ವಿಧಾನ ಪರಿಷತ್ ನ 14 ಕಾಂಗ್ರೆಸ್ ಸದಸ್ಯರು ಅಮಾನತು. 

ಬೆಳಗಾವಿ,ಡಿಸೆಂಬರ್,15,2021(www.justkannada.in):  ಸಭಾಪತಿ ಆದೇಶ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ವಿಧಾನ ಪರಿಷತ್‌ನ 14 ಮಂದಿ ಕಾಂಗ್ರೆಸ್‌ ಸದಸ್ಯರನ್ನು  ಅಮಾನತು ಮಾಡಲಾಗಿದೆ.

ಒಂದು ದಿನದ ಮಟ್ಟಿಗೆ 14 ಮಂದಿ ಕಾಂಗ್ರೆಸ್ ಸದಸ್ಯರನ್ನ ಅಮಾನತು ಮಾಡಿ  ಸಭಾಪತಿ ಬಸವರಾಜ ಹೊರಟ್ಟಿಯವರು ಈ ಆದೇಶ ಹೊರಡಿಸಿದ್ದಾರೆ, ಧರಣಿ ನಿರತ ಹಿನ್ನಲೆಯಲ್ಲಿ ಈ ಕ್ರಮವನ್ನು ತೆಗದುಕೊಂಡಿದ್ದಾರೆ ಎನ್ನಲಾಗಿದೆ. ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ತಮ್ಮ ಜಾಗಕ್ಕೆ ಬಂದು ಕೂರುವಂತೆ  ಸಭಾಪತಿ ಹೊರಟ್ಟಿ ಮನವಿ ಮಾಡಿದ್ದಾರೆ.  ಮನವಿಗೆ ಕಾಂಗ್ರೆಸ್ ಸದಸ್ಯರು ಜಗ್ಗದ ಹಿನ್ನೆಲೆ  ಅಮಾನತು ಮಾಡಲಾಗಿದೆ.

ವಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಪಿಆರ್ ರಮೇಶ್, ನಾರಾಯಣಸ್ವಾಮಿ, ಬಿಕೆ ಹರಿಪ್ರಶಾದ್, ಪ್ರತಾಪ್ ಚಂದ್ರಶೆಟ್ಟಿ, ಸಿಎಂ ಇಬ್ರಾಹಿಂ ಸೇರಿ 14 ಮಂದಿ ಕಾಂಗ್ರೆಸ್ ಸದಸ್ಯರು ಒಂದು ದಿನದ ಮಟ್ಟಿಗೆ ಅಮಾನತಾಗಿದ್ದಾರೆ.

Key words: legislative council-14 Congress members – suspended.