ಪೆಟ್ರೋಲ್, ಡೀಸೆಲ್ ಬೆಲೆ ತಲಾ 7 ರೂ. ಇಳಿಸುತ್ತೇವೆ: ಇಂದು ಸಂಜೆಯಿಂದಲೇ ಜಾರಿ- ಸಿಎಂ ಬಸವರಾಜ ಬೊಮ್ಮಾಯಿ.

ಹುಬ್ಬಳ್ಳಿ,ನವೆಂಬರ್,4,2021(www.justkannada.in):  ಪೆಟ್ರೋಲ್, ಡೀಸೆಲ್ ಬೆಲೆ ತಲಾ 7ರೂ. ಇಳಿಸುತ್ತೇವೆ. ಇಂದು ಸಂಜೆಯಿಂದಲೇ ದರ ಇಳಿಕೆ ಜಾರಿಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 2100 ಕೋಟಿ ರೂ ಹೊರೆಯಾಗಲಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿ ದೀಪಾವಳಿ ಗಿಫ್ಟ್ ನೀಡಿದೆ. ರಾಜ್ಯ ಸರ್ಕಾರವೂ ಸಹ ಇದೇ ನಿರ್ಧಾರ ಕೈಗೊಂಡಿದೆ ಎಂದರು.

ಇನ್ನು ಹೈಕಮಾಂಡ್ ನಿಂದ ಯಾವುದೇ ಬುಲಾವ್ ಬಂದಿಲ್ಲ. ಸಚಿವ ಸಂಪುಟ ವಿಸ್ತರಣೆಗೆ ದೆಹಲಿಗೆ ಹೋಗಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Petrol -Diesel -Price – Decrease- cm basavaraj bommai

ENGLISH SUMMARY…

“We will reduce prices of petrol and diesel by Rs. 7”: Effective from today evening itself – CM Bommai
Hubballi, November 4, 2021 (www.justkannada.in): Chief Minister Basavaraj Bommai today informed that the State Government will also reduce the prices of petrol and diesel by Rs. 7/- each with effect from today evening.
Speaking to the press persons at Hubballi today, he said that it would cause a sum of Rs. 2,100 crore loss to the State exchequer. “The Union Government has given a gift to the people of the country by reducing the prices of fuel, and the State Government will follow it.”
Keywords: Fuel prices/ petrol/ diesel/ Rs. 7 reduce