ನಮ್ಮಲ್ಲಿ ಗೊಂದಲವಿಲ್ಲ, ಒಂದೇ ಅಭ್ಯರ್ಥಿ, ಒಂದೇ ಮತ – ಬಿಜೆಪಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ  ಸತೀಶ್ ಜಾರಕಿಹೊಳಿ ಟಾಂಗ್

ಬೆಳಗಾವಿ,ನವೆಂಬರ್,23,2021(www.justkannada.in): ಡಿಸೆಂಬರ್ 10 ರಂದು ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆ ಕಣ ರಂಗೇರಿದ್ದು, ಈ ಮಧ್ಯೆ  ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮಲ್ಲಿ ಒಂದೇ ಅಭ್ಯರ್ಥಿ, ಒಂದೇ ಮತ ಎಂದು ಬಿಜೆಪಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.

ಪರಿಷತ್ ಚುನಾವಣೆ ಹಿನ್ನೆಲೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬಿಜೆಪಿಯಿಂದ ಇಬ್ಬರು ಸ್ಪರ್ಧಿಸಿದ್ದಾರೆ.  ಗೊಂದಲ ಇರುವುದು ಅವರಿಗೆ ನಮಗಲ್ಲ. ನಮ್ಮದು ಸಿಂಗಲ್ ಅಭ್ಯರ್ಥಿ ಸಿಂಗಲ್ ಮತ ಎಂದರು.No-need-Dikeshi-campaign-by-election-Appeal-supporters-Satish Zarakiholi

ಜಾರಕಿಹೊಳಿ ಕುಟುಂಬ ಮತ್ತು  ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಯಾವುದೇ ಫೈಟ್ ಇಲ್ಲ. ಸೋದರರ ಸವಾಲ್, ರಾಜಕೀಯ ಸವಾಲ್ ಇದ್ದೇ ಇದೆ. ರಮೇಶ್ ಜಾರಕಿಹೊಳಿ ಎಲ್ಲಾ ಸಮಯದಲ್ಲೂ ಸಿರೀಯಸ್ ಆಗಿ ಇರ್ತಾರೆ.  ರಮೇಶ್ ಜಾರಕಿಹೊಳಿ ಥಂಡಾ ಆಗಿರಲ್ಲ ಎಂದರು.

Key words: no confusion- one candidat- one vote-KPCC-work president – Satish Jarakiholi