ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೊಂದು ಕಡೆ ಗುಡ್ಡ ಕುಸಿತ.

ಮೈಸೂರು,ನವೆಂಬರ್,18,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಮಳೆರಾಯನ ಅಬ್ಬರಕ್ಕೆ ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ರಸ್ತೆ ಕುಸಿದಿತ್ತು, ಇದೀಗ ಇಂದು ಬೆಳಿಗ್ಗೆ  ಮತ್ತೊಂದು ಕಡೆ ಗುಡ್ಡ ಕುಸಿದಿದೆ.

ರಸ್ತೆ ನವೀಕರಣಗೊಂಡು ಕೆಲವೇ ದಿನಗಳಲ್ಲಿ ಮತ್ತೆ ಗುಡ್ಡ  ಕುಸಿದಿದೆ.  ನಂದಿ ವಿಗ್ರಹ ಸಂಪರ್ಕ ಮಾಡುವ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ನಂದಿ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

20 ಅಡಿ ಇದ್ದದ್ದು 200 ಮೀಟರ್ ವರೆಗೆ ಕುಸಿದಿದ್ದು, ಗುಡ್ಡಿ ಕುಸಿತದ ಜೊತೆಗೆ ಮರಗಳು ರಸ್ತೆಗೆ ಉರುಳಿವೆ. ನಂದಿ ರಸ್ತೆ ಪದೇ ಪದೇ ಕುಸಿಯುತ್ತಿದ್ದು ಮೈಸೂರಿಗರಿಗೆ ಆತಂಕವನ್ನುಂಟು ಮಾಡಿದೆ.  ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ದೊಡ್ಡ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ.

Key words: rain-Another -fall – Chamundi Hills -Mysore.