ಬೆಳಗಾವಿ ಅಧಿವೇಶನ: ಶಾಸಕರ ಪಿಎ, ಚಾಲಕರಿಗೆ ವಸತಿ,ಸಾರಿಗೆ ಸೌಲಭ್ಯ ಕುರಿತು ವಿಧಾನಸಭ ಸಚಿವಾಯದಿಂದ ಮಹತ್ವದ ಮಾಹಿತಿ.

ಬೆಂಗಳೂರು,ಡಿಸೆಂಬರ್,4,2021(www.justkannada.in): ಕೊರೋನಾ 3ನೇ ಅಲೆ, ಒಮಿಕ್ರಾನ್ ಸೋಂಕು ಭೀತಿ ನಡುವೆ ಡಿಸೆಂಬರ್ 13ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು ಈ ಮಧ್ಯೆ ಶಾಸಕರ ಆಪ್ತ ಸಹಾಯಕರು ಮತ್ತು ವಾಹನ ಚಾಲಕರಿಗೆ ವಸತಿ ಮತ್ತು ಸಾರಿಗೆ ಸೌಲಭ್ಯ ಕುರಿತು ವಿಧಾನಸಭಾ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ.

ಶಾಸಕರ ಆಪ್ತ ಸಹಾಯಕರು ಮತ್ತು ವಾಹನ ಚಾಲಕರಿಗೆ ಸಾರಿಗೆ ವಸತಿ ಸೌಲಭ್ಯವನ್ನ ಶಾಸಕರೇ ಮಾಡಿಕೊಳ್ಳಬೇಕು. ಬೆಳಗ್ಗಿನ ತಿಂಡಿ, ಊಟದ ವ್ಯವಸ್ಥೆಯನ್ನ ಅಯಾ ಶಾಸಕರೇ ಮಾಡಿಕೊಳ್ಳಬೇಕು ಪಿಎ, ಚಾಲಕರಿಗೆ ಸಾರಿಗೆ ವಸತಿ ಸೌಲಭ್ಯ ಇರುವುದಿಲ್ಲ ಎಂದು ವಿಧಾನಸಭಾ ಸಚಿವಾಲಯ ಮಾಹಿತಿ ರವಾನಿಸಿದೆ.covid-dead-body-cancels-license-order-state-government

ಇನ್ನು ಡಿಸೆಂಬರ್ 13 ರಿಂದ ಪ್ರಾರಂಭವಾಗಲಿರುವ ಅಧಿವೇಶನಕ್ಕೆ ಅಧಿಕಾರಿಗಳು ಸಚಿವಾಲಯದ ಸಿಬ್ಬಂದಿಗಳು ನಾಳೆ ಬೆಳಗಾವಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Belgaum -session-Legislative Assembly – MLA- PA-DRIVER-housing -transportation.