yadiyurappa Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೊ ಜುಲೈ ಮಾಸಕ್ಕೂ ಏನೊ ಒಂಥರ ಸಂಬಂಧ..!
ಬೆಂಗಳೂರು, ಜು.23, 2021 : (www.justkannada.in news) ಪ್ರಸ್ತುತ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ರಾಜಕೀಯ ವಿಪ್ಲವೇ ನಡೆದಿದೆ. ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿರುವ ಬಿ.ಎಸ್. ಯಡಿಯೂರಪ್ಪ ಈ ಬಾರಿಯೂ ಅವಧಿ ಪೂರ್ಣ ಮಾಡುವ ಸೂಚನೆಗಳು ಕಾಣುತ್ತಿಲ್ಲಾ. ಈ ನಡುವೆ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೊ ಜುಲೈ ಮಾಸಕ್ಕೂ ‘ ಏನೊ ಒಂಥರ ಸಂಬಂಧ..’ ಎನಿಸಲಾರಂಭಿಸಿದೆ.

ಇದೇ ಜುಲೈ 26 ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳನ್ನು ಪೂರೈಸಲಿದ್ದಾರೆ. ವಿಪರ್ಯಾಸವೆಂದರೆ, ಅದೇ ದಿನ ಯಡಿಯೂರಪ್ಪ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವರು ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿರುವುದು.

ಸ್ವತಃ ಯಡಿಯೂರಪ್ಪ ನವರೇ ತಾವು ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಾರಿ ಬಿಜೆಪಿಯ ವರಿಷ್ಠರು ಯಡಿಯೂರಪ್ಪ ನವರ ಪದಚುತಿಗೆ ಮುಂದಾಗಿರುವುದು ಅವರ ಮೇಲೆ ಸ್ವಪಕ್ಷದವರೆ ಮಾಡುತ್ತಿರುವ ಅಗಾಧ ಭ್ರಷ್ಟಾಚಾರದ ಆಪಾದನೆಗಳು ಹಾಗೂ ಆಡಳಿತದಲ್ಲಿ ಅವರ ಕುಟುಂಬದವರ ಹಸ್ತಕ್ಷೇಪ ಕಾರಣವಾಗಿದೆ.

ಜುಲೈ ತಿಂಗಳು ಯಡಿಯೂರಪ್ಪ ನವರ ಪಾಲಿಗೆ ಕಂಟಕದ ಮಾಸವೆಂದೇ ಅನಿಸುತ್ತದೆ. ಕಾರಣ, ಯಡಿಯೂರಪ್ಪ ಎರಡನೆಯ ಬಾರಿಗೆ , ಅಂದರೆ 2008 ರಲ್ಲಿ ಮುಖ್ಯ ಮಂತ್ರಿಯಾಗಿದ್ದರು. 2011 ರ ಜುಲೈ 31 ರಂದು ಭ್ರಷ್ಟಾಚಾರ ಆರೋಪ ಹೊತ್ತು ರಾಜೀನಾಮೆ ನೀಡಬೇಕಾಯಿತು.

ಈಗಲೂ ಸಹ ಅವರು ಜುಲೈ ೨೬ ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವರೆಂಬ ಸುದ್ದಿ ಹಬ್ಬಿರುವುದು ಈ ಅನಿಸಕೆಗೆ ಕಾರಣ.

ಕೃಪೆ : ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರು.

oooooooo

key words: bagalore-bjp-yadiyurappa-cm-resignation-july

The post ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೊ ಜುಲೈ ಮಾಸಕ್ಕೂ ಏನೊ ಒಂಥರ ಸಂಬಂಧ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭದ್ರಾ ಮೇಲ್ದಂಡೆ ಕಾಮಗಾರಿ : ಕಿಕ್ ಬ್ಯಾಕ್ ಬಗ್ಗೆ ಎಸಿಬಿ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ.
ಬೆಂಗಳೂರು, ಜೂ.19, 2021 : (www.justkannada.in news) ಭದ್ರಾ ಮೇಲ್ದಂಡೆ ಕಾಮಗಾರಿಯ ರೂ. 20,000 ಕೋಟಿ ಟೆಂಡರ್ ನಲ್ಲಿ ಬಿ.ಎಸ್.ವಿಜಯೇಂದ್ರ ಅವರು ಶೇಕಡಾ ಹತ್ತರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಆರೋಪವನ್ನು ಭ್ರಷ್ಟಾಚಾರ ನಿರೋಧ ದಳ (ಎಸಿಬಿ)ದ ತನಿಖೆಗೆ ಒಪ್ಪಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಹೇಳಿರುವುದಿಷ್ಟು…

ಎರಡು ಕಾರಣಗಳಿಗಾಗಿ ಈ ಆರೋಪ ಗಂಭೀರ ಸ್ವರೂಪದ್ದಾಗಿದೆ. ಮೊದಲನೆಯದಾಗಿ ಆರೋಪ ನೇರವಾಗಿ ಮುಖ್ಯಮಂತ್ರಿಗಳ ಮಗನ ಮೇಲೆ ಮಾಡಲಾಗಿದೆ, ಎರಡನೆಯದಾಗಿ ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯರೇ ಈ ಆರೋಪ ಮಾಡಿದ್ದಾರೆ. ತರಾತುರಿಯಲ್ಲಿ ನೀರಾವರಿ ಇಲಾಖೆ ಸ್ಪಷ್ಟನೆ ನೀಡಿದ್ದನ್ನು ನೋಡಿದರೆ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಸ್ಪಷ್ಟವಾಗಿದೆ.

ನಗರದ ಬಿಐಇಸಿಯಲ್ಲಿ ನಿರ್ಮಿಸಲಾಗಿದ್ದ ಕೋವಿಡ್ ಕೇರ್ ಸೆಂಟರ್ ನ ಹಾಸಿಗೆ ಮತ್ತು ಬೆಡ್ ಗಳ ಖರೀದಿ-ಮಾರಾಟದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಭೂಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಎಚ್.ವಿಶ್ವನಾಥ್ ಅವರ ಇನ್ನೊಂದು ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು.

ಆಡಳಿತ ಪಕ್ಷದ ಶಾಸಕರು ಮತ್ತು ಈಗಿನ ಬಿಜೆಪಿ ಸರ್ಕಾರದ ರೂವಾರಿಯೇ ತಾನೆಂದು ಹೇಳಿಕೊಳ್ಳುತ್ತಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರೇ ಈ ಸರ್ಕಾರವನ್ನು ‘ಗುತ್ತಿಗೆದಾರರ ಸರ್ಕಾರ’ ಎಂದು ಬಣ್ಣಿಸಿರುವುದು ನೋಡಿದರೆ ಅವರ ಬಳಿ ಬೇರೆ ಸಚಿವರ ಭ್ರಷ್ಟಾಚಾರದ ಮಾಹಿತಿಯೂ ಇದ್ದ ಹಾಗಿದೆ. ಎಸಿಬಿ ಅವರನ್ನೂ ಕರೆದು ವಿಚಾರಣೆಗೆ ಒಳಪಡಿಸಿದರೆ ಸತ್ಯ ಬಯಲಿಗೆ ಬರಬಹುದು.

ಮುಖ್ಯಮಂತ್ರಿಗಳು ಮತ್ತು ಅವರ ಮಗನ ವಿರುದ್ಧದ ಆರೋಪ ಇದೇ ಮೊದಲಬಾರಿ ಕೇಳಿಬಂದದ್ದಲ್ಲ, ಇನ್ನೊಬ್ಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಳೆದ ಒಂದು ವರ್ಷದಿಂದ ವಿಜಯೇಂದ್ರ ವಿರುದ್ದ ಆರೋಪಗಳ ಸುರಿಮಳೆಗೈಯ್ಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಇನ್ನೊಬ್ಬ ಶಾಸಕ ಸಿ.ಪಿ.ಯೋಗೀಶ್ವರ್ ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಯಬೇಕು.

ಮುಖ್ಯಮಂತ್ರಿಗಳು ಮತ್ತು ಅವರ ಮಗನ ವಿರುದ್ಧ ಈ ರೀತಿ ಬಹಿರಂಗವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಶಾಸಕರ ವಿರುದ್ದ ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳದೆ ಅವರಿಗೆ ಇನ್ನಷ್ಟು ಅವಕಾಶ ನೀಡುತ್ತಿರುವುದನ್ನು ನೋಡಿದರೆ ಒಂದೋ ಬಿಜೆಪಿಯ ಹೈಕಮಾಂಡ್ ಈ ಆರೋಪಗಳನ್ನು ಒಪ್ಪಿಕೊಂಡಿದೆ ಇಲ್ಲವೇ ಭ್ರಷ್ಟಾಚಾರದ ಹೇಸಿಗೆಯಲ್ಲಿ ಅದೂ ಕೂಡಾ ಪಾಲು ಪಡೆದಿದೆ ಎಂದೇ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ರಾಜ್ಯದ ಆಡಳಿತ ಪಕ್ಷದೊಳಗೆ ಭುಗಿಲೆದ್ದಿರುವ ಭಿನ್ನಮತವನ್ನು ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ಪ್ರತಿನಿಧಿಯಾಗಿ ಬಂದಿದ್ದ ಅರುಣ್ ಸಿಂಗ್ ಎಂಬ ಬಡಪಾಯಿಯ ಕೆಲಸ ‘ಬಂದ ಪುಟ್ಟಾ..ಹೋದ ಪುಟ್ಟಾ’ ಎಂದಾಗಿದೆ. ಪ್ರಧಾನಿ ನರೇಂದ್ರಮೋದಿಯವರ ಪೌರುಷವೇನಿದ್ದರೂ ಪಾಕಿಸ್ತಾನದ ವಿರುದ್ದ ಅಷ್ಟೆ. ಉಳಿದಂತೆ ಚೀನಾದ ದೊರೆಗಳಿರಲಿ, ಕರ್ನಾಟಕದ ಸ್ವಪಕ್ಷೀಯ ಮರಿಗಳಿರಲಿ..ಮೋದಿಯವರು ಪೌರುಷವಿಲ್ಲದ ಉತ್ತರಕುಮಾರ.

key words : karnataka-bjp-corrupt-yadiyurappa-modi-siddu-congress

The post ಭದ್ರಾ ಮೇಲ್ದಂಡೆ ಕಾಮಗಾರಿ : ಕಿಕ್ ಬ್ಯಾಕ್ ಬಗ್ಗೆ ಎಸಿಬಿ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಯಡಿಯೂರಪ್ಪ ರಾಜೀನಾಮೆ ಹೇಳಿಕೆ : ಅಡಕತ್ತರಿಯಲ್ಲಿ ಬಿಜೆಪಿ ಹೈಕಮಾಂಡ್..!
ಮೈಸೂರು, ಜೂ.08, 2021 : (www.justkannada.in news) ಹೈಕಮಾಂಡ್ ಹೇಳಿದ್ರೆ ರಾಜೀನಾಮೆಗೆ ಸಿದ್ಧ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ ಯಡಿಯೂರಪ್ಪನವರ ದಿಢೀರ್ ಹೇಳಿಕೆಯಿಂದ ಕಳೆದ ಒಂದು ವರ್ಷದಿಂದ ದೆಹಲಿ ನಾಯಕರ ಭೇಟಿಗೆ ಕದ್ದು ಮುಚ್ಚಿ ತೆರಳುತ್ತಿದ್ದ ಕೆಲ ಆಕಾಂಕ್ಷಿಗಳಿಗೆ ‘ಬೆಲ್ಲ’ ಸವಿದಂತಾಗಿದೆ.

ಕೊನೆಗೂ ಯಡಿಯೂರಪ್ಪ ಖುರ್ಚಿ ಬಿಟ್ಟು ಮೇಲೇಳುವ ಮಾತಾಡಿರೋದು ಕೆಲ ನಾಯಕರಲ್ಲಿ ಆಸೆಯ ಹಕ್ಕಿ ಮತ್ತೊಮ್ಮೆ ಗರಿಬಿಚ್ಚುವಂತೆ ಮಾಡಿದೆ. ಅಷ್ಟಕ್ಕೂ ಈ ಹೊತ್ತಲ್ಲಿ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಮಾತನಾಡೀರೋ ಹಿಂದೆ ಕೆಲ ಕಾರಣಗಳೂ ಇವೆ.

ಹಲವು ದಿನಗಳಿಂದ ಪಕ್ಷದ ಒಳಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಸಿಎಂ ಬೇಸತ್ತಿದ್ದಾರೆ. ಕೊರೊನಾ ವೇಳೆ ಆರೋಗ್ಯದ ಬಗ್ಗೆ ಚಿಂತಿಸದೆ ಇಳಿ ವಯಸ್ಸಿನಲ್ಲಿಯೂ ಯಡಿಯೂರಪ್ಪ ಸೋಂಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಂಪುಟದಲ್ಲಿರುವ ಸಚಿವರು ಅಷ್ಟಾಗಿ ಆಸಕ್ತಿ ತೋರಿಸದೆ ಇದ್ದರೂ ಯಡಿಯೂರಪ್ಪನವರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಏಕಾಂಗಿ ಹೋರಾಟದಲ್ಲಿದ್ದಾರೆ. ಸ್ವಪಕ್ಷೀಯರೇ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪವಾಗುತ್ತಿದೆ ಎಂದು ರಾಜ್ಯಪಾಲರಿಗೆ ಪತ್ರ ಬರೆದರೂ ಯಡಿಯೂರಪ್ಪ ವಿಚಲಿತರಾಗಲಿಲ್ಲ. ಪುತ್ರ ವಿಜಯೇಂದ್ರ ವಿರುದ್ಧ ಟೀಕೆ-ಟಿಪ್ಪಣಿಗಳು ಬರುತ್ತಿದ್ದರೂ ಅವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಾವು ಮಾಡಬೇಕಾದ ಕೆಲಸಗಳ ಬಗ್ಗೆ ಮಾತ್ರ ಗಮನ ಹರಿಸಿದ್ರು.

ಹೀಗೆ ತಮ್ಮ ಪಾಡಿಗ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದ ಯಡಿಯೂರಪ್ಪನವರನ್ನು ಡಿಸ್ಟರ್ಬ್ ಮಾಡಲೆಂದೇ ಒಂದು ವರ್ಗ ಕೆಲಸ ಮಾಡುತ್ತಿದೆ. ಪದೇ ಪದೆ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬರುವಂತೆ ನೋಡಿಕೊಂಡು ಯಡಿಯೂರಪ್ಪನವರ ವೇಗಕ್ಕೆ ಬ್ರೇಕ್ ಹಾಕೋದೇ ಈ ತಂಡದ ಕೆಲಸ. ಪಕ್ಷದಲ್ಲಿ ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಟ್ಟು ಮುಖ್ಯಮಂತ್ರಿಗಳಿಗೆ ಮುಜುಗರ ಉಂಟು ಮಾಡುವುದು, ತಮ್ಮ ಇಲಾಖೆಯಲ್ಲಿ ಸಿಎಂ ಪುತ್ರನ ಹಸ್ತಕ್ಷೇಪದ ಕುರಿತು ಹೈಕಮಾಂಡ್ ಗೆ ದೂರು ಕೊಡುವುದು ಇವೆಲ್ಲವೂ ಕಳೆದ ಕೆಲ ದಿನಗಳಿಂದ ನಡೆಯುತ್ತಲೇ ಇದೆ. ಇದೆಲ್ಲದರಿಂದ ಬೇಸತ್ತಿರುವ ಸಿಎಂ ಮೊನ್ನೆ ಇದ್ದಕ್ಕಿದ್ದಂತೆ ರಾಜೀನಾಮೆ ವಿಚಾರವನ್ನು ಮಾಧ್ಯಮಗಳ ಮುಂದೆ ತಾವೇ ಪ್ರಸ್ತಾಪ ಮಾಡಿದ್ರು. ಈ ಮೂಲಕ ತಾವು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂಬ ಸಂದೇಶವನ್ನು ಕೆಲ ನಾಯಕರಿಗೆ ರವಾನಿಸಿದ್ರು. ಈ ಮೂಲಕ ಆಯ್ಕೆಯನ್ನು ಹೈಕಮಾಂಡ್ ಗೆ ಬಿಟ್ರು.

ಕಳೆದ ವಾರ ದೆಹಲಿ ನಾಯಕರ ಭೇಟಿಗೆ ತೆರಳಿದ ‘ಸೈನಿಕ’ನಿಗೆ ವರಿಷ್ಠರಿಂದ ಸಿಕ್ಕ ಉತ್ತರದ ಬಗ್ಗೆ ಸಿಎಂಗೆ ಅರಿವಿತ್ತು. ಕೊರೊನಾ ಮುಗಿಯುವವರೆಗೂ ಇತ್ತ ತಲೆ ಹಾಕದಂತೆ ಅತೃಪ್ತ ಆತ್ಮಗಳಿಗೆ ಹೈಕಮಾಂಡ್ ಖಡಕ್ ವಾರ್ನಿಂಗ್ ಕೊಟ್ಟಿದ್ದು ಕೂಡ ಎಲ್ಲ ಭಿನ್ನಮತೀಯ ಚಟುವಟಿಕೆಗಳಿಗೆ ಬ್ರೇಕ್ ಬೀಳುವಂತೆ ಮಾಡಿತ್ತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಯಡಿಯೂರಪ್ಪ ರಾಜೀನಾಮೆ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟಿದ್ರು. ಪ್ರವಾಹ ವೇಳೆ ರಾಜ್ಯಕ್ಕೆ ಬರಬೇಕಿದ್ದ ಪರಿಹಾರ ಸರಿಯಾಗಿ ಕೊಡದೆ ಸತಾಯಿಸಿದ್ದು, ರಾಜ್ಯದ ಪಾಲಿನ ತೆರಿಗೆ ವಿಚಾರದಲ್ಲಿ ಆದ ಅನ್ಯಾಯ, ಕೊವಿಡ್ ವೇಳೆ ಆಕ್ಸಿಜನ್ ಪಡೆಯಲು ನ್ಯಾಯಾಲಯದ ಮೊರೆ ಹೋಗುವಂತೆ ಮಾಡಿದ್ದು.

ಇದೆಲ್ಲದರಿಂದಲೂ ಯಡಿಯೂರಪ್ಪನವರಿಗೆ ಕೇಂದ್ರದ ಧೋರಣೆ ಬಗ್ಗೆ ಅಸಧಾನವಿದೆ. ಯಡಿಯೂರಪ್ಪನವರೇ ಕೆಳಗಿಳಿಯಲಿ ಎಂದು ಕಾಯುತ್ತಿರುವ ಕೇಂದ್ರ ಹಾಗೂ ರಾಜ್ಯದ ಕೆಲ ನಾಯಕರಿಗೆ ಒಂದು ಸ್ಪಷ್ಟ ಸಂದೇಶ ಈ ಹೇಳಿಕೆಯಿಂದ ರವಾನೆಯಾಗಿದೆ.

ಕೆಲ ದಿನಗಳಿಂದ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಮಾನಸಿಕ ಹಿಂಸೆ ಆಗುತ್ತಿದೆ. ಹೀಗಾಗಿ ನನ್ನ ನಿರ್ಧಾರ ತಿಳಿಸಿದ್ದೇನೆ ಎಂದು ಆಪ್ತರ ಬಳಿ ಸಿಎಂ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿಎಂ ಖುರ್ಚಿಗೆ ಅಂಟಿಕೊಂಡಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನನಗಿಂತಲೂ ಬೇರೆ ನಾಯಕರಿದ್ದಾರೆ ಎಂಬ ಮಾರ್ಮಿಕ ನುಡಿ ಯಾರಿದ್ದಾರೆ ನೀವೇ ಹೇಳಿ ಎಂದು ಪರೋಕ್ಷವಾಗಿ ಪ್ರಶ್ನೆ ಮಾಡಿದಂತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಕಟ್ಟಲು ಯಡಿಯೂರಪ್ಪ ಹಗಲು ರಾತ್ರಿ ಶ್ರಮಿಸಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಅವರ ಕೊಡುಗೆ ಅಪಾರ. ರಾಜ್ಯದ ಲಿಂಗಾಯಿತರು, ಮಠ ಮಾನ್ಯಗಳು ಯಡಿಯೂರಪ್ಪನವರ ಬೆನ್ನಿಗಿದ್ದಾರೆ. ಇಂದಿಗೂ ಲಿಂಗಾಯಿತರು ತಮ್ಮ ಸಮುದಾಯದ ಪ್ರಬಲ ನಾಯಕ ಅಂತಾ ಒಪ್ಪಿಕೊಳ್ಳೋದು ಯಡಿಯೂರಪ್ಪನವರನ್ನ ಮಾತ್ರ.

ಇಲ್ಲಿಯವರೆಗೂ ಈ ಸಮುದಾಯದಲ್ಲಿ ಯಡಿಯೂರಪ್ಪನವರಿಗೆ ಸರಿಸಮಾನವಾಗಿ ಯಾವ ನಾಯಕರೂ ಇಲ್ಲ. ಬೇರೆ ನಾಯಕರನ್ನು ಬೆಳೆಸುವ ಪ್ರಯತ್ನಕ್ಕೆ ಯಡಿಯೂರಪ್ಪ ಕೈ ಹಾಕಲೂ ಇಲ್ಲ! ಹೀಗಾಗಿ ಲಿಂಗಾಯಿತರೆಲ್ಲರೂ ಒಪ್ಪಕೊಳ್ಳುವ ಏಕೈಕ ನಾಯಕ ಯಡಿಯೂರಪ್ಪ. ಪ್ರಬಲ ಸಮುದಾಯದ ನಾಯಕನನ್ನು ಬಲವಂತವಾಗಿ ಕೆಳಗಿಳಿಸಿದರೆ ಮುಂಬರುವ ಚುನಾವಣೆಯಲ್ಲಿ ಏನಾಗಬಹುದು ಎಂಬ ಕಲ್ಪನೆ ಹೈಕಮಾಂಡ್ ಗಿದೆ. ಹೀಗಾಗಿಯೇ ಬಿಜೆಪಿ ಪಕ್ಷದಲ್ಲಿ ೭೫ರ ನಂತರ ಅಧಿಕಾರವಿಲ್ಲ ಎಂಬ ನಿಯಮವಿದ್ದರೂ ಹೈಕಮಾಂಡ್ ಯಡಿಯೂರಪ್ಪನವರ ಬದಲಾವಣೆಗೆ ಮುಂದಾಗಲಿಲ್ಲ.

ಚುನಾವಣೆಗಳಲ್ಲಿ ಜನ ಪಕ್ಷಕ್ಕಿಂತ ಸ್ಥಳೀಯ ನಾಯಕತ್ವಕ್ಕೆ, ವ್ಯಕ್ತಿಯ ವರ್ಚಸ್ಸಿಗೆ ಮಣೆ ಹಾಕುತ್ತಾರೆ ಎಂದು ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳ ಚುನಾವಣೆಯಲ್ಲಿ ಸಾಬೀತಾಗಿದೆ. ಹೈಕಮಾಂಡ್ ಏನಾದ್ರೂ ಯಡಿಯೂರಪ್ಪನವರ ಸವಾಲನ್ನು ಒಪ್ಪಿಕೊಂಡು ರಾಜೀನಾಮೆ ಕೇಳಿದರೆ ಅದರಿಂದ ಆಗುವ ನಷ್ಟದ ಬಗ್ಗೆ ಹೈಕಮಾಂಡ್ಗೆ ಅರಿವಿದೆ ಹೀಗಾಗಿ ಸದ್ಯದ ಮಟ್ಟಿಗೆ ಆ ಪ್ರಯತ್ನ ತೀರಾ ವಿರಳ. ಯಡಿಯೂರಪ್ಪನವರ ಮಾತಿನ ಹಿಂದಿರುವ ನಿಗೂಢವನ್ನು ಅರಿಯದೆ ಸಿಎಂ ರೇಸ್ ನಲ್ಲಿರುವ ಕೆಲ ನಾಯಕರು ಸಿಎಂ ಖುರ್ಚಿ ಮೇಲೆ ಆದಾಗಲೇ ಟವೆಲ್ ಹಾಸಿದ್ದಾರೆ. ಸಿಎಂ ಪರ ಹಾಗೂ ವಿರುದ್ಧ ಇರುವವರಿಂದ ಸಹಿ ಸಂಗ್ರಹವೂ ನಡೆದಿದೆ.

ಅದೇನೇ ಇರಲಿ, ಕಣ್ಣಿಗೆ ಕಾಣದ ವೈರಸ್ ಇಡೀ ಜಗತ್ತನ್ನೇ ತಲ್ಲಣಿಸುವಂತೆ ಮಾಡಿದೆ. ಇಂಥಹ ಸ್ಥಿತಿಯಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿಯೇ ಆಗಲಿ ಪರಿಸ್ಥಿತಿ ನಿಭಾಯಿಸುವುದು ಸವಾಲಿನ ಕೆಲಸವೇ ಸರಿ. ರಾಜ್ಯದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಎಷ್ಟೋ ಕಡೆ ಇಂದಿಗೂ ಆಕ್ಸಿಜನ್ ಸಮಸ್ಯೆ, ಬೆಡ್ ಸಮಸ್ಯೆ ನೀಗಿಲ್ಲ. ಉದ್ಯೋಗ ಕಡಿತಗಳಾಗವೆ. ಆರ್ಥಿಕತೆ ಕುಸಿದು ಬಿದ್ದಿದೆ. ಜನ ಮುಂದೇನು ಎಂದು ಯೋಚನೆಗೆ ಬಿದ್ದಿದ್ದಾರೆ. ಆದ್ರೆ ಇದ್ಯಾವುದರ ಪರಿವೆಯೇ ಇಲ್ಲದ ನಮ್ಮನ್ನಾಳುವ ನಾಯಕರು ಮಾತ್ರ ಖುರ್ಚಿ ಬಗ್ಗೆ ಚಿಂತಿಸುತ್ತಿದ್ದಾರೆ. ಇದನ್ನ ವಿಪರ್ಯಾಸ ಅನ್ನಬೇಕೋ.. ಕೊವಿಡ್ ಗಿಂತ ದೊಡ್ಡ ಖಾಯಿಲೆ ಎನ್ನಬೇಕೋ.. ರಾಜ್ಯದ ದುರಂತ ಎನ್ನಬೇಕೋ ಗೊತ್ತಿಲ್ಲ.

– ಸಾಹಿತ್ಯ ಯಜಮಾನ್, ಹಿರಿಯ ಪತ್ರಕರ್ತರು.

key words : bjp-bsy-yadiyurappa-resignation-statement-high-commend-dilemma-Delhi

The post ಯಡಿಯೂರಪ್ಪ ರಾಜೀನಾಮೆ ಹೇಳಿಕೆ : ಅಡಕತ್ತರಿಯಲ್ಲಿ ಬಿಜೆಪಿ ಹೈಕಮಾಂಡ್..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸದನದಲ್ಲಿ ಹುಲಿಯಾ V/S ರಾಜಾಹುಲಿ ಮಾತಿನ ಸಮರ..
ಬೆಂಗಳೂರು, ಫೆ.05, 2021 : (www.justkannada.in news) : ಮುಂಬರುವ ಮೂರು ಉಪ ಚುನಾವಣೆಗಳಲ್ಲಿ ಬಿಜೆಪಿ ಬಹು ದೊಡ್ಡ ಅಂತರದಿಂದ ಗೆಲ್ಲಲಿದೆ. ನಿಮ್ ಕೈಯಲ್ಲಿ ಸಾಧ್ಯವಾದರೆ ನೀವು ಗೆದ್ದು ತೋರಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಿಎಂ ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದರು.

ವಿಧಾನಸಭೆಯಲ್ಲಿ ಮೊದಲಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರಕಾರದ ವೈಫಲ್ಯ, ಮುಖ್ಯಮಂತ್ರಿ ಯಡಿಯೂರಪ್ಪರ ಅಧಕ್ಷತೆ ಬಗ್ಗೆ ಟೀಕಿಸಿದರು, ಇದಕ್ಕೆ ಪ್ರತಿಯಾಗಿ ಸಿಎಂ ಯಡಿಯೂರಪ್ಪ ಮಾತನಾಡಿ ಹೇಳಿದಿಷ್ಟು…

2019ರ ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸದ್ಯದಲ್ಲೇ ಮಸ್ಕಿ, ಸಿಂಧಗಿ, ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಇದರಲ್ಲೂ ನಾವು ಬಹುದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದೇವೆ.

ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ, ಹಿಂದೆಂದೂ ಇಂತಹ ಸ್ಥಿತಿ ಬಂದಿರಲಿಲ್ಲ. ಏಕೆಂದರೆ ಜನ ಕಾಂಗ್ರೆಸ್ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿ ನಿಮಗೆ ಸಾಧ್ಯವಾದರೆ ಈ ಚುನಾವಣೆಗಳನ್ನು ಗೆದ್ದು ತೋರಿಸಿ ಎಂದು ಬಹಿರಂಗ ಸವಾಲು ಹಾಕಿದರು.

ಕಳೆದ ಆರು ತಿಂಗಳಿಂದ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ

ನನಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬೆಂಬಲ ಇರುವ ತನಕ , ಜನರ ಆಶೀರ್ವಾದ ಇರುವವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುತ್ತೇನೆ. ಇಂತಹ ನೂರು ಕೇಸು ಹಾಕಲಿ, ಎದುರಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

key words : bangalore-yadiyurappa-karnataka-bjp-congress-siddaramiaha

The post ಸದನದಲ್ಲಿ ಹುಲಿಯಾ V/S ರಾಜಾಹುಲಿ ಮಾತಿನ ಸಮರ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸ್ವಿಜರ್ಲೆಂಡ್ ಗೆ ಸಿಎಮ್ : ಇಂದಿನಿಂದ 6 ದಿನಗಳ ಕಾಲ ಬಿ.ಎಸ್.ಯಡಿಯೂರಪ್ಪ ವಿದೇಶ ಪ್ರವಾಸ.
ಬೆಂಗಳೂರು, ಜ.19, 2020 (www.justkannada.in news ) : ಸ್ವಿಜರ್ಲೆಂಡ್ ನಲ್ಲಿ ನಡೆಯುವ ವಿಶ್ವ ಅರ್ಥಿಕ ಒಕ್ಕೂಟದ ಶೃಂಗಸಭೆಯಲ್ಲಿ ಭಾಗವಿಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿದೇಶಕ್ಕೆ ತೆರಳಿದರು.

ಕರ್ನಾಟಕದಲ್ಲಿ ಹೊಡಿಕೆ ಸಂಬಂಧ ಪೂರ್ವಭಾವಿ ಸಮಾವೇಶ. ಸ್ವಿಜರ್ಲೆಂಡ್ ಉದ್ಯಮಿಗಳ ಜೊತೆ ಸಭೆಗಳಲ್ಲಿ ಸಿಎಂ ಭಾಗಿ. ಶೃಂಗಸಭೆ ಸಮಾವೇಶದಲ್ಲಿ ಕರ್ನಾಟಕದ ಮಳಿಗಗೆ ಚಾಲನೆ ನೀಡಲಿರುವ ಸಿಎಂ. ಸಿಎಂಗೆ ಸಚಿವ ಜಗದೀಶ್ ಶೆಟ್ಟರ್ ಹಾಗೂ ವಿವಿಧ ಇಲಾಣೆ ಅಧಿಕಾರಿಗಳು ಸಾಥ್ ನೀಡಲಿದ್ದಾರೆ.

ಇಂದು, ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ.

ಇಂದು ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿ. ಬಳಿಕ ನರಸೀಪುರದಲ್ಲಿ ನಡೆಯುವ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರೋ ಸಿದ್ದು. ನಂತರ ಮೈಸೂರಿನ ನಿವಾಸದಲ್ಲಿ ವಾಸ್ತವ್ಯ.

ನಾಳೆ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕೃತಜ್ಞತಾ ಸಮಾರಂಭ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿರುವ ಮಾಜಿ ಸಿಎಂ. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುವ ಕೃತಜ್ಞತಾ ಸಮಾರಂಭ.

key words : bsy-yadiyurappa-switzerland-tour-karnataka

The post ಸ್ವಿಜರ್ಲೆಂಡ್ ಗೆ ಸಿಎಮ್ : ಇಂದಿನಿಂದ 6 ದಿನಗಳ ಕಾಲ ಬಿ.ಎಸ್.ಯಡಿಯೂರಪ್ಪ ವಿದೇಶ ಪ್ರವಾಸ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.