hunsur Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಹುಣಸೂರು ಚಿನ್ನಾಭರಣ ದರೋಡೆಗೆ ಬಿಗ್ ಟ್ವಿಸ್ಟ್…!
ಮೈಸೂರು,ಡಿಸೆಂಬರ್,30,2025(www.justkannada.in):  ಹುಣಸೂರು ಪಟ್ಟಣದಲ್ಲಿ ಕಳೆದ ಎರಡು ದಿನದ ಹಿಂದೆ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಅಂದು ದರೋಡೆಕೋರರು ಕದ್ದಿದ್ದು 7 ಕೆ.ಜಿ. ಅಲ್ಲ, ಬರೋಬ್ಬರಿ 10 ಕೆ.ಜಿ. ಚಿನ್ನ ಕಳ್ಳತನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದರೋಡೆ ಮಾಡಲು 10 ಕ್ಕೂ ಹೆಚ್ಚು ಮಂದಿ ಪ್ಲಾನ್ ಮಾಡಿದ್ದರು. ಆದರೆ ಕಳ್ಳತನ ಮಾಡಿದ್ದು ಕೇವಲ 5 ಮಂದಿ.

ಚಿನ್ನದಂಗಡಿಯ ಮಾಲೀಕ ರಶೀದ್ ಅವರು ಕಳೆದ 6 ತಿಂಗಳ ಹಿಂದಷ್ಟೇ ಕೇರಳದಲ್ಲಿ 5 ಕೆ.ಜಿ. ಚಿನ್ನ ಖರೀದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನ ಖರೀದಿ ವಿಚಾರದಲ್ಲಿ ಉಂಟಾದ ಮನಸ್ತಾಪವೇ ಕಳ್ಳತನಕ್ಕೆ ಕಾರಣವಾಯ್ತಾ ಎಂಬ ಅನುಮಾನ ಉಂಟಾಗಿದೆ.

ಸ್ಕೈ ಗೋಲ್ಡ್ ಅಂಡ್ ಡೈಮಂಡ್‌ ರಾಬರಿ ಮಾಡಿದ್ದ ಗ್ಯಾಂಗ್ ಕೇರಳದ್ದು  ಎನ್ನುವ ಮಾಹಿತಿ ಲಭ್ಯವಾಗಿದ್ದು, ಕೇಂದ್ರಾದಳಿತ ಪ್ರದೇಶ ಪಾಂಡಿಚೇರಿಯ ಮಾಹೆನಲ್ಲಿ ದರೋಡೆಕೋರರು ಬಂದೂಕು ಖರೀದಿ ಮಾಡಿದ್ದರು ಎನ್ನಲಾಗಿದೆ. ಈಗಾಗಲೇ ಮೈಸೂರು ಪೊಲೀಸರು ಕೇರಳಕ್ಕೆ ತೆರಳಿದ್ದು ಆರೋಪಿಗಳ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರಕರಣದ ಬಗ್ಗೆ ಮೈಸೂರು ಎಸ್ಪಿ ಡಾ. ವಿಷ್ಣುವರ್ಧನ್‌  ಮಾಹಿತಿ ಪಡೆದಿದ್ದಾರೆ.

Key words: Big twist, Hunsur, jewellery, robbery case

The post ಹುಣಸೂರು ಚಿನ್ನಾಭರಣ ದರೋಡೆಗೆ ಬಿಗ್ ಟ್ವಿಸ್ಟ್…! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹುಣಸೂರು ಚಿನ್ನದಂಗಡಿ ದರೋಡೆ ಕೇಸ್: 5 ತಂಡ ರಚನೆ: ಆರೋಪಿಗಳ ಭಾವಚಿತ್ರ ಆಧರಿಸಿ ತಲಾಶ್
ಮೈಸೂರು,ಡಿಸೆಂಬರ್,29,2025 (www.justkannada.in): ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸೆರೆಗಾಗಿ 5 ತಂಡಗಳನ್ನು ರಚನೆ ಮಾಡಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದು  ಆರೋಪಿಗಳ ಭಾವಚಿತ್ರ ಆಧರಿಸಿ ತಲಾಶ್ ನಡೆಸುತ್ತಿದ್ದಾರೆ.

ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ‌2.30ರ  ವೇಳೆಯಲ್ಲಿ ಹುಣಸೂರಿನ ಪಟ್ಟಣದಲ್ಲಿ ಜ್ಯೂವಲರಿ ಶಾಪ್ ಗೆ 5 ಜನರ ತಂಡ ನುಗ್ಗಿ ಸಿಬ್ಬಂದಿಗೆ ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಎಷ್ಟು ಮೌಲ್ಯದ ವಜ್ರ ಚಿನ್ನಾಭರಣ ದರೋಡೆ ಆಗಿದೆ ಎಂಬ ಮಾಹಿತಿ ಲಭ್ಯವಿಲ್ಲ. ಅಂಗಡಿಯವರ ಚಿನ್ನದ ದಾಸ್ತಾನು ಹಾಗೂ ಮಿಸ್ಸಿಂಗ್ ಲೆಕ್ಕಾಚಾರದ ನಂತರ  ಮೌಲ್ಯ ಗೊತ್ತಾಗಲಿದೆ.

ಇನ್ನು ಆರೋಪಿಗಳ ಪತ್ತೆಗಾಗಿ  5 ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ 5 ಪೊಲೀಸರ ತಂಡ ರಚನೆ ಮಾಡಲಾಗಿದ್ದು, ಸಿಸಿ ಟಿವಿ ದೃಶ್ಯದಲ್ಲಿ ಆರೋಪಿಗಳ ಮುಖಗಳು ಪತ್ತೆ ಮಾಡಲಾಗಿದೆ. ಆರೋಪಿಗಳು ಎಲ್ಲಿಯವರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ18 ಚಕ್‌ಪೋಸ್ಟ್ ಗಳಿದ್ದು  ಎಲ್ಲ ಕಡೆಗಳಲ್ಲೂ ಪೊಲೀಸರು ಅಲರ್ಟ್ ಆಗಿದ್ದಾರೆ. ದರೋಡೆ ಮಾಡಿ ಖದೀಮರು ಕೇರಳ ಕಡೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದಂಗಡಿ ಮ್ಯಾನೇಜರ್, ಸಿಬ್ಬಂದಿ ಕೈವಾಡ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದು ಪರಿಚಿತರಿಂದಲೇ ಕೃತ್ಯ ನಡೆಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳ ಭಾವಚಿತ್ರ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಭಾವಚಿತ್ರ ಆಧರಿಸಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.  ಐವರು ಆರೋಪಿಗಳು ಹಿಂದಿ ಭಾಷೆ ಮಾತನಾಡುತ್ತಿದ್ದರು. ನಂಬರ್ ಪ್ಲೇಟ್ ಇಲ್ಲದ ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಕೈನಲ್ಲಿ ಎರಡೆರಡು ಪಿಸ್ತೂಲ್ ಹಿಡಿದು ಒಳನುಗ್ಗಿದ್ದರು. ದರೋಡೆ ಬಳಿಕ ಕ್ಷಣಾರ್ಧದಲ್ಲಿ ಚಿನ್ನಾಭರಣ ಕದ್ದು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳು ಎಸ್ಕೇಪ್ ಆಗಿದ್ದರು.

ಬೈ ಪಾಸ್ ರಸ್ತೆಯಲ್ಲಿ ಮಡಿಕೇರಿ ರಸ್ತೆ ಕಡೆ ದುಷ್ಕರ್ಮಿಗಳು ತೆರಳಿದ್ದು, ಚಿನ್ನದಂಗಡಿಯ ಮಾಲೀಕರು ಕೇರಳ ಮೂಲದವರಾದ ಕಾರಣ ಕೇರಳದತ್ತ ತೆರಳಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಪೊಲೀಸರ ಒಂದು ಕೇರಳದತ್ತ ಮುಖ ಮಾಡಿದರೆ ಮತ್ತೊಂದು ತಂಡ ಮಡಿಕೇರಿಯತ್ತ ತೆರಳಿದೆ.  ಇನ್ನು  ಮೈಸೂರು ಸುತ್ತಲೂ ಒಂದು ತಂಡದಿಂದ ತಲಾಶ್ ನಡೆಸುತ್ತಿದ್ದರೇ ಹಾಸನದತ್ತ ಒಂದು ತಂಡ ತೆರಳಿದೆ. ಹುಣಸೂರಿನ ಚಿನ್ನದ ಅಂಗಡಿ ಸುತ್ತು ಮುತ್ತ ಮತ್ತೊಂದು ತಂಡ ತನಿಖೆ ನಡೆಸುತ್ತಿದೆ.

Key words: Hunsur, gold shop, robbery case, 5 teams, accused

The post ಹುಣಸೂರು ಚಿನ್ನದಂಗಡಿ ದರೋಡೆ ಕೇಸ್: 5 ತಂಡ ರಚನೆ: ಆರೋಪಿಗಳ ಭಾವಚಿತ್ರ ಆಧರಿಸಿ ತಲಾಶ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

2ರಿಂದ 3 ತಿಂಗಳ ಹೆಣ್ಣು ಹುಲಿಮರಿಯ ರಕ್ಷಣೆ
ಹುಣಸೂರು,ಡಿಸೆಂಬರ್,6,2025 (www.justkannada.in): ನಾಗರಹೊಳೆಯ ಅಭಯ ಅರಣ್ಯಕ್ಕೆ ಹೊಂದಿಕೊಂಡಿರುವ ಗುರುಪುರ ಟಿಬೇಟಿಯನ್ ಕಾಲೋನಿಯ  ಜೆ. ವಿಲೇಜ್  ಬಳಿ ಸುಮಾರು ಹೆಣ್ಣು ಹುಲಿಮರಿ  ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಅದನ್ನು ರಕ್ಷಿಸಿದ್ದಾರೆ.

ಜೆ. ವಿಲೇಜ್  ಬಳಿ ಸುಮಾರು 2 ರಿಂದ 3 ತಿಂಗಳ  ಹೆಣ್ಣುಮರಿ  ಕಾಣಿಸಿಕೊಂಡಿತ್ತು.  ಹುಲಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದು,  ಕೂಡಲೇ  ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋಗಿ ಡ್ರೋಣ್ ಬಳಸಿ ನೋಡಿ ಹುಲಿ ಮರಿಯನ್ನು  ಸೆರೆ ಹಿಡಿದರು.

ಅರಣ್ಯ ಇಲಾಖೆಯ ಎಸಿಎಫ್ ಲಕ್ಷ್ಮಿಕಾಂತ್  ಆರ್ ಎಫ್ ಒ ವಿನೋದ್ ಗೌಡ ಡಿಆರ್ ಎಫ್  ಒ ಮತ್ತು ಅಶೋಕ ಶಿವಕುಮಾರ್, ವೆಂಕಟೇಶ್ ಮತ್ತು ಅರಣ್ಯ ಇಲಾಖೆಯ ಇತರೆ ಸಿಬ್ಬಂದಿ  ಹುಲಿ ಮರಿಯನ್ನು ಸೆರೆ ಹಿಡಿದಿದ್ದು ಸುರಕ್ಷಿತವಾಗಿ ಸ್ಥಳಕ್ಕೆ ರವಾನಿಸಿದರು.

ಹುಲಿ ಮರಿಯು ಆರೋಗ್ಯವಾಗಿದ್ದು,  ದ್ರೋಣ್ ಸಹಾಯದಿಂದ ತಾಯಿಯ ಚಲನವಲನ ಗಮನಿಸಿದ ನಂತರ ತಾಯಿ – ಮರಿ ಸೇರ್ಪಡೆ ಕಾರ್ಯವನ್ನು ನಡೆಸಲಾಗುವುದು ಎಂದು  ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ತಿಳಿಸಿದ್ದಾರೆ.

Key words: Protection, old female, tiger, cub, Hunsur

The post 2ರಿಂದ 3 ತಿಂಗಳ ಹೆಣ್ಣು ಹುಲಿಮರಿಯ ರಕ್ಷಣೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹುಣಸೂರಿನಲ್ಲಿ ಅದ್ದೂರಿ ಹನುಮ ಜಯಂತಿ: ಶಾಂತಿಯುತ ಮೆರವಣಿಗೆಯಲ್ಲಿ ಸಾಗಿದ ಭಕ್ತರು
ಮೈಸೂರು ,ಡಿಸೆಂಬರ್,4,2025 (www.justkannada.in): ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು.

ಟ್ರ್ಯಾಕ್ಟರ್‌ ಗಳಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು ಶೋಭ ಯಾತ್ರೆ‌ ಕೈಗೊಂಡಿದ್ದು ಪುಷ್ಪಾರ್ಚನೆ ಮಾಡುವ ಮೂಲಕ  ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಶಾಸಕ ಹೆಚ್.ಪಿ ಮಂಜುನಾಥ್, ಶಾಸಕ ಹರೀಶ್‌ ಗೌಡ, ಗಾವಡಗೆರೆ ಶ್ರೀಗಳು ಶೋಭಾಯಾತ್ರೆಗೆ ಚಾಲನೆ ನೀಡಿದರು.

ರಂಗನಾಥ ಬಡಾವಣೆಯಲ್ಲಿ ಶ್ರೀ ಆಂಜನೇಯಸ್ವಾಮಿ, ಭಜರಂಗಿ, ರಾಮ- ಲಕ್ಷ್ಮಣ- ಸೀತೆ, ದತ್ತಾತ್ರೇಯ ಮೂರ್ತಿಗಳ ಮೆರವಣಿಗೆ ನಡೆದಿದ್ದು, ನೂರಾರು ಭಕ್ತರು ಕೇಸರಿ ಟೀ ಶರ್ಟ್, ಶಾಲು ತೊಟ್ಟು ಗುಂಪು ಗುಂಪಾಗಿ ಮೆರವಣಿಗೆಯಲ್ಲಿ ಸಾಗಿದರು.  ಭಕ್ತರಿಗೆ ರಸ್ತೆಯುದ್ದಕ್ಕೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ರೈಟ್- ಲೆಫ್ಟ್ ಬ್ಯಾಡ್ಜ್ ತೊಟ್ಟು ಪೊಲೀಸರು ಭದ್ರತೆ ವಹಿಸಿದ್ದು ಮೆರವಣಿಗೆಯು ಶಾಂತಿಯುತವಾಗಿ ಸಾಗಿತು.

Key words: Hanuman Jayanti, Hunsur, Devotees, peaceful, march

The post ಹುಣಸೂರಿನಲ್ಲಿ ಅದ್ದೂರಿ ಹನುಮ ಜಯಂತಿ: ಶಾಂತಿಯುತ ಮೆರವಣಿಗೆಯಲ್ಲಿ ಸಾಗಿದ ಭಕ್ತರು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತಾಯಿ ಹುಲಿ ಸೆರೆ ಬೆನ್ನಲ್ಲೇ 4 ಮರಿ ಹುಲಿಗಳ ಸಂರಕ್ಷಿಸಿದ ಅರಣ್ಯ ಇಲಾಖೆ.
ಹುಣಸೂರು, ನ.೩೦,೨೦೨೫ :  ತಾಲೂಕಿನ ಹನಗೂಡು ಹೋಬಳಿಯ ಗೌಡನ ಕಟ್ಟೆ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ತಾಯಿ ಹುಲಿ ಸರೆ  ಹಿಡಿದಿದ್ದ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಇಂದು ಹುಲಿಯ ಮರಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲದಿನಗಳಿಂದ ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದ ಹುಲಿ. ನಾಲ್ಕು ದಿನಗಳ ಹಿಂದಷ್ಟೆ ಹುಲಿ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ. ಇದೀಗ ಸೆರೆ ಹಿಡಿದಿದ್ದ ಹುಲಿಯ ಮರಿಗಳನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ  ಸೀಮಾ , ಪ್ರಭುಗೌಡ, ಫಯಾಜ್, ಪರಮೇಶ್,  ACF ಲಕ್ಷ್ಮಿಕಾಂತ್, ಮಹದೇವಯ್ಯ .RFO ನಂದಕುಮಾರ್, ವಿನೋದ್ ಗೌಡ ,  DYRFO  ಚಂದ್ರೇಶ್,ಮಲ್ಲಿಕಾರ್ಜುನ್, ಪರಮೇಶ್, ಮಂಜುನಾಥ್ ಆರಾಧ್ಯ, ಸಂಪತ್,ನವೀನ್, ಸುನಿಲ್ ಭಾಗವಹಿಸಿದ್ದರು.

ಆನೆ ಕಾರ್ಯ ಪಡೆ, ಚಿರತೆ ಕಾರ್ಯ ಪಡೆ, ಹುಣಸೂರು, ವೀರನಹೊಸಹಳ್ಳಿ  , ಕೆ ಆರ್ ನಗರ,ಪಿರಿಯಾಪಟ್ಟಣ  ವಲಯದ ಗಸ್ತು ವನಪಾಲಕರು ಹಾಗೂ ಸಿಬ್ಬಂದಿಗಳು ಸಹ ಕಾರ್ಯಚರಣೆಯಲ್ಲಿ ಕೈಜೋಡಿಸಿದ್ದರು.

ಅರಣ್ಯ ಇಲಾಖೆ ವೈದ್ಯರುಗಳಾದ ಡಾ. ಆದರ್ಶ, ವಸೀಮ್  ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

key words: The forest department, rescued, 4 tiger cubs, mother tiger was captured, Hunsur, Mysore

SUMMARY:

The forest department rescued 4 tiger cubs after the mother tiger was captured.

Forest department officials and staff, who had captured a mother tiger four days ago in Gowdan Katte village of Hanagud hobli in the Hunsur taluk, have today succeeded in capturing the tiger cubs.

The post ತಾಯಿ ಹುಲಿ ಸೆರೆ ಬೆನ್ನಲ್ಲೇ 4 ಮರಿ ಹುಲಿಗಳ ಸಂರಕ್ಷಿಸಿದ ಅರಣ್ಯ ಇಲಾಖೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವ್ಯಾಪಾರದಲ್ಲಿ ಚೌಕಾಸಿ ಮಾಡಿದ ಗ್ರಾಹಕನಿಗೆ ಕತ್ತರಿಯಿಂದ ಇರಿದ ಮಾಲೀಕ
ಮೈಸೂರು,ಸೆಪ್ಟಂಬರ್, 23,2024 (www.justkannada.in): ವ್ಯಾಪಾರದಲ್ಲಿ ಚೌಕಾಸಿ ಮಾಡಿದ ಗ್ರಾಹಕನಿಗೆ ಮಾಲೀಕ ಕತ್ತರಿಯಿಂದ ಚುಚ್ಚಿದ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ.

ಹುಣಸೂರಿನ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.  ಕುಶಾಲನಗರದ ಬೈಚನಹಳ್ಳಿ ನಂದೀಶ ಇರಿತಕ್ಕೆ ಒಳಗಾದ ಗ್ರಾಹಕ. ಬೈಪಾಸ್ ರಸ್ತೆಯ ಮುರುಗೇಶ್ ಜೋಗಿ ಮಾರ್ಕೆಟಿಂಗ್ ಮಾಲೀಕನಿಂದ ಹಲ್ಲೆಯಾಗಿದೆ.

ತನ್ನ ಗೂಡ್ಸ್ ವಾಹನಕ್ಕೆ ಮ್ಯಾಟ್ ಖರೀದಿಸಲು ಮುರುಗೇಶ್ ಜೋಗಿ ಅಂಗಡಿಗೆ ಹೋಗಿದ್ದ ನಂದೀಶ್, ಇದೇ ವೇಳೆ 2300 ಬೆಲೆಯ ಮ್ಯಾಟ್ ಗೆ 2000 ಕ್ಕೆ ಕೇಳಿದ್ದರು. ಇದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಇದೇ ವೇಳೆ ಕೈಯಲ್ಲಿದ್ದ ಕತ್ತರಿಯಿಂದ ಮಾಲೀಕ ಮುರುಗೇಶ್ ಚುಚ್ಚಿದ್ದಾನೆ. ಸಹಾಯಕ್ಕೆ ಬಂದ ರಮೇಶ್ ಮೇಲೂ ಹಲ್ಲೆ ಮಾಡಿದ್ದಾನೆ.  ಗಾಯಗೊಂಡ ನಂದೀಶ್ ಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಲೀಕ ಮುರುಗೇಶ್ ಜೋಗಿ ಸೇರಿ ಮೂವರ ವಿರುದ್ಧ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: hunsur, owner, stabbed, customer

The post ವ್ಯಾಪಾರದಲ್ಲಿ ಚೌಕಾಸಿ ಮಾಡಿದ ಗ್ರಾಹಕನಿಗೆ ಕತ್ತರಿಯಿಂದ ಇರಿದ ಮಾಲೀಕ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಾವೇರಿ ನೀರಾವರಿ ನಿಗಮ ನಿಯಮಿತ, ಹುಣಸೂರು
The post ಕಾವೇರಿ ನೀರಾವರಿ ನಿಗಮ ನಿಯಮಿತ, ಹುಣಸೂರು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹುಣಸೂರು ಪ್ರತ್ಯೇಕ ಜಿಲ್ಲೆಗೆ ಮತ್ತೆ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹ.
ಮೈಸೂರು,ಜನವರಿ,24,2024(www.justkannada.in):  ಹುಣಸೂರು ಪ್ರತ್ಯೇಕ ಜಿಲ್ಲೆ ಕೂಗು ಮತ್ತೆ ಮುನ್ನೆಲೆಗೆ ಬಂದಿದ್ದು ಹುಣಸೂರು ತಾಲ್ಲೂಕನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ದೇವರಾಜ ಅರಸು ಹುಟ್ಟೂರು ಪ್ರತ್ಯೇಕ ಜಿಲ್ಲೆಯಾದ್ರೆ ಸಾಕಷ್ಟು ಅನುಕೂಲಗಳು ಆಗುತ್ತದೆ.ಮೈಸೂರು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಒತ್ತಡ ಇದೆ. ತಾಲೂಕು ಕೇಂದ್ರಗಳಿಗೆ ಹೋಗಲು ಕಷ್ಟವಾಗುತ್ತದೆ. ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. 6 ತಾಲೂಕುಗಳಿಗೆ ನಾಲ್ಕು ಜನ ಶಾಸಕರಿದ್ದೇವೆ‌. ಎಲ್ಲಾ ಶಾಸಕರ ಜೊತೆ ಮಾತನಾಡಿದ್ದೇನೆ. ಸಿಎಂ ಜೊತೆಯೂ ಸಹ ಮಾತನಾಡುತ್ತೇನೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ ಕೋಟೆ ರಾಜ್ಯದಲ್ಲೇ ಸಂಪತ್ಭರಿತ ತಾಲ್ಲೂಕು. ನೂರಾರು ಕೋಟಿ ತಂಬಾಕಿನಿಂದ ಆದಾಯ ಬರುವ ತಾಲ್ಲೂಕುಗಳಿವೆ. ಆರು ತಾಲೂಕುಗಳನ್ನ ಸೇರಿಸಿ ಒಂದು ಜಿಲ್ಲೆಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ಜಿಲ್ಲೆಯವರೇ ಸಿಎಂ ಆಗಿದ್ದಾರೆ. ಹೀಗಾಗಿ ದೇವರಾಜ ಅರಸು ಅವರ ಹೆಸರು ಅಮರವಾಗಬೇಕು, ಹುಣಸೂರು ತಾಲೂಕು ಪ್ರತ್ಯೇಕ ಜಿಲ್ಲೆಯಾಗಬೇಕು. ಎಚ್‌.ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರಿನಲ್ಲಿ ಅತಿ ಹೆಚ್ಚು ಬುಡಕಟ್ಟು ಜನಾಂಗದವರು ಇದ್ದಾರೆ. ಅವರ ಕಷ್ಟಗಳಿಗೆ  ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ. ನಾನು‌ ಈ‌ ವಿಚಾರದಲ್ಲಿ ಹೋರಾಟ, ಸಂಘರ್ಷ ಮಾಡುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ ಎಂದು ಹೆಚ್.ವಿಶ್ವನಾಥ್ ಹೇಳಿದರು.

ರಾಮನನ್ನ ಲೋಕಸಭಾ ಚುನಾವಣೆ ಚೀಪ್  ಕ್ಯಾಂಪೇನರ್ ಮಾಡಿಕೊಂಡಿದ್ದಾರೆ.

ಇದೇ ವೇಳೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವಿಚಾರ ಕುರಿತು ಪ್ರತಿಕ್ರಿಯಿಸಿ ಬಿಜೆಪಿ ವಿರುದ್ಧ ಹೊಗಳಿದ ಹಾಗೆ ತೆಗಳಿದ ಹೆಚ್. ವಿಶ್ವನಾಥ್,  ಬಿಜೆಪಿಯವರು ರಾಮನನ್ನ ಲೋಕಸಭಾ ಚುನಾವಣೆ ಚೀಪ್  ಕ್ಯಾಂಪೇನರ್ ಮಾಡಿಕೊಂಡಿದ್ದಾರೆ. ಇದು ಸರಿಯಲ್ಲ ರಾಮ ಎಲ್ಲರ ಆಸ್ತಿ. ರಾಮಮಂದಿರ ಉದ್ಟಾಟನೆಯಾಗಿದೆ. ಜನರು ಬಹಳ ಸಂತೋಷವಾಗಿದ್ದಾರೆ. ರಾಮ ಭಾರತೀಯರ ಆರಾಧ್ಯದೈವ, ಭಾರತೀಯತ ಅಸ್ಮೀತೆ. ನೀವು ಕೆಲಸ ಮಾಡಿದ್ದೀರಾ ಶಭಾಷ್. ಮೋದಿ 500 ವರ್ಷಗಳ ಸಮಸ್ಯೆಯನ್ನ ಬಗೆಹರಿಸಿದ್ದಾರೆ. ಜನರ ಕಷ್ಟಗಳಿಗೆ ಮೋದಿ ಇವಾಗಲಾದರೂ ಸ್ಪಂದಿಸಬೇಕು. ಚುನಾವಣೆಗೂ ಮುನ್ನ ಪ್ರತಿಯೊಬ್ಬರಿಗೆ 15 ಲಕ್ಷ ಕೊಡುತ್ತೇನೆ ಅಂದಿದ್ರಿ. ಆದಷ್ಟು ಬೇಗ ಹಣವನ್ನ ಹಾಕಿ. ಜನರು ಸಾಕಷ್ಟು ಕಷ್ಟದಲ್ಲಿದ್ದು ಎಲ್ಲಾ ವಸ್ತುಗಳಿಗೆ ಜಿಎಸ್ ಟಿ ಕಟ್ಟುತ್ತಿದ್ದಾರೆ. ಅತಿ ಹೆಚ್ಚು ಜಿಎಸ್ ಟಿ ಕಟ್ಟುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನೀರವ್ ಮೋದಿ ಅವರಿಂದ ದೇಶಕ್ಕೆ ಲಕ್ಷಾಂತರ ಕೋಟಿ ನಷ್ಟವಾಗಿದೆ. ಅವರನ್ನ ಬಂಧಿಸಿ ಕರೆತರುತ್ತೇನೆ ಅಂದಿದ್ದರು ಅದು ಸಹ ಸಾಧ್ಯವಾಗಿಲ್ಲ ಎಂದು ಕುಟುಕಿದರು.

Key words: MLC-H. Vishwanath – again -separate district – Hunsur.

The post ಹುಣಸೂರು ಪ್ರತ್ಯೇಕ ಜಿಲ್ಲೆಗೆ ಮತ್ತೆ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಸವಣ್ಣನವರ ಕಲ್ಪನೆಯ ಅನುಭವ ಮಂಟಪ ಕಟ್ಟಿಕೊಡುವ ಸ್ಥಳ ಅಂದೆರೆ ಅದು ಹುಣಸೂರು ಮಾತ್ರ- ಬಿವೈ ವಿಜಯೇಂದ್ರ.
ಹುಣಸೂರು,ಜುಲೈ,14,2022(www.justkannada.in): ಹುಣಸೂರಿನಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ನನಗೆ ವಿಶೇಷತೆಯಲ್ಲಿ ವಿಶೇಷತೆ ಎನಿಸಿದೆ. ಕಾರಣ ಕರ್ನಾಟಕದಲ್ಲಿ ಅನುಭವ ಮಂಟಪದ ಕಲ್ಪನೆಯನ್ನು ಕಟ್ಟಿಕೊಡುವ ಸ್ಥಳ ಯಾವುದಾದರು ಇದ್ದರೆ ಅದು ದೇವರಾಜ ಅರಸರಿಗೆ ಜನ್ಮಕೊಟ್ಟ ಹುಣಸೂರು ತಾಲ್ಲೂಕು ಮಾತ್ರ ಎಂದು ಹೇಳಲು ಈ ಸಂದರ್ಭದಲ್ಲಿ ಹೆಮ್ಮೆ ಎನಿಸುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.

ಹುಣಸೂರಿನಲ್ಲಿ ಇಂದು ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿವೈ ವಿಜಯೇಂದ್ರ, ಅನುಭವ ಮಂಟಪದ ಕಲ್ಪನೆಯ ಎಲ್ಲಾ ಶರಣರ ಸಮುದಾಯಗಳೂ ಹುಣಸೂರಿನಲ್ಲಿವೆ. ಅದರಲ್ಲೂ ಕಾಯಕ ಸಮುದಾಯಗಳು, ಆದಿವಾಸಿ ಸಮುದಾಯ ಹಾಗೂ ಅಲೆಮಾರಿ ಸಮುದಾಯಗಳು ಈ ತಾಲ್ಲೂಕಿನಲ್ಲಿರುವುದರಿಂದ ಹುಣಸೂರು ಅಣ್ಣ ಬಸವಣ್ಣನವರ ಕಲ್ಪನೆಯ ಅನುಭವ ಮಂಟಪ ಎಂದು ನಾನು ಕರೆಯುತ್ತಿದ್ದೇನೆ. ಬಹುಶಃ ಇದರ ಪ್ರೇರಣೆಯೇ ದಿವಂಗತ ದೇವರಾಜ ಅರಸರಿಗೆ ದೊರೆತಿರಬೇಕೆಂಬುದು ನನ್ನ ಭಾವನೆ. ಆ ಕಾರಣಕ್ಕಾಗಿಯೇ ಬಸವಣ್ಣನವರ ಸಾಮಾಜಿಕ ಕ್ರಾಂತಿಯನ್ನು ಅರಸರು ಅವರ ಆಡಳಿತದಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ ಎಂದರು.

ಇಂದು ಅರಸರ ಚಿಂತನೆ ಹಾಗೂ ಬಸವಣ್ಣನವರ ತತ್ವದ ಅನುಸರಣೆ ಕಾಣುವುದು ಬಲು ಅಪರೂಪವಾಗಿದೆ. ಬಸವಣ್ಣನವರು ಅಂದಿಗೂ, ಇಂದಿಗೂ, ಎಂದೆಂದಿಗೂ ವಿಶ್ವಗುರುವಾಗಿ ಏಕೆ ನಿಲ್ಲುತ್ತಾರೆ ಎಂದರೆ ಅವರ ಕಾಯಕಕ್ರಾಂತಿ, ಅನುಸರಿಸಿದವರು ಸ್ವಾಭಿಮಾನಿಗಳಾಗಿ ಎದ್ದುನಿಲ್ಲುತ್ತಾರೆ. ಜನರ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಇವತ್ತು ಯಡಿಯೂರಪ್ಪನವರಲ್ಲಿ ಜನಕಲ್ಯಾಣದ ಬದ್ಧತೆ ಬಂದಿದ್ದರೆ, ಸ್ವಾಭಿಮಾನದ ಕಿಚ್ಚು ಅವರ ರಕ್ತದ ಕಣ ಕಣದಲ್ಲಿ ತುಂಬಿಕೊಂಡಿದ್ದರೆ ಅದಕ್ಕೆ ಕಾರಣವೇ ಅವರು ಬಸವತತ್ವ ಅನುಸರಿಸಿದ್ದು ಎಂದು ನುಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಸಹ ಬಸವಣ್ಣನವರ ತತ್ವವನ್ನು ಅನುಸರಿಸಿ ಮುನ್ನಡೆಯುತ್ತಿದ್ದಾರೆ. ಅವರ ಆತ್ಮ ನಿರ್ಭರ ಭಾರತದ ಕಲ್ಪನೆಗೆ ಪ್ರೇರಣೆಯೇ ಬಸವಣ್ಣನವರು ಎಂದು ಹೇಳಿದ ಬಿವೈ ವಿಜಯೇಂದ್ರ, ಬಸವಣ್ಣ ನಮ್ಮ ಕನ್ನಡ ನಾಡಿನ ಹೆಮ್ಮೆಯ ಸಂಕೇತ, ಬಸವಣ್ಣನವರ ಕಲ್ಪನೆಯ ಕಾಯಕ ಯೋಗಿಯಾಗಿ ಅವತಾರವೆತ್ತಿದವರು ಈ ನೆಲದ ನಡೆದಾಡುವ ದೇವರಾಗಿದ್ದ ಸಿದ್ದಗಂಗಾ ಶ್ರೀಗಳಾದ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳನ್ನು ಈ ಸಂದರ್ಭದಲ್ಲಿ ಭಕ್ತಿಯಿಂದ ಸ್ಮರಿಸುತ್ತೇನೆ ಎಂದು ತಿಳಿಸಿದರು.

ಇವತ್ತು ಅಭಿಮಾನದಿಂದ ಪ್ರೀತಿಯ ನಿಮ್ಮ ಹುಣಸೂರಿಗೆ ನನ್ನನ್ನು ಕರೆಸಿಕೊಂಡಿದ್ದೀರಿ ಅದಕ್ಕಾಗಿ ನಾನು ಆಭಾರಿ. ನಿಮ್ಮ ಅಭಿಮಾನ ಪ್ರೀತಿಗೆ ನಾನೆಂದೂ  ಋಣಿಯಾಗಿರುತ್ತೇನೆ, ಆದರೆ ನಾವೆಲ್ಲರೂ ಬಸವತತ್ವ ಅನುಸರಿಸೋಣ, ಸ್ವಾವಲಂಬಿ ಭಾರತ ಕಟ್ಟೋಣ, ಕರ್ನಾಟಕದ ಕಲ್ಯಾಣಕ್ಕಾಗಿ ದುಡಿಯೋಣ, ಸ್ವಾಭಿಮಾನಿಯಾಗಿ ನಮ್ಮ ಕಾಲಮೇಲೆ ನಾವು ನಿಲ್ಲೋಣ, ನೀವು ಪ್ರತಿಯೊಬ್ಬರೂ ಶ್ರಮ ಜೀವಿಯಾಗಿ ಈ ನಾಡು ಕಟ್ಟಿ ನಾನು ನಿಮ್ಮೊಂದಿಗಿರುವೆ ಎಂದು ಬಿವೈ ವಿಜಯೇಂದ್ರ ಹೇಳಿದರು.

Key words:  Hunsur -Basava jayanthi-bjp-BY Vijayendra.

The post ಬಸವಣ್ಣನವರ ಕಲ್ಪನೆಯ ಅನುಭವ ಮಂಟಪ ಕಟ್ಟಿಕೊಡುವ ಸ್ಥಳ ಅಂದೆರೆ ಅದು ಹುಣಸೂರು ಮಾತ್ರ- ಬಿವೈ ವಿಜಯೇಂದ್ರ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತುಮಕೂರಿನಲ್ಲಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು.
ತುಮಕೂರು,ಜೂನ್,23,2022(www.justkannada.in): ತುಮಕೂರಿನಲ್ಲಿ ಭೀಕರ ಅಪಘಾತ  ಸಂಭವಿಸಿ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ತುಮಕೂರು ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಗಾಯಾಳುಗಳನ್ನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರು ಕಡೆಯಿಂದ ಹಾಸನ ಕಡೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್  ರಸ್ತೆ ವಿಭಜಕ ದಾಟಿ ಎದುರಿನ ಪಥದಲ್ಲಿ ಬರುತ್ತಿದ್ದ ka 01 mh 2060 ಕಾರಿಗೆ ಡಿಕ್ಕಿಯಾಗಿದೆ.

ಕಾರಿನಲ್ಲಿದ್ದ ನಾಲ್ವರು ಸಾವು ಸಾವನ್ನಪ್ಪಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Four-death-accident – Mysore-Hunsur -road

The post ತುಮಕೂರಿನಲ್ಲಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.