ಡಾ. ಶಿವರಾಮ ಕಾರಂತ ಬಡಾವಣೆಗೆ ಜಮೀನು ನೀಡಿರುವ ರೈತರಿಗೆ 60:40 ಅನುಪಾತದಡಿ ನಿವೇಶನ ಅರ್ಹತಾ ಪ್ರಮಾಣ ಪತ್ರ ಹಂಚಿಕೆ.

ಬೆಂಗಳೂರು, ಡಿಸೆಂಬರ್ ,3,2022(www.justkannada.in):  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆಗೆ ಜಮೀನು ನೀಡಿರುವ  ರೈತರಿಗೆ 60:40 ಅನುಪಾತದಡಿ ನಿಗದಿಪಡಿಸಿರುವ ಶೇ. 40ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳ ಭೂಪರಿಹಾರವನ್ನು ಆಯ್ಕೆ ಮಾಡಿಕೊಂಡಿರುವ 21 ಫಲಾನುಭವಿಗಳಿಗೆ ಇಂದು ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇನದಂತೆ ಭೂಮಾಲಿಕರಿಗೆ ಐತೀರ್ಪು ರಚಿಸಿ ಸ್ವಾಧಿನ ಪಡಿಸಿಕೊಂಡ ಜಮೀನುಗಳಿಗೆ ಅಭಿವೃದ್ಧಿ ಪಡಿಸಿದ ನೀವೆಶನಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದು ಅದರಂತೆ ಬಡಾವಣೆಗಾಗಿ ಭೂಮಿ ನೀಡಿರುವ 113 ರೈತರಿಗೆ ಈವರೆಗೆ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗಿದೆ. ಬಡಾವಣೆ ವ್ಯಾಪ್ತಿಯಲ್ಲಿ ಬರುವ ಗುಣಿ ಅಗ್ರಹಾರ ಮತ್ತು ಮೇಡಿ ಅಗ್ರಹಾರ ಗ್ರಾಮದ ಒಟ್ಟು 21 ರೈತರಿಗೆ ಇಂದು Entitlement certificate ಗಳನ್ನು ವಿತರಿಸಲಾಗಿದೆ. ಶೀಘ್ರದಲ್ಲಿ ಇನ್ನೂ 27 ರೈತರಿಗೆ ವಿತರಿಸಲಾಗುತ್ತದೆ.

ಸರ್ವೋಚ್ಚ ನ್ಯಾಯ್ಯಲಯ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ನೇತೃತ್ವದ ಸಮಿತಿಯು ಡಾ. ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿ ಮೇಲುಸ್ತುವಾರಿಯನ್ನು ವಹಿಸಿದ್ದು, ಸಮಿತಿಯ ನಿರ್ದೇಶನದಂತೆ ಕುಮಾರ ನಾಯ್ಕ ಆಯುಕ್ತರು ಮತ್ತು ಡಾ. ಸೌಜನ್ಯ ಉಪ ಆಯುಕ್ತರು ಭೂಸ್ವಾದಿನ ಬಿಡಿಎ ಇವರ ಉಸ್ತುವಾರಿಯಲ್ಲಿ ವಿಷೇಶ ಭೂ ಸ್ವಾಧೀನಾಧಿಕಾರಿಯಾದ ಡಾ. ಬಿ.ಆರ್.ಹರೀಶ ನಾಯ್ಕ ರವರು ಇಂದು ರೈತರ ಸ್ವಗ್ರಾಮದಲ್ಲೆ ಅರ್ಹತಾ ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಭೂಮಾಲಿಕರು ಹಾಜರಿದ್ದರು.

ಸರ್ವೋಚ್ಚ ನ್ಯಾಯಾಲಯದ ನಿರ್ದೇನದಂತೆ ಭೂಮಾಲಿಕರಿಗೆ ಐತೀರ್ಪು ರಚಿಸಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಅಭಿವೃದ್ಧಿ ಪಡಿಸಿದ ನೀವೆಶನಗಳನ್ನು ಶೇಕಡ 60-40 ರಂತೆ ಅಥವಾ ಹಣವನ್ನು ಪಡೆಯಬಹುದಾಗಿದ್ದು, ರೈತರು ಅಥವಾ ಭೂ ಮಾಲೀಕರು ತಮ್ಮ ಸ್ವ-ಇಚ್ಚೆಯಂತೆ ಯಾವುದಾದರೂ ಒಂದನ್ನು ಆಯ್ಕೆಮಾಡಿಕೊಂಡು ಲಿಖಿತ ರೂಪದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಆಯುಕ್ತರು ಭೂಸ್ವಾದಿನ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Key words: Shivaram Karanta-badavane-Allotment – land -eligibility- certificate – 60:40 ratio – farmers