ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ: ಖಾಲಿ ಹುದ್ದೆ ಭರ್ತಿ ಮಾಡಿದರೇ ತಪ್ಪೇನಿದೆ- ಶಾಸಕ ಎಂ.ಪಿ ರೇಣುಕಾಚಾರ್ಯ.

ಬೆಂಗಳೂರು,ನವೆಂಬರ್,25,2021(www.justkannada.in): ಸಚಿವ ಸಂಪುಟ ವಿಸ್ತರಣೆಗೆ ನಾವು ಕಾಯುತ್ತಿಲ್ಲ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ: ಖಾಲಿ ಹುದ್ದೆ ಭರ್ತಿ ಮಾಡಿದರೇ ತಪ್ಪೇನಿದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರಶ್ನಿಸಿದರು.

ಸಚಿವ ಸ್ಥಾನಕ್ಕೆ ಲಾಬಿ ಕುರಿತು ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ನಾವು ಜಾತ್ರೆ ಪಕ್ಷದವರಲ್ಲ. ಮಂತ್ರಿಗಿರಿ ಕೇಳಲು ನಮ್ಮ ಬಾಯಿಗೆ  ಯಾರೂ ಗಮ್ ಹಾಕಿಲ್ಲ.  ಸಿಎಂ , ವರಿಷ್ಠರು ಈ ಬಗ್ಗೆ ನಿರ್ಧರಿಸುತ್ತಾರೆ. ಆರಂಭದಲ್ಲೇ ರಾಜೂಗೌಡ ಸಚಿವ ಸ್ಥಾನ ಬೇಡ ಎಂದರು.  ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ನನ್ನನ್ನ ಸುಮ್ಮನಿರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಗುಡುಗಿದ ಶಾಸಕ ರೇಣುಕಾಚಾರ್ಯ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿರುವುದಾಗಿ ಹೇಳುತ್ತಾರೆ. ಆದರೆ ಕಾಂಗ್ರೆಸ್ ದೇಶವನ್ನ ಲೂಟಿ ಮಾಡಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಆಂಜನೇಯ ಅವಧಿಯ  ಹಾಸಿಗೆ ದಿಂಬು ಹಗರಣ ಸಾಕಲ್ವಾ ಎಂದು ಲೇವಡಿ ಮಾಡಿದರು. ಹಾಗೆಯೇ  ನಮ್ಮ ಸರ್ಕಾರ ಭ್ರಷ್ಟಾಚಾರ ಮಾಡಲಿಲ್ಲ ಎಂದರು.

Key words: No one – politics – monk-MLA -MP Renukacharya-minister-post