ಸಚಿವರು ಸವಾಲೆಸೆದು ಕರೆದಾಗ ಸುಮ್ಮನೆ ಕೂರಲು ಆಗಲಿಲ್ಲ- ಕಿತ್ತಾಟದ ಬಗ್ಗೆ ಡಿ.ಕೆ ಸುರೇಶ್ ಸ್ಪಷ್ಟನೆ.

ರಾಮನಗರ,ಜನವರಿ,3,2021(www.justkannada.in):  ರಾಮನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ತಾವು ಮತ್ತು ಸಚಿವ ಅಶ್ವತ್ ನಾರಾಯಣ್ ನಡುವೆ ಉಂಟಾದ ವಾಕ್ಸಮರದ ಬಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಮಂತ್ರಿಗಳು ಮಂತ್ರಿಯಾಗಿ ಮಾತನಾಡಲಿಲ್ಲ. ಸಚಿವರ ಮಾತು ಸರಿ ಇರಲಿಲ್ಲ. ಸಚಿವರು ಸವಾಲೆಸೆದು ಕರೆದಾಗ ಸುಮ್ಮನೆ ಕೂರಲು ಆಗಲಿಲ್ಲ.  ಇದು ರಾಜ್ಯ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ ಆದರೆ ಇದು ಬಿಜೆಪಿ ಕಾರ್ಯಕ್ರಮದಂತಿತ್ತು.  ರಾಮನಗರ ಜಿ.ಪಂ ವತಿಯಿಂದ ಅನುದಾನ ಪಡೆದಿದ್ದಾರೆ.free rice - BPL card -holders - - Center- MP- DK Suresh

ಇಲ್ಲಿ ಹಾಕಿರು ಎಲ್ಲಾ ಕಲ್ಲುಗಳನ್ನ ನಾವು ತಂದಿದ್ದೇವೆ  ಎಲ್ಲಾ ಕೆಲಸಗಳನ್ನ ನಾವೇ ಮಾಡಿದ್ದೇವೆ ಎಂದು ವೇದಿಕೆಯಲ್ಲಿ ಸಚಿವರು ವಿರಾವೇಷ ಪ್ರದರ್ಶಿಸಿದ್ದಾಗ ಸುಮ್ಮನಿರಲು ಆಗಲಿಲ್ಲ. ಹೀಗಾಗಿ ಸಿಎಂ ಸಮ್ಮುಖದಲ್ಲೇ ಉತ್ತರ ಕೊಡ್ಡಿದ್ದೇವೆ ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: MP-DK Suresh -Minister -Ashwath Narayan – stage-in front – CM