ತಮ್ಮನ್ನ ವೇಸ್ಟ್ ಬಾಡಿ ಎಂದ ಶಾಸಕ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು.

ಬೆಳಗಾವಿ,ಡಿಸೆಂಬರ್,15,2021(www.justkannada.in):  ಸಿದ್ಧರಾಮಯ್ಯ ವೇಸ್ಟ್ ಬಾಡಿ ಎಂದು ಹೇಳಿಕೆ ನೀಡಿದ್ಧ ಶಾಸಕ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ನಾನು ರಾಜಕೀಯಕ್ಕೆ ಬಂದು 40 ವರ್ಷವಾಯಿತು. ನಾನು ಇಂತವರನ್ನ ಬಹಳ ಜನರನ್ನ ನೋಡಿದ್ದೇನೆ.  ರಮೇಶ್ ಜಾರಕಿಹೊಳಿಗೆ ರಾಜಕೀಯ ಭಾಷೆ ಸಂಸ್ಕೃತಿ ಇಲ್ಲ.  ಒಂದು ಕಡೆ ಗುರು ಅಂತಾರೆ. ಇನ್ನೊಂದು ಕಡೆ ಹೀಗೆ.  ಅದಕ್ಕೆ ಏನು ಬೆಲೆ ಇರುತ್ತೇ ಎಂದು ಪ್ರಶ್ನಿಸಿದರು.

ಟಾರ್ಗೆಟ್ ಮಾಡೋರನ್ನ ಟೀಕೆ ಮಾಡೋರನ್ನ, ಇಂತವರನ್ನ ಬಹಳಷ್ಟು ಜನರನ್ನ ನೋಡಿದ್ದೇನೆ. ಸಿದ್ಧರಾಮಯ್ಯ ಏನು ಅಂತಾ ರಾಜ್ಯಕ್ಕೆ ಗೊತ್ತು.,  ವೇಸ್ಟ್ ಬಾಡಿ ಯಾರು ಎಂದು ಎಲ್ಲರಿಗೂ ಗೊತ್ತು ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.

Key words: Former CM-Siddaramaiah –MLA- Ramesh Jarakiholi- Waste Body.