ಎಸ್.ಆರ್ ಶ್ರೀನಿವಾಸ್ ರನ್ನ ಕಾಂಗ್ರೆಸ್ ಗೆ  ಆಹ್ವಾನಿಸಿದ ಸಿದ್ಧರಾಮಯ್ಯಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿರುಗೇಟು.

ನವದೆಹಲಿ,ನವೆಂಬರ್,2,2021(www.justkannada.in):  ಶಾಸಕ ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಗೆ ಬಂದರೇ ಅವರೇ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಕಾಂಗ್ರೆಸ್ ನವರು ಅಭ್ಯರ್ಥಿಯನ್ನ ಅಭ್ಯರ್ಥಿಯನ್ನ ಘೋಷಣೆ ಮಾಡಿದ್ರೆ ನಾವು ಸುಮ್ಮನಿರಬೇಕಾ..? ನಾವು ಪರ್ಯಾಯ ಅಭ್ಯರ್ಥಿ ಹುಡುಕಬೇಕಾಗುತ್ತದೆ. ಬರೀ ಕಾಣಗ್ರೆಸ್  ಜೆಡಿಎಸ್ ಎಂದ್ರೆ ನಾವು ಎಲ್ಲಿಗೆ ಹೋಗಬೇಕು. ನನಗೆ 89 ವರ್ಷವಾದ್ರೂ ಪಕ್ಷಕ್ಕಾಗಿ ಹೋರಾಡುತ್ತೇನೆ. ನಮ್ಮ ಪಕ್ಷದಲ್ಲೂ  ನಾಯಕರಿದ್ದಾರೆ ಎಂದರು.

ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಉಪಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿ ಗೆಲುವು ಸಾಧಿಸಿದ್ದಾರೆ. ಎಂಸಿ ಮನಗೊಳಿ ಎಸ್ ಜೆಪಿಯಲ್ಲಿ ಸೋತಿದ್ದರು. ನಂತರ ನಮ್ಮ ಪಕ್ಷಕ್ಕೆ ಬಂದು ಗೆಲುವು ಸಾಧಿಸಿದರು. ಅವರನ್ನ ಮಂತ್ರಿ ಮಾಡಿದವು ಎಂದರು.

ಸಿಂದಗಿಯಲ್ಲಿ ನಾಜಿಯಾ ಅಂಗಡಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಅಲ್ಲಿ ಹಿಂದೂ ಮುಸ್ಲೀಂ ಎಂಬ ಬೇಧ ಭಾವ ಇಲ್ಲ. ಲಿಂಗಾಯಿತ ಸಮುದಾಯ ಜೆಡಿಎಸ್ ಗೆ ವೋಟ್ ಹಾಕಿಲ್ಲ. ಹೀಗಾಗಿ ನಾಜಿಯಾ ಅಂಗಡಿ ಅವರಿಗೆ ಟಿಕೆಟ್ ನೀಡಿದವು ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

Key words: Former PM- HD devegowda-former CM- Siddaramaiah-mla-sr shrinivas