ayub Khan-against- Tanveer Seth.

website developers in mysore