ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ವಿಚಾರ: ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ.

ಬೆಳಗಾವಿ,ಡಿಸೆಂಬರ್,13,2023(www.justkannada.in): ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆಗೆ ಮುಂದಾಗಿರುವ ರಾಜ್ಯ ಬಿಜೆಪಿ ವಿರುದ್ದ ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಸರ್ಕಾರದ ವೈಪಲ್ಯ ಎತ್ತಿ ಹಿಡಿಯೋದನ್ನ ಬಿಟ್ಟು, ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಮಾಡೋದು ಬಿಟ್ಟು ಹೊರಗಡೆ ಹೋರಾಟ ಮಾಡುತ್ತೇವೆ ಅಂದ್ರೆ ಹೇಗೆ. 66 ಶಾಸಕರನ್ನ ಸದನದ ಒಳಗೆ ಮಾತನಾಡಲಿ ಎಂದು ಕಳಿಸಿದ್ದಾರೆ. ಹೊರಗೆ ಮಾತನಾಡುತ್ತೇನೆ ಎಂದ್ರೆ ಯಾರು ಕೇಳ್ತಾರೆ ಎಂದು ಕಿಡಿಕಾರಿದರು.