ದೇಶದಲ್ಲಿ 5ನೇ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆ.

ನವದೆಹಲಿ,ಡಿಸೆಂಬರ್,5,2021(www.justkannada.in):  ದೇಶದಲ್ಲಿ ಒಮಿಕ್ರಾನ್​ ಸೋಂಕಿನ ಪ್ರಕರಣಗಳು ದಿನೇದಿನೆ ಏರಿಕೆಯಾಗುತ್ತಿದ್ದು, ಇದೀಗ 5ನೇ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ.

ನವದೆಹಲಿಯಲ್ಲಿ 5ನೇ ಒಮಿಕ್ರಾನ್  ಕೇಸ್​ ಪತ್ತೆಯಾಗಿದೆ. ದೆಹಲಿಯಲ್ಲಿ ಮೊದಲನೇ ಒಮಿಕ್ರಾನ್​ ಪ್ರಕರಣ ಕಾಣಿಸಿಕೊಂಡಿದೆ. ಸೋಂಕಿತನನ್ನು ಎಲ್​​ಎನ್​​ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತ ವ್ಯಕ್ತಿ  ತಾಂಜಾನಿಯದಿಂದ ಬಂದಿದ್ದರು. ಹಾಗೇ, ಇನ್ನೂ 17 ಮಂದಿಯಲ್ಲಿ ಕೊವಿಡ್​ 19 ಸೋಂಕು ಕಾಣಿಸಿಕೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್​ ಸೋಂಕು ಭಾರತದಲ್ಲಿ ಮೊದಲು ಕರ್ನಾಟಕದ ಬೆಂಗಳೂರಿನಲ್ಲಿ ಇಬ್ಬರಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು. ಇಲ್ಲಿ ಇಬ್ಬರಲ್ಲಿ ವೈರಸ್ ದೃಢಪಟ್ಟ ಮರುದಿನ ಗುಜರಾತ್​​ 75ವರ್ಷದ ವೃದ್ಧರೊಬ್ಬರಲ್ಲಿ ಒಮಿಕ್ರಾನ್​ ಪತ್ತೆಯಾಗಿತ್ತು.

ಹಾಗೇ, ನಿನ್ನೆ ಮಹಾರಾಷ್ಟ್ರದ ದೊಂಬಿವ್ಲಿಯ 33ವರ್ಷದ ವ್ಯಕ್ತಿಯೊಬ್ಬರಲ್ಲಿ ಒಮಿಕ್ರಾನ್​ ದೃಢಪಟ್ಟಿತ್ತು. ಅವರ ಜತೆಗೆ ಬಂದವರನ್ನೆಲ್ಲ ಟ್ರೇಸ್​ ಮಾಡಿ ತಪಾಸಣೆಗೆ ಒಳಪಡಿಸಲಾಗಿದೆ.

Key words: 5th Omicron- infection- case -detected – country.