ಕೆಜಿಎಫ್ 2: ತಮಿಳಿನಲ್ಲಿ ನಾನೇ ಡಬ್ಬಿಂಗ್ ಮಾಡ್ತೇನೆ ಎಂದ ರಾಕಿಂಗ್ ಸ್ಟಾರ್

ಬೆಂಗಳೂರು, ಫೆಬ್ರವರಿ 17, 2020 (www.justkannada.in): ಕೆಜಿಎಫ್ 2 ಸಿನಿಮಾ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಆದರೆ ತಮಿಳು ಭಾಷೆಯಲ್ಲಿ ತಾವೇ ಡಬ್ಬಿಂಗ್ ಮಾಡುವುದಾಗಿ ಯಶ್ ಹೇಳಿದ್ದಾರೆ. ಚೆನ್ನೈಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಯಶ್ ತಮಿಳಿನಲ್ಲೂ ನಾನೇ ಧ್ವನಿ ನೀಡುವುದಾಗಿ ಹೇಳಿಕೊಂಡಿದ್ದಾರೆ.

ತಮಿಳಿನಲ್ಲೂ ಚೆನ್ನಾಗಿ ಮಾತನಾಡಬಲ್ಲ ಯಶ್, ಕೆಜಿಎಫ್ ಸಿನಿಮಾ ಬಳಿಕ ಅಲ್ಲಿಯೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಸ್ಥಳೀಯ ಅಭಿಮಾನಿಗಳನ್ನು ಸೆಳೆಯಲು ತಾವೇ ಡಬ್ಬಿಂಗ್ ಮಾಡಲು ನಿರ್ಧರಿಸಿದ್ದಾರೆ.