Wednesday, August 12, 2026

BDA Apartments

Home Front Page ಪೊಲೀಸ್ ಗೌರವದೊಂದಿಗೆ ನಾಳೆ ಹಿರಿಯ ನಟ ಶಿವರಾಂ ಅಂತ್ಯಕ್ರಿಯೆಗೆ ನಿರ್ಧಾರ.

ಪೊಲೀಸ್ ಗೌರವದೊಂದಿಗೆ ನಾಳೆ ಹಿರಿಯ ನಟ ಶಿವರಾಂ ಅಂತ್ಯಕ್ರಿಯೆಗೆ ನಿರ್ಧಾರ.

ಬೆಂಗಳೂರು,ಡಿಸೆಂಬರ್,4,2021(www.justkannada.in): ನಾಳೆ ಪೊಲೀಸ್ ಗೌರವದೊಂದಿಗೆ  ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.

ತ್ಯಾಗರಾಜನಗರದಲ್ಲಿ ಇಂದು ನಟ ಶಿವರಾಂ ಅವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿದೆ. ಇಲ್ಲಿಗೆ ಭೇಟಿ ನೀಡಿ ಶಿವರಾಂ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶಿವರಾಂ ಕಲಾಜಗತ್ತನಲ್ಲಿ ಚಾಪು ಮೂಡಿಸಿದ್ದರು. ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಶಿವರಾಂ ನಿರ್ಮಾಪಕರಾಗಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು.

ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವಶರೀರವನ್ನ  2 ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ನಂತರ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ . ಪೊಲೀಸ್ ಗೌರವದೊಂದಿಗೆ ಶಿವರಾಂ ಅಂತ್ಯಕ್ರಿಯೆ.  ಸರ್ಕಾರದ ವತಿಯಿಂದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದರು.

ನಟ ಶಿವರಾಂ ಪುತ್ರ ಲಕ್ಷ್ಮೀ ಅವರು ಮಾತನಾಡಿ, ನಾಳೆ 7.30 ರಿಂದ 10 ಗಂಟೆವರೆಗೆ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. 11 ಗಂಟೆಗೆ ಬನಶಂಕರಿ ಚಿತಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದರು.

Key words: senior-actor-Shivaram- funeral- tomorrow