ರಾಜಕೀಯ ದುರುದ್ಧೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ.

ಬೆಳಗಾವಿ,ಡಿಸೆಂಬರ್13,2021(www.justkannada.in):  ರಾಜಕೀಯ ದುರುದ್ಧೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದೆ. ಈ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ರಾಜಕೀಯ ದುರುದ್ಧೇಶದಿಂದ ವಿಧೇಯಕ ಮಂಡನೆಗೆ ಮುಂದಾಗಿದ್ದಾರೆ.ಈ ಕಾಯ್ದೆ ಈಗ ಅಗತ್ಯವಿರಲಿಲ್ಲ. ಬಿಜೆಪಿಯವರು ಪ್ರಚಾರಕ್ಕಾಗಿ ಇವೆಲ್ಲಾ ಮಾಡುತ್ತಿದ್ದಾರೆ.ಒಂದು  ಸಮುದಾಯ ಗುರಿಯಾಗಿಸಿ ಈ ರೀತಿ ಮಾಡುತ್ತಿರಿದ್ದಾರೆ. ಅನಗತ್ಯವಾಗಿ ಕಿರುಕುಳ ನೀಡಲು ಈ ರೀತಿ ಮಾಡಿದ್ದಾರೆ. ಅಧಿವೇಶನದಲ್ಲಿ ನಾವು ಈ ಕಾಯ್ದೆ ವಿರೋಧ ಮಾಡುತ್ತೇವೆ ಎಂದರು.

ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದರೆ ಸ್ಪಂದಿಸಿಲ್ಲ. ಸರ್ಕಾರ ನಿದ್ಧೆ ಮಾಡುತ್ತಿದೆ.  ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ ಅತಿವೃಷ್ಠಿ ಜನರನ್ನ ಕಾಡುತ್ತಿದೆ. ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: political- prohibition -conversion -Former CM- Siddaramaiah

ENGLISH SUMMARY…

The BJP is implementing the anti-conversion bill with vested interest: Former CM Siddaramaiah
Belagavi, December 13, 2021 (www.justkannada.in): “The BJP is planning to implement the anti-conversion bill with a vested interest,” opined leader of the opposition Siddaramaiah.
The State Government is planning to present the anti-conversion bill in the winter session to be held at the Suvarna Vidhana Soudha in Belagavi from today. In his response to this former Chief Minister, Siddaramaiah expressed his ire upon the BJP led State Government stating that there is vested interest behind this. “There was no need to introduce this bill at all. The BJP is doing all this only to gain publicity. They are targeting one particular community and want to exploit it. However, we will oppose it in the assembly,” he explained.
“The Government won’t respond to the people’s problems. The state has witnessed three times excess rainfall this year, and people are facing problems from it. But the government is not doing anything about it,” he alleged.
Keywords: Former CM Siddaramaiah/ Winter session/ Belagavi/ anti-conversion bill