ಎಲ್ಲರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ- ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್…

ಬೆಂಗಳೂರು,ಮೇ,3,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ರೋಗಿಗಳು ಮೃತಪಟ್ಟ ವಿಚಾರ, ಎಲ್ಲರೂ ಆಕ್ಸಿಜನ್ ಕೊರತೆಯಿಂದ  ಮೃತಪಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.jk

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಸುರೇಶ್ ಕುಮಾರ್, ಕಳೆದ 24 ಗಂಟೆಗಳಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ರೋಗಿಗಳು ಮೃತಪಟ್ಟಿದ್ದಾರೆ.  ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತ ಪಟ್ಟಿಲ್ಲ. ನಿನ್ನೆ ಮಧ್ಯರಾತ್ರಿ ಆಕ್ಸಿಜನ್ ಕೊರತೆಯಾಗಿದೆ. ವೈದ್ಯರಿಂದ ಡೆತ್ ರಿಪೋರ್ಟ್ ಕೇಳಿದ್ದೇವೆ. 24 ಜನರ ಸಾವಿನ ಬಗ್ಗೆವೈದ್ಯರ ಬಳಿ ವರದಿ ಕೇಳಿದ್ದೇನೆ. ಯಾವ ಕಾರಣಕ್ಕೆ ಸಾವನ್ನಪ್ಪಿದ್ದರೆಂದು ವರದಿ ಕೇಳಿದ್ದೇವೆ ಎಂದರು. Not everyone -died - oxygen –deficiency- Chamarajanagar- in charge- Minister - Suresh Kumar,

24 ರೋಗಿಗಳು ಸಾವು, ಈ ದುರಂತ ವೇದನೆ ತಂದಿದೆ.ಈ ಘಟನೆ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸುಮಾರು 80 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದೇವೆ. 6,000 ಲೀಟರ್ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ ಮಾಡಿದ್ದೇವೆ. ಆದರೆ ಆಕ್ಸಿಜನ್ ಸಮಯಕ್ಕೆ ಬರದೇ ಸಮಸ್ಯೆಯಾಗಿದೆ. ನಮಗೆ ಮೈಸೂರಿನಿಂದ ಆಕ್ಸಿಜನ್ ಬರಬೇಕಿತ್ತು. ಆದರೆ ಅಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಅಲ್ಲಿಯೂ ಸಮಸ್ಯೆಯಿದೆ ಎಂಬ ಕಾರಣಕ್ಕೆ ನಮ್ಮ ಜಿಲ್ಲೆಗೆ ಆಕ್ಸಿಜನ್ ಪೂರೈಕೆ ನಿಲ್ಲಿಸಬಾರದು. ಚಾಮರಾಜನಗರಕ್ಕೆ ಬರುವ ಆಕ್ಸಿಜನ್ ಪೂರೈಸಬೇಕು ಎಂದು ಹೇಳಿದರು.

 

Key words: Not everyone -died – oxygen –deficiency- Chamarajanagar- in charge- Minister – Suresh Kumar,