ನನ್ನ ಕೊನೇ ಉಸಿರಿರೋವರೆಗೂ  ರಾಮನಗರವನ್ನ ಬಿಡುವುದಿಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ರಾಮನಗರ,ಡಿ,1,2021(www.justkannada.in):  ನನ್ನ ಕೊನೇ ಉಸಿರಿರೋವರೆಗೂ ರಾಮನಗರವನ್ನ ಬಿಡುವುದಿಲ್ಲ. ನಾವು ಮಣ್ಣಾಗುವುದು ಸಹ ರಾಮನಗರದಲ್ಲೇ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಮನಗರ ನಮ್ಮ ಕರ್ಮಭೂಮಿ. ಹೀಗಾಗಿ ಕೊನೆವರೆಗೂ ರಾಮನಗರವನ್ನ ಬಿಡಲ್ಲ ಎಂದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಚುನಾವಣೆಗೆ ಇನ್ನೂ ಎರಡು ಸಮಯ ಇದೆ. ಮುಂದೆ ನೋಡೋಣಾ ಎಂದರು.

ವಿಧಾನ ಪರಿಷತ್ ಚುನಾವಣೆ 2023ರ ಚುನಾವಣೆಗೆ ದಿಕ್ಸೂಚಿ ಅಲ್ಲ. ಇನ್ನು ಬಿಎಸ್ ಯಡಿಯೂರಪ್ಪ ಬಿಜೆಪಿ ಬೆಂಬಲಿಸುವಂತೆ ಬಹಿರಂಗವಾಗಿ ಕೋರಿದ್ದಾರೆ. ಕಾಂಗ್ರೆಸ್  ಬೆಂಬಲ ಬೇಡ ಎಂದಿದೆ. ಬೆಂಬಲದ ಬಗ್ಗೆ ಶೀಘ್ರವೇ ನಿರ್ಧಾರ ಮಾಡಲಾಗುತ್ತದೆ ಎಂದು ಹೆಚ್.ಡಿಕೆ ಹೇಳಿದರು.

Key words: Ramanagara- will- not leave- till – last breath-Former CM-HD Kumaraswamy.