ಜೀವನದಲ್ಲಿ ಮೊದಲ ಬಾರಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಹಾಸ್ಯ ನಟ ಬಿರಾದಾರ್..

 

ಬೆಂಗಳೂರು,ಜೂ,27,2020(www.justkannada.in): ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಹಾಸ್ಯ ನಟ ವೈಜನಾಥ್ ಬಿರಾದಾರ್ ನಿನ್ನೆ68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದು ಅವರು ಮೊದಲನೇ ಬಾರಿಗೆ ಆಚರಿಸಿಕೊಂಡ ಹುಟ್ಟುಹಬ್ಬವಾಗಿತ್ತು.

68 ವಯಸ್ಸಿನ ಈ ಪ್ರಬುದ್ಧ ನಟ ಹುಟ್ಟಿದಾಗಿನಿಂದ ಮಾಡದೇ ಇರುವ ಒಂದು ಕೆಲಸವನ್ನು ನಟ ಪ್ರಥಮ್, ಬಿರಾದಾರ್ ಅವರ ಕೈಯಲ್ಲಿ ಮಾಡಿಸಿ ಮೆಚ್ಚುಗೆ ಪಡೆದಿದ್ದಾರೆ‌. 68 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಿರಾದಾರ್ ಅವರ ಮನೆಗೆ ಕೇಕ್ ಹಿಡಿದು ಬಂದ ಪ್ರಥಮ್  ಬಿರಾದಾರ್ ಅವರಿಂದ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಇನ್ನು ಈ ಅನಿರೀಕ್ಷಿತ ಹುಟ್ಟುಹಬ್ಬ ಆಚರಣೆಗೆ ಬಿರಾದಾರ್ ಸಂತಸ ಕೂಡ ವ್ಯಕ್ತಪಡಿಸಿದ್ದಾರೆ.