ಎಂಇಎಸ್ ಸಂಘಟನೆ ನಿಯಂತ್ರಿಸಲು ಬಿಜೆಪಿಯವರಿಗೆ ಧಮ್ ಇಲ್ಲ- ಸಿಎಂ ಇಬ್ರಾಹಿಂ ಟೀಕೆ.

ಬೆಳಗಾವಿ,ಡಿಸೆಂಬರ್,20,2021(www.justkannada.in):  ಬೆಳಗಾವಿಯಲ್ಲಿ  ಎಂಇಎಸ್ ಪುಂಡಾಟಿಕೆ ನಡೆಸಿರುವ ಹಿನ್ನೆಲೆ ಬಿಜೆಪಿ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಇಬ್ರಾಹಿಂ, ಎಂಇಎಸ್ ಸಂಘಟನೆಯನ್ನು ನಿಯಂತ್ರಿಸಲು ಬಿಜೆಪಿಯವರಿಗೆ ಧಮ್ ಇಲ್ಲ.  ಕನ್ನಡಿಗರ ನೆಲವಿದು, ಕನ್ನಡಿಗರಿಗೆ ಅವಮಾನವಾದರೆ ಸುಮ್ಮನೆ ಕೂರುವುದು ಸರಿಯಲ್ಲ. ಎಂಇಎಸ್ ವಿರುದ್ಧ ಪ್ರತಿಭಟಿಸಲು ವಾಟಾಳ್ ನಾಗರಾಜ್ ರಷ್ಟು ಧೈರ್ಯ ಬಿಜೆಪಿಗೆ ಇಲ್ಲ. ನಿಮಗೆ ಧೈರ್ಯವಿಲ್ಲದಿದ್ದರೆ ಬೆಂಗಳೂರಿಗೆ ಹೋಗಿ ನೋಡಿ, ಹೋರಾಟಗಾರರಾದ ನಾರಾಯಣಗೌಡ, ವಾಟಾಳ್‍ ನಾಗರಾಜ್ ಅವರು ಹೇಗೆ ಎಂಇಎಸ್ ವಿರುದ್ಧ ಸಿಡಿದೆದ್ದಿದ್ದಾರೆ ಕಿಡಿಕಾರಿದರು.

ಮುಖ್ಯಮಂತ್ರಿಗಳ ಭಾವನಾತ್ಮಕ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಅಧಿಕಾರ ಶಾಶ್ವತ ಅಲ್ಲ ಎಂದು ಹೇಳಿದ್ದಾರೆ. ಆದರೆ, ಜೀವನವೇ ಶಾಶ್ವತವಲ್ಲ. ಇನ್ನು ಕುರ್ಚಿ ಶಾಶ್ವತನಾ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

Key words:  BJP -does not – dham -control – MES-CM Ibrahim.