ಫಿಫಾ ವಿಶ್ವಕಪ್ ಫುಟ್ಬಾಲ್: ಭಾರತಕ್ಕೆ ಮತ್ತೆ ನಿರಾಸೆ

ನವದೆಹಲಿ, ನವೆಂಬರ್ 20, 2019 (www.justkannada.in): ಹಲವು ವರ್ಷಗಳ ನಂತರ ಫಿಫಾ ಫುಟ್ಬಾಲ್ ವಿಶ್ವಕಪ್ ನ ಕನಸು ಕಂಡಿದ್ದ ಭಾರತಕ್ಕೆ ಮತ್ತೆ ನಿರಾಸೆ ಎದುರಾಗಿದೆ.

ಫಿಫಾ ಫುಟ್ಬಾಲ್ ವಿಶ್ವಕಪ್ ಕ್ರೀಡಾಕೂಟ ಪ್ರವೇಶಿಸುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ ತನ್ನ ಹೋರಾಟ ಅಂತ್ಯಗೊಳಿಸಿ ತನ್ನ ಆಸೆ ಕೈಬಿಟ್ಟಿದೆ.

ಎರಡನೇ ಹಂತದ ಅರ್ಹ​ತಾ​ ಸುತ್ತಿನ ಪಂದ್ಯ​ದಲ್ಲಿ ಒಮಾನ್‌ ವಿರುದ್ಧ 0-1 ಗೋಲಿನ ಅಂತ​ರ​ದಲ್ಲಿ ಸೋಲು ಕಂಡಿರುವ ಭಾರತ ತಂಡ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಕನಸು ಭಗ್ನಗೊಂಡಿದೆ.