ಡಿ.31ರ ಕರ್ನಾಟಕ ಬಂದ್ ಮುಂದೂಡುವಂತೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮನವಿ.

ಬೆಂಗಳೂರು,ಡಿಸೆಂಬರ್,29,2021(www.justkannada.in): ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ  ಡಿಸೆಂಬರ್ 31ಕ್ಕೆ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ಬೆಂಬಲಿಸುವ ಬಗ್ಗೆ ನಾಳೆ ನಿರ್ಧಾರ ಮಾಡುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಪ್ರವೀಣ್ ಕುಮಾರ್ ಶೆಟ್ಟಿ, ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಸಭೆ ನಡೆಸುತ್ತೇವೆ.  ನಾಳೆಯ ಸಭೆ ಬಳಿಕ ಕೆಲವು ನಿರ್ಧಾರ ಕೈಗೊಳ್ಳುತ್ತೇವೆ.  ಬಂದ್ ದಿನಾಂಕ ಬದಲಿಸುವಂತೆ ಮನವಿ ಮಾಡುತ್ತೇನೆ. ನನ್ನ ಅಭಿಪ್ರಾಯವನ್ನ ಪತ್ರದ ಮೂಲಕ  ವಾಟಾಳ್ ನಾಗರಾಜ್ ಮತ್ತು ಸಾ.ರಾ ಗೋವಿಂದು ಅವರಿಗೆ ಕಳಿಸುತ್ತೇನೆ. ಬಂದ್ ದಿನಾಂಕ ಬದಲಾವಣೆಗೆ ಸಾರಾ ಗೋವಿಂದು ಸಹಮತ ವ್ಯಕ್ತಪಡಿಸಿದ್ದರು ಎಂದರು.

ಕಿಡಿಗೇಡಿಗಳ ಕೃತ್ಯವನ್ನ ಎಂದು ಸಹಿಸಲ್ಲ. ಆದರೆ ಬಂದ್ ನಿಂದ ತೊಂದರೆಯಾಗುತ್ತದೆ. ಡಿ.31 ರಂದು ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಸಿನಿಮಾರಂಗಕ್ಕೂ ತೊಂದರೆಯಾಗುತ್ತದೆ ಹೀಗಾಗಿ ಬಂದ್ ಮುಂದೂಡುವಂತೆ ಮನವಿ ಮಾಡಿತ್ತೇನೆ ಎಂದರು.

Key words: Decision -Karnataka Bandh- support – karave-Praveen Shetty