ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ನವೆಂಬರ್,10,2021(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಇಂದು ಅಲ್ಲೇ ವಾಸ್ತವ್ಯ ಹೂಡಿ ಕೇಂದ್ರ ಸಚಿವರನ್ನ ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು 10 ಗಂಟೆ ವೇಳೆಗೆ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದರು. ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದೇನೆ. ಪ್ರಧಾ ಮೋದಿ ಸಮಯ ನೀಡಿದರೇ ಭೇಟಿಯಾಗುವೆ ಎಂದರು.

ಹಾಗೆಯೇ  ದೆಹಲಿ ಪ್ರವಾಸದಲ್ಲಿ ಕೇಂದ್ರ ಸಚಿವರನ್ನ ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿಯಾಗುವೆ. ಆದರೆ ದೆಹಲಿ ಭೇಟಿ ವೇಳೆ ನಿಗಮ ಮಂಡಳಿಗಳ ಅಧ್ಯಕ್ಷರ ಬದಲಾವಣೆ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ಮಾಡಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.

Key words: CM-Basavaraja Bommai- moved -Delhi.

ENGLISH SUMMARY…

CM Basavaraj Bommai departs to Delhi
Bengaluru, November 10, 2021 (www.justkannada.in): Chief Minister Basavaraj Bommai today has gone to Delhi. It is learned that he will stay there for the day and visit the Union Ministers to discuss the various developmental works of the State.
The Chief Minister left for Delhi from the Kempegowda International Airport at 10.00 am. Speaking to the media persons before his departure he informed that he has asked time to meet the Prime Minister and will also meet several Union Ministers and discuss various developmental works. “I will also meet BJP State President J.P. Nadda. But, I don’t have any plans to discuss changing the leaders of various Corporations,” he said.
Keywords: Chief Minister/ Basavaraj Bommai/ departs to Delhi