ನಮ್ಮ ಅವಧಿಯಲ್ಲಿ ಸದಾಶಿವ ಆಯೋಗ ವರದಿ ಜಾರಿಯಾಗುತ್ತೆ-ಕೇಂದ್ರ ಸಚಿವ ನಾರಾಯಣಸ್ವಾಮಿ.

ಕುಷ್ಟಗಿ,ಅಕ್ಟೋಬರ್,27,2021(www.justkannada.in):  ನಮ್ಮ ಅವಧಿಯಲ್ಲೇ ಸದಾಶಿವ ಆಯೋಗ ವರದಿ ಜಾರಿಯಾಗುತ್ತೆ ಯಾರಿಗೂ ತೊಂದರೆ ಆಗದಂತೆ ವರದಿ ಜಾರಿ ಮಾಡುತ್ತೇವೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ತಿಳಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನೇಕ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದು, ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಕ್ತಪಡಿಸಿದರು.

ಕುಷ್ಟಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ,  ಲಂಬಾಣಿ, ಬೋವಿ ಇತರೇ ಸಮುದಾಯಗಳಿಗೆ ಅನ್ಯಾಯವಾಗದಂತೆ ನ್ಯಾಯಮೂರ್ತಿ ಏ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ. ಈ ವರದಿ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದ್ದು ಯಾವ ರೀತಿಯಲ್ಲಿ ಜಾರಿಗೆ ಹಾಗೂ ನ್ಯಾಯಯುತ ದಿಕ್ಕಿನ ಕುರಿತಾಗಿ ಖಂಡಿತವಾಗಿಯೂ ಬಿಜೆಪಿ ಬದ್ದವಾಗಿದೆ ಎಂದರು.

ಅಲ್ಲದೇ ಪರಿಶಿಷ್ಟ ವರ್ಗಕ್ಕೆ ಶೇ.7.5 ಹೆಚ್ಚಳ, ಬೋವಿ, ಲಂಬಾಣಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ, ಮಾದಿಗ, ಬಲಗೈ ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಬಿಜೆಪಿ ಸಿದ್ಧವಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಕಿಡಿಕಾರಿದ ನಾರಾಯಣಸ್ವಾಮಿ, ಕಾಂಗ್ರೆಸ್ ಜೆಡಿಎಸ್  ಧರ್ಮ ಇಬ್ಬಾಗ ಕೆಲಸ ಮಾಡುತ್ತಿದೆ.  ವೈಯಕ್ತಿಕ ವಿಚಾರದಲ್ಲಿ ರಾಜಕಾರಣ ಯಾರಿಗೂ ಶೋಭೆ ತರಲ್ಲ. ವೈಯಕ್ತಿಕ ವಿಚಾರದಲ್ಲಿ ರಾಜಕಾರಣ ಸರಿಯಲ್ಲ ಎಂದು ಹೇಳಿದರು.

Key words:  Sadashiva Commission -report – being- implemented -our time-Union Minister- Narayanaswamy