ಭಾರಿ ಮಳೆ ಭೂಕುಸಿತದಿಂದಾಗಿ 36 ಮಂದಿ ಸಾವು.

ಮುಂಬೈ,ಜುಲೈ,23,2021(www.justkannada.in):  ಭಾರಿ ಮಳೆ ಹಿನ್ನೆಲೆ ಭೂ ಕುಸಿತದಿಂದಾಗಿ 36 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಗಡ್ ನಲ್ಲಿ ಸಂಭವಿಸಿದೆ.jk

ಮಹಾರಾಷ್ಟ್ರಾದಾದ್ಯಂತ ಭಾರಿ ಮಳೆಯಾಗುತ್ತಿದ್ದು ಈ ಮಧ್ಯೆ ರಾಯಘಡ  ಜಿಲ್ಲೆಯ ಕರಾವಳಿ ಭಾಗದಲ್ಲಿ ಮೂರು ಕಡೆ ಭಾರೀ ಭೂಕುಸಿತ ಸಂಭವಿಸಿದ್ದು ಇದರಿಂದಾಗಿ 36 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಈವರೆಗೆ 32 ಜನರ ಮೃತದೇಹಗಳನ್ನ ಹೊರತೆಗೆದಿದ್ದಾರೆ ಎನ್ನಲಾಗಿದೆ.

ಇನ್ನು  ಮಣ್ಣಿನಡಿ ಸಿಲುಕಿದ್ದ 15 ಜನರನ್ನು ರಕ್ಷಿಸಲಾಗಿದೆ. ಎನ್.ಡಿ.ಆರ್.ಎಫ್. ನಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Key words: Heavy rain -36 deaths Landslide –maharashtra