Wednesday, August 5, 2026

BDA Apartments

Home Front Page ಸಿದ್ಧರಾಮಯ್ಯ, ಜಮೀರ್ ಅಹ್ಮದ್ ಖಾನ್ ಗೆ ಟಾಂಗ್: ಬಿಎಸ್ ವೈ ಹೊಗಳಿದ ಮಾಜಿ ಸಿಎಂ ಹೆಚ್.ಡಿ...

ಸಿದ್ಧರಾಮಯ್ಯ, ಜಮೀರ್ ಅಹ್ಮದ್ ಖಾನ್ ಗೆ ಟಾಂಗ್: ಬಿಎಸ್ ವೈ ಹೊಗಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಚಿಕ್ಕಬಳ್ಳಾಪುರ,ನವೆಂಬರ್,26,2021(www.justkanada.in):  ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಕೇಳಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಗಳಿಕೆ ಮಾತುಗಳನ್ನಾಡಿದ್ದಾರೆ.

ಬಿಎಸ್ ವೈ ಮನವಿ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ 6 ಕಡೆಗಳಲ್ಲಿ ಸ್ಪರ್ಧಿಸಿದೆ. ಹೀಗಾಗಿ ಜೆಡಿಎಸ್ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲಿಸುವಂತೆ  ಸಾರ್ವತ್ರಿಕವಾಗಿ ಬಿಎಸ್ ವೈ ಮನವಿ ಮಾಡಿದ್ದಾರೆ. ಅವರಲ್ಲಿ ಅಂತಹ ಒಳ್ಳೆಯ ಸಂಸ್ಕಾರ ನೋಡಿದ್ದೇವೆ ಎಂದು ಹೊಗಳಿದರು. ಅಲ್ಲದೆ ಯಾರನ್ನ ಬೆಂಬಲಿಸಬೇಕು ಎಂಬುದನ್ನ ತೀರ್ಮಾನಿಸುತ್ತೇವೆ ಎಂದರು.

ಹಾಗೆಯೇ ಇದೇ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ಪರೋಕ್ಷ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ,  ನಮ್ಮ ಪಕ್ಷದಿಂದ ಬೆಳೆದ ಒಂದಿಬ್ಬರು  ನಮ್ಮನ್ನೇ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಜಮೀರ್ ಅಹ್ಮದ್ ಖಾನ್ ಟೀಕಿಸಿದ್ದರು.

Key words: Tong – Siddaramaiah- Zamir Ahmad Khan-  Former CM -HD Kumaraswamy