ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ವಿರೋಧ: ಆದೇಶ ವಾಪಸ್ ಗೆ ಆಗ್ರಹ.

ಬೆಂಗಳೂರು.ಡಿಸೆಂಬರ್,2,2021(www.justkannada.in):  ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ಕೆಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.

ರಾಷ್ಟ್ರೀಯ ಲಿಂಗಾಯಿತ ಧರ್ಮ ಮತ್ತು ಮಹಾಸಭಾ ಬಸವ ಮಂಟಪದ ಜಗದ್ಗುರುಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.  ಕೋಳಿ ಮೊಟ್ಟೆ ಸಂಪೂರ್ಣ ಮಾಂಸಹಾರವಾಗಿದೆ. ಮೊಟ್ಟೆ ನೀಡುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. .  ಶಾಲೆಗಳಲ್ಲಿ ಮಕ್ಕಳಿಗೆ ಸರ್ವ ಸಮ್ಮತ ಆಹಾರ ನೀಡಬೇಕು. ಶಾಲೆಗಳಲ್ಲಿ ಮೊಟ್ಟೆ ಕೊಡುವುದರಿಂದ 2 ಗುಂಪು ರಚನೆಯಾಗುತ್ತೇ ಮಾಂಸಹಾರ ಸಸ್ಯಹಾರ ಎಂದು ಗುಂಪು ರಚನೆಯಾಗುತ್ತದೆ. ಹೀಗಾಗಿ ಆದೇಶವನ್ನ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶಿಕ್ಷಣ ಇಲಾಖೆ ಅಪೌಷ್ಟಿಕತೆ, ರಕ್ತಹೀನತೆ ಹೊಂದಿರುವ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾಗಿದ್ದು ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. 7 ಜಿಲ್ಲೆಗಳಿಗೆ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಣೆಗೆ ಮಾಡಲಾಗುತ್ತಿದ್ದು ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಆದ್ರೆ ಇದಕ್ಕೆ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.

Key words: Opposition – egg -project – government schools-return -order.

ENGLISH SUMMARY…

Scheme to provide eggs to students in schools opposed: Demand to withdraw order
Bengaluru, December 2, 2021 (www.justkannada.in): Several communities have opposed the State Government’s scheme to provide eggs to students in government schools.
The Jagadguru’s of the Rashtriya Lingayath Dharma and Mahasabha Basava Mantapa has opposed the scheme mentioning that eggs are pure non-vegetarian food. “Providing eggs to students in schools will hurt the religious sentiments. Food that is acceptable to all can be served for the students in schools. Providing eggs will result in the creation of two groups, vegetarians and non-vegetarians. Hence, we demand the government to immediately withdraw the order,” they have appealed.
The Education Department has issued an order to provide eggs to the students in government schools as a measure to nurture the children who are suffering from malnutrition and anemia, under the Pradhan Mantri Poshan Shakti Nirmal scheme. Accordingly, eggs are given to the students in seven districts of the State, and bananas are given to the students who won’t eat eggs. Several communities have opposed the scheme.
Keywords: Eggs/ Government school students/ communities/ oppose/ demand to withdraw order