now Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪಬ್ಲಿಕ್ TV ಈಗ ರಾಜ್ಯದಲ್ಲಿ ನಂಬರ್ 1
ಬೆಂಗಳೂರು,ಫೆಬ್ರವರಿ,21,2026 (www.justkannada.in): ಕನ್ನಡ ಟಿವಿ ಪತ್ರಿಕೋದ್ಯಮ ಈ ವಾರ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ. ಕಳೆದ 20 ವರ್ಷಗಳಿಂದ ಟಿವಿ ಮಾಧ್ಯಮದಲ್ಲೇ ಅಧಿಪತ್ಯ ಸಾಧಿಸಿ ನಂಬರ್ ಪಟ್ಟದಲ್ಲಿದ್ದ ಟಿವಿ9 ಹಿಂದಿಕ್ಕಿ ಪಬ್ಲಿಕ್ ಟಿವಿ ನಂಬರ್ ಒನ್ ಪಟ್ಟಕ್ಕೇರಿದೆ. ಆ ಮೂಲಕ ಮಾಧ್ಯಮ ಲೋಕವೇ ನಿಬ್ಬೆರಗಾಗುವಂತೆ ಮಾಡಿದೆ.

ಬಾರ್ಕ್ ನೀಡಿರುವ ಈ ವಾರ (06ರಲ್ಲಿ) ಕನ್ನಡ ನ್ಯೂಸ್ ಚಾನೆಲ್‌ ಗಳ ಟಿಆರ್‌ಪಿ ಏರುಪೇರಾಗಿದೆ. BARC ವರದಿ ಪ್ರಕಾರ, ಕರ್ನಾಟಕದ ನ್ಯೂಸ್ ಚಾನೆಲ್‌ ಗಳ ಟಿಆರ್‌ ಪಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ರಾಜ್ಯ ಮಟ್ಟದಲ್ಲಿ ಒಟ್ಟು ನ್ಯೂಸ್ ಟೋಟಲ್ 351ರಿಂದ 321ಕ್ಕೆ ಇಳಿಕೆಯಾಗಿದ್ದು, ಶೇಕಡಾ 9ರಷ್ಟು ಕುಸಿತ ಕಾಣುವ ಮೂಲಕ ದಾಖಲಾಗಿದೆ.

ಈವರೆಗೆ ನಂಬರ್ 3 ಸ್ಥಾನದಲ್ಲಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್‌ ಕೂಡ  ಕುಸಿತ ಕಂಡಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ರಾಜ್ಯ ಮಟ್ಟದಲ್ಲಿ 33ರಿಂದ 28ಕ್ಕೆ ಇಳಿದು 15% ಕುಸಿತ ಕಂಡಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ 24% ಇಳಿಕೆ, Below 10L Urban ವಿಭಾಗದಲ್ಲಿ 31% ಕುಸಿತ, ಗ್ರಾಮೀಣ ಭಾಗದಲ್ಲಿ 6% ಇಳಿಕೆ ದಾಖಲಾಗಿದೆ.

ಈ ನಡುವೆ ನ್ಯೂಸ್18 ಕನ್ನಡ ಕೊಂಚ ಏರಿಕೆ ಕಂಡಿದ್ದರೂ ನಂಬರ್ 3 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನ್ಯೂಸ್18 ಕನ್ನಡ ರಾಜ್ಯದಲ್ಲಿ 65ರಿಂದ 68ಕ್ಕೆ ಏರಿ 5% ವೃದ್ಧಿ ಕಂಡಿದೆ. ಗ್ರಾಮೀಣ ಪ್ರದೇಶದಲ್ಲಿ 7% ಹಾಗೂ Below 10L Urban ವಿಭಾಗದಲ್ಲಿ 9% ಏರಿಕೆ ಕಂಡುಬಂದಿದೆ.

ಪಬ್ಲಿಕ್ ಟಿವಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೊಂಚ ಇಳಿಕೆ ಕಂಡಿದ್ದರೂ ( ನಂಬರ್ ನಲ್ಲಿ  – 75ರಿಂದ 73ಕ್ಕೆ ಇಳಿದು 3%)  ನಂಬರ್ 1 ಪಟ್ಟಕ್ಕೆ ಏರಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ 10% ಇಳಿಕೆ ಕಂಡುಬಂದಿದ್ದರೂ, Below 10L Urban ವಿಭಾಗದಲ್ಲಿ 5% ಏರಿಕೆ ಕಂಡಿದೆ.

ಈ‌ ನಡುವೆ , ಟಿವಿ9 ಕನ್ನಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.  ಟಿವಿ9 ಕನ್ನಡ ರಾಜ್ಯದಲ್ಲಿ 94ರಿಂದ 71ಕ್ಕೆ ಇಳಿದು 24% ಕುಸಿತ ಕಂಡಿದೆ. ಬೆಂಗಳೂರು ವಿಭಾಗದಲ್ಲಿ 32% ಹಾಗೂ ಗ್ರಾಮೀಣ ಭಾಗದಲ್ಲಿ 16% ಇಳಿಕೆ ಕಾಣುವ ಮೂಲಕ ಇಂದೆಂದೂ ಕಂಡರಿದ ರೀತಿಯಲ್ಲಿ ದಾಖಲೆ ಪ್ರಮಾಣದ ಇಳಿಕೆಯಾಗಿದೆ.

ಇತರೆ ಚಾನೆಲ್‌ ಗಳ ಸ್ಥಿತಿ

ನ್ಯೂಸ್ 1st ಕನ್ನಡಕ್ಕೆ ರಾಜ್ಯದಲ್ಲಿ 9% ಏರಿಕೆ ಕಂಡರೆ, ಟಿವಿ5 ಕನ್ನಡ 35% ವೃದ್ಧಿ ಕಂಡು ಗಮನ ಸೆಳೆದಿದೆ.

ಈ ನಡುವೆ , ಆರ್ ಕನ್ನಡ 27% ಕುಸಿತ, ಪವರ್ ಟಿವಿಗೆ 8% ಇಳಿಕೆ ಕಂಡರೆ ರಾಜ್ ನ್ಯೂಸ್ ಕನ್ನಡ ಸ್ಥಿರವಾಗಿದೆ. ಈ‌ ನಡುವೆ ಗ್ಯಾರಂಟಿ ನ್ಯೂಸ್ 24×7ಗೆ 57% ಕುಸಿತ ಕಂಡು ಕೊನೆ ಸ್ಥಾನದಲ್ಲಿದೆ.

Key words: Public TV, now, number1,  state.

The post ಪಬ್ಲಿಕ್ TV ಈಗ ರಾಜ್ಯದಲ್ಲಿ ನಂಬರ್ 1 appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Mysore Dasara: ಗಜಪಡೆಗೆ ಈಗ” ಕಮಾಂಡೋ ” ಸೆಕ್ಯೂರಿಟಿ..!
ಮೈಸೂರು,ಸೆಪ್ಟಂಬರ್,29,2025 (www.justkannada.in): ಮೈಸೂರು ದಸರಾ ಗಜಪಡೆಯ ಆನೆ ಬಳಿಗೆ ಹೋಗಿ ಕೆಲವರು ಫೋಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ  ಸೂಚಿಸಲಾಗಿದೆ. ಹಾಗೆಯೇ ದಸರಾ ಆನೆಗಳ ಬಳಿ ಹೋಗದಂತೆ ತಡೆಯಲು ಕಮಾಂಡೋ ಬಳಕೆಗೂ ತಿಳಿಸಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಮೈಸೂರು ಅರಮನೆಯಲ್ಲಿಂದು ಜಂಬೂಸವಾರಿಯ ಪ್ರಧಾನ ಆಕರ್ಷಣೆಯಾದ ದಸರಾ ಆನೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಾವುತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಭೋಜನ ಬಡಿಸುದ ಬಳಿಕ ಮಾತನಾಡಿದ ಅವರು,  ಆನೆ ಪಳಗಿಸುವ ಕಲೆಯನ್ನು ವಂಶಪಾರಂಪರ್ಯವಾಗಿ ಕರಗತ ಮಾಡಿಕೊಂಡಿರುವ ಮಾವುತರು ಹಾಗೂ ಕಾವಾಡಿಗಳು ಪುಂಡಾನೆ, ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ವನ್ಯಜೀವಿ -ಮಾನವ ಸಂಘರ್ಷ ನಿಯಂತ್ರಣದಲ್ಲಿ ಮಾವುತರು ಮತ್ತು ಕಾವಾಡಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಇಡೀ ದೇಶದಲ್ಲಿಯೇ ಆನೆಗಳನ್ನು ಪಳಗಿಸುವಲ್ಲಿ ಕರ್ನಾಟಕದ ಮಾವುತ ಮತ್ತು ಕಾವಾಡಿಗಳಿಗೆ ವಿಶೇಷ ಕೌಶಲ್ಯವಿದೆ ಹೀಗಾಗಿಯೇ ನೆರೆಯ ಆಂಧ್ರಪ್ರದೇಶ, ಗೋವಾ ಮೊದಲಾದ ರಾಜ್ಯಗಳು ಸಹ ಕುಮ್ಕಿ ಆನೆಯ ಸಹಾಯಕ್ಕೆ ರಾಜ್ಯಕ್ಕೆ ಮನವಿ ಮಾಡುತ್ತವೆ. ಮಾವುತರು ಮತ್ತು ಕಾವಾಡಿಗಳಿಗೆ ಆನೆಗಳನ್ನು ಸೆರೆ ಹಿಡಿಯುವ ಮತ್ತು ಪಳಗಿಸುವ, ನಿಯಂತ್ರಿಸುವ, ಪಾಲನೆ ಹಾಗೂ ಪೋಷಣೆ ಮಾಡುವ ಕಲೆ ರಕ್ತಗತವಾಗಿ ಬಂದಿದೆ. ಈ ಕಲೆಯನ್ನು ಪಠ್ಯ ಪುಸ್ತಕದಿಂದ ಅಥವಾ ಶಾಲಾ-ಕಾಲೇಜಿನಲ್ಲಿ ಕಲಿ ಸಲುಸಾಧ್ಯವಿಲ್ಲ ಎಂದ ಸಚಿವ ಈಶ್ವರ ಖಂಡ್ರೆ, ನಮ್ಮ ರಾಜ್ಯದ ಮಾವುತರು ಹಾಗೂ ಕಾವಾಡಿಗಳಿಗೆ ವಂಶಪಾರಂಪರ್ಯವಾಗಿ ಕೌಶಲ್ಯವಿದ್ದರೂ, ಅವರಿಗೆ ತಜ್ಞರಿಂದ ವೃತ್ತಿ ತರಬೇತಿಯನ್ನೂ ಕೊಡಿಸಲಾಗುತ್ತಿದ್ದು, ಇದು ಅವರ ನೈಪುಣ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಮಾವುತರು, ಕಾವಾಡಿಗಳ ನ್ಯಾಯಯುತ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವ ಭರವಸೆ ನೀಡಿದರು.

ಸೆಲ್ಫಿ, ರೀಲ್ಸ್ ಗೆ ಅವಕಾಶವಿಲ್ಲ:

ದಸರಾ ಆನೆಗಳ ಸೊಂಡಿಲು, ದಂತ ಹಿಡಿದುಕೊಂಡು ಫೋಟೋ ರೀಲ್ಸ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳನ್ನು ಪಳಗಿಸಿದ್ದರೂ, ಕೆಲವೊಂದು ಸಂದರ್ಭದಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದೂ ಅಸಾಧ್ಯ. ಹೀಗಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಬಳಿ ಯಾರಿಗೂ ಬಿಡದಂತೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ಫೋಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ  ಸೂಚಿಸಲಾಗಿದೆ. ದಸರಾ ಆನೆಗಳ ಬಳಿ ಹೋಗದಂತೆ ತಡೆಯಲು ಕಮಾಂಡೋ ಬಳಕೆಗೂ ತಿಳಿಸಲಾಗಿದೆ ಎಂದರು.

ಕಳೆದ 18ರಂದು ಮಹಿಳೆಯೊಬ್ಬರು ಸಿಬ್ಬಂದಿಯ ಕಣ್ತಪ್ಪಿಸಿ ರೀಲ್ಸ್ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ. ಇದು ಮೇಲ್ನೋಟಕ್ಕೆ ಕರ್ತವ್ಯಲೋಪವಾಗಿದೆ ಎಂಬುದನ್ನು ಪುಷ್ಟೀಕರಿಸಿದ್ದು, ಅಧಿಕಾರಿ, ಸಿಬ್ಬಂದಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ತಿಂಗಳೇ ಯಸಳೂರಿನಲ್ಲಿ ಅರ್ಜುನ ಆನೆ ಸ್ಮಾರಕ ಅನಾವರಣ:

ಮೈಸೂರು ದಸರಾ ಜಂಬೂಸವಾರಿಯಲ್ಲಿ 8 ಬಾರಿ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆಹಾಕುತ್ತಾ ಜನಮನ ಗೆದ್ದಿದ್ದ ಅರ್ಜುನ ಆನೆ ಹಾಸನ ಜಿಲ್ಲೆ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದು, ಸರ್ಕಾರ ಅರ್ಜುನ ಇದ್ದ ನಾಗರಹೊಳೆಯ ಬಳ್ಳೆ ಮತ್ತು ಯಸಳೂರಿನಲ್ಲಿ ಸ್ಮಾರಕ ನಿರ್ಮಿಸಿದೆ ಎಂದರು.

ಈಗಾಗಲೇ ಬಳ್ಳೆಯ ಸ್ಮಾರಕವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಗಿದ್ದು, ಈ ತಿಂಗಳಲ್ಲಿ ಯಸಳೂರಿನಲ್ಲೂ ಅರ್ಜುನ ಆನೆ ಸ್ಮಾರಕ ಉದ್ಘಾಟಿಸುವುದಾಗಿ ತಿಳಿಸಿದರು.

Key words: Mysore Dasara, Gajapade, Now, commando security,

The post Mysore Dasara: ಗಜಪಡೆಗೆ ಈಗ” ಕಮಾಂಡೋ ” ಸೆಕ್ಯೂರಿಟಿ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಬ್ಬ ಅಜಿತ್ ಪವಾರ್ ಹುಟ್ಟಿ ಕೊಳ್ಳುತ್ತಿದ್ದಾರೆ‌- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಟೀಕೆ.
ಮೈಸೂರು,ನವೆಂಬರ್,4,2023(www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಬ್ಬ ಅಜಿತ್ ಪವಾರ್ ಹುಟ್ಟಿ ಕೊಳ್ಳುತ್ತಿದ್ದಾರೆ‌. ಸರ್ಕಾರ ಬೀಳುವ ದಿನಗಣನೆ ಈಗ ಆರಂಭವಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ,  ನಾನು ತಿಂಗಳು ವರ್ಷದ ಮಾತು ಆಡುತ್ತಿಲ್ಲ. ಕೆಲವೇ ದಿನಗಳಲ್ಲಿ ಸರ್ಕಾರ ಬೀಳಬಹುದು. ಕಾಂಗ್ರೆಸ್ ಸರ್ಕಾರ ಬಿದ್ದು ಅಲ್ಲಿನ ಯಾವುದೇ ಅಜಿತ್ ಪವಾರ್ ಬಿಜೆಪಿ ಜೊತೆ ಬಂದರೆ ನಾವು ಸೇರಿಸಿಕೊಳ್ಳುತ್ತೇವೆ. ಆದರೆ, ಬಂದ ಅಜಿತ್ ಪವಾರ್‌ ಗೆ ಸಿಎಂ ಸ್ಥಾನ ಕೊಡುವುದಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್​ನಲ್ಲಿ ಈಗ ಹಾದಿ ಬೀದಿಯಲ್ಲಿ ಹೋಗುವವರೆಲ್ಲರೂ ಸಿಎಂ ಸ್ಥಾನ ಕೇಳುತ್ತಿದ್ದಾರೆ‌. ಪ್ರಿಯಾಂಕ್ ಖರ್ಗೆ ಅವರ  ತಂದೆಗೆ ಸಿಎಂ ಸ್ಥಾನ ಕೇಳಿದ್ದರೆ ಮೆಚ್ಚಿಕೊಳ್ಳುತ್ತಿದ್ದೆ. ಆದರೆ, ಅವರೇ ಕೇಳುತ್ತಿದ್ದಾರೆ, ಇದು ನಗೆಪಾಟಲಿಗೆ ವಿಚಾರ ಎಂದು ಕೆ.ಎಸ್ ಈಶ್ವರಪ್ಪ ಟೀಕಿಸಿದರು.

Key words:  countdown fall government now begun – former minister-KS Eshwarappa.

The post ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಬ್ಬ ಅಜಿತ್ ಪವಾರ್ ಹುಟ್ಟಿ ಕೊಳ್ಳುತ್ತಿದ್ದಾರೆ‌- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಟೀಕೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇನ್ನು ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸರಾಗ.
ಬೆಂಗಳೂರು, ನವೆಂಬರ್,5,2022 (www.justkannada.in): ಬೆಂಗಳೂರು ಮೈಸೂರು ನಡುವೆ ಪ್ರಯಾಣಿಸುವವರಿಗೆ ಇಲ್ಲೊಂದು ಒಳ್ಳೆಯ ಸುದ್ದಿ ಇದೆ. ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ತನ್ನ ಮಾತಿನಂತೆ ನಡೆದುಕೊಂಡರೆ ಈ ಹೊಸ ಹೆದ್ದಾರಿ ಬಹುತೇಕ ಈ ವರ್ಷ ಡಿಸೆಂಬರ್ 31ರ ವೇಳೆಗೆ ಸಂಪೂರ್ಣವಾಗಿ ಓಡಾಟಕ್ಕೆ ತೆರೆಯಲ್ಪಡುತ್ತದೆ.

ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಈ ಕುರಿತು ಮಾತನಾಡಿ, ಡಿಸೆಂಬರ್ 31ರ ವೇಳೆಗೆ ಬೆಂಗಳೂರು-ಮೈಸೂರು ಹೊಸ ಹೆದ್ದಾರಿಯ ಮದ್ದೂರು ಬೈಪಾಸ್ ಹಾಗೂ ಮೇಲ್ಸೇತುವೆ, ಮಂಡ್ಯ ಬೈಪಾಸ್ ಮತ್ತು ಶ್ರೀರಂಗಪಟ್ಟಣದ ಬಳಿಯ ಬೈಪಾಸ್ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯ ಮೊದಲ ಹಂತ ನಿಡಘಟ್ಟದವರೆಗೆ (ಬೆಂಗಳೂರು ಕಡೆಯಿಂದ ಬರುವಾಗ ಮದ್ದೂರಿಗೆ ಮುಂಚೆ) ಇದೆ. ನಿಡಘಟ್ಟದವರೆಗಿನ ರಸ್ತೆ ಕಾರ್ಯಾಚರಣೆಗೊಂಡಿದ್ದು, ಪ್ರಸ್ತುತ ಕುಂಬಳಗೋಡು ಮೇಲ್ಸೇತುವೆ, ಬಿಡದಿ ಬೈಪಾಸ್ (೬.೯ ಕಿ.ಮೀ. ಉದ್ದ) ಹಾಗೂ ರಾಮನಗರ-ಚನ್ನಪಟ್ಟಣ ಬೈಪಾಸ್ (೨೨.೩೫ ಕಿ.ಮೀ.) ರಸ್ತೆಗಳಲ್ಲಿ ವಾಹನ ಸಂಚಾರ ಆರಂಭವಾಗಿದೆ. ಆದಾಗ್ಯೂ, ಎರಡನೇ ಹಂತದ ಕಾಮಗಾರಿಗಳು ನಡೆಯುತ್ತಿರುವುದರಿಂದ (ನಿಡಘಟ್ಟದಿಂದ ಮೈಸೂರುವರೆಗೆ) ಬಹುಪಾಲು ಪ್ರಯಾಣೀಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.

ಹೆದ್ದಾರಿಯ ಇತ್ತೀಚಿನ ಅಪ್‌ ಡೇಟ್ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, “ಪ್ರಸ್ತುತ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನ ಸವಾರರು ಮದ್ದೂರಿನವರೆಗೆ ಸುಗಮವಾಗಿ ಓಡಾಡುವಂತಿದೆ. ಮದ್ದೂರು ಬಳಿಯ ೩.೮ ಕಿ.ಮೀ. ಉದ್ದದ ಮೇಲ್ಸೇತುವೆ ಬಹುತೇಕ ಪೂರ್ಣಗೊಂಡಿದೆ. ಇದು ಕಾರ್ಯಾಚರಣೆಯನ್ನು ಆರಂಭಿಸಿದ ನಂತರ ಪ್ರಯಾಣಿಕರಿಗೆ ೨೦ ನಿಮಿಷಗಳ ಸಮಯ ಉಳಿತಾಯವಾಗುತ್ತದೆ. ಪ್ರಸ್ತುತ ಈ ಭಾಗದ ರಸ್ತೆ ಪೂರ್ಣಗೊಳ್ಳುವ ಹಂತದಲ್ಲಿದೆ. ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿಯ ಉಳಿದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ (ಇನ್ನು ೧೦ ಜಾಯಿಂಟ್‌ ಗಳು ಪೂರ್ಣಗೊಳ್ಳಬೇಕಿದೆ). ಇದಾದ ನಂತರ, ಲೋಡ್ ಮತ್ತು ಸುರಕ್ಷತೆ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ತಿಗೊಂಡ ನಂತರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು,” ಎಂದು ವಿವರಿಸಿದರು.

ಪ್ರಸ್ತುತ, ಹೆಚ್ಚಿನ ಮಳೆಯಿಂದಾಗಿ ಕಾಮಗಾರಿಗಳು ಸ್ವಲ್ಪ ವಿಳಂಬವಾಗುತ್ತಿದೆ. ಡಿಸೆಂಬರ್ 31ರ ವೇಳೆಗೆ ಬೆಂಗಳೂರ-ಮೈಸೂರು ನಡುವಿನ ಈ ನೂತನ ಹೆದ್ದಾರಿಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸಲು ಯೋಚಿಸಿದ್ದು, ಪ್ರಯಾಣಿಕರು ಮದ್ದೂರು ಬೈಪಾಸ್/ ಮೇಲ್ಸೇತುವೆ, ಮಂಡ್ಯ ಬೈಪಾಸ್ (೧೦ ಕಿ.ಮೀ.), ಹಾಗೂ ಶ್ರೀರಂಗಪಟ್ಟಣ (೮ ಕಿ.ಮೀ.) ರಸ್ತೆಯನ್ನು ಬಳಸಬಹುದಾಗಿದೆ. ಆದರೆ ಇಂಡವಾಲ, ಬೂದನೂರು, ಹನಕೆರೆ ಹಾಗೂ ಗೌಡಹಳ್ಳಿಗಳಲ್ಲಿ ನಾಲೆ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿದ್ದು, ಇದು ಡಿಸೆಂಬರ್ ೩೧ರವರೆಗೆ ಮುಂದುವರೆಯುವ ಸಾಧ್ಯತೆಗಳಿವೆ. ಇದರಿಂದಾಗಿ ಹಲವು ಸಣ್ಣಪುಟ್ಟ ತಿರುವುಗಳಿವೆ.

ಇಡೀ ಯೋಜನೆ ಈ ವರ್ಷ ದಸರಾ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಎನ್‌ ಹೆಚ್‌ಎಐ ತಿಳಿಸಿದ ಪ್ರಕಾರ ಮಳೆಯಿಂದಾಗಿ ಕಾಮಗಾರಿಗಳು ವಿಳಂಬಗೊಂಡವು. ಈ ಹಿನ್ನೆಲೆಯಲ್ಲಿ ಈ ಹೆದ್ದಾರಿಯ ಇಕ್ಕೆಲಗಳಲ್ಲಿನ ಕೆಲವು ಕೆರೆಗಳು ಕೋಡಿ ಹರಿದು ಹಲವು ಭಾಗಗಳು ಮಳೆನೀರಿನಲ್ಲಿ ಮುಳುಗಿದವು. ಈ ಹೆದ್ದಾರಿಯ ಮೊದಲ ಹಂತದ ಕಾಮಗಾರಿಗಳ ಒಟ್ಟು ವೆಚ್ಚ ರೂ.೩,೫೦೧ ಕೋಟಿ ಹಾಗೂ ಎರಡನೇ ಹಂತದ ಕಾಮಗಾರಿಗಳ ವೆಚ್ಚ ರೂ.೨,೯೨೦ ಕೋಟಿಗಳಾಗಿವೆ. ಈ ಯೋಜನೆಯಡಿ ನಡುವೆ ಸಿಗುವ ಪಟ್ಟಣಗಳ ಬಳಿ ಸಂಚಾರ ದಟ್ಟಣೆಯಾಗುವುದನ್ನು ತಪ್ಪಿಸಲು ಐದು ಬೈಪಾಸ್ ರಸ್ತೆಗಳಿವೆ.

ಇದರ ಜೊತೆಗೆ, ಎಂಟು ಕಿ.ಮೀ. ಉದ್ದದ ಕಾರಿಡಾರ್ ಹಾಗೂ ಒಂಬತ್ತು ಸೇತುವೆಗಳು, ೪೪ ಚಿಕ್ಕ ಸೇತುವೆಗಳು ಹಾಗೂ ನಾಲ್ಕು ರೈಲ್ವೆ ಮೇಲ್ಸೇತುವೆಗಳೀವೆ. ಎನ್‌ಹೆಚ್‌ಎಐ ಪ್ರಾಧಿಕಾರಿಗಳ ಪ್ರಕಾರ ಈ ರಸ್ತೆ ಪೂರ್ಣಗೊಂಡ ನಂತರ, ಈ ಹಿಂದೆ ಮೂರು ಗಂಟೆಗಳಿದ್ದ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಕೇವಲ ೭೫ ನಿಮಿಷಗಳಾಗಲಿವೆ. ಈ ಹೆದ್ದಾರಿಗೆ ಕುಂಬಳಗೋಡು ಹಾಗೂ ಶ್ರೀರಂಗಪಟ್ಟಣದ ಬಳಿ ಟೋಲ್ ಬೂತ್‌ಗಳಿರುತ್ತವೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Traveling –between- Bangalore – Mysore- now -easy.

The post ಇನ್ನು ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸರಾಗ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಿದ್ಧರಾಮಯ್ಯಗೆ ಈಗ ತಪ್ಪಿನ ಅರಿವಾಗಿದೆ: ಒಳ್ಳೆಯ ಬುದ್ಧಿ ಬಂದಿದೆ- ಶಾಮನೂರು ಶಿವಶಂಕರಪ್ಪ.
ದಾವಣಗೆರೆ,ಆಗಸ್ಟ್,20, 2022(www.justkannada.in):  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗ ತಪ್ಪಿನ ಅರಿವಾಗಿದೆ. ಒಳ್ಳೆಯ ಬುದ್ಧಿ ಬಂದಿದೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ಸಿದ್ಧರಾಮಯ್ಯ ಧರ್ಮ ಒಡೆಯಲು ಕೈ ಹಾಕಲ್ಲ ಎಂದಿದ್ದಾರೆ.  ಇದರಲ್ಲಿ ಸಿದ್ಧರಾಮಯ್ಯ ಪಾತ್ರ ಇರಲಿಲ್ಲ.  ಬೇರೆಯವರ ಒತ್ತಡ ಇತ್ತು. ಆ ಆರೋಪ ಮಾತ್ರ ಅವರ ಮೇಲೆ ಬಂತು ಅಷ್ಟೇ. ನಾನು ಈ ಬಾರಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ನಿನ್ನೆ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ಧ ಮಾಜಿ ಸಿಎಂ ಸಿದ್ದರಾಮಯ್ಯ, ಮಠದ ಶ್ರೀಗಳ ಬಳಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಕುರಿತು ಪಶ್ಚಾತಾಪ ವ್ಯಕ್ತಪಡಿಸಿದ್ಧರು ಎನ್ನಲಾಗಿತ್ತು.

Key words: Siddaramaiah –now- realizes -his mistake-Shamanur Shivshankarappa.

The post ಸಿದ್ಧರಾಮಯ್ಯಗೆ ಈಗ ತಪ್ಪಿನ ಅರಿವಾಗಿದೆ: ಒಳ್ಳೆಯ ಬುದ್ಧಿ ಬಂದಿದೆ- ಶಾಮನೂರು ಶಿವಶಂಕರಪ್ಪ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಈಗ ಮೆಟ್ರೊದಲ್ಲಿ ಸೈಕಲ್‌ ಗಳಿಗೂ ಸ್ಥಳಾವಕಾಶ..
ಬೆಂಗಳೂರು, ಜೂನ್ 8, 2022(www.justkannada.in): ಹಸಿರು ಸಂಚಾರವನ್ನು ಪ್ರೋತ್ಸಾಹಿಸಲು ನಮ್ಮ ಮೆಟ್ರೊ, ಮೆಟ್ರೋ ರೈಲುಗಳಲ್ಲಿ ಮಡಚಿಡುವ ಬೈಸಿಕಲ್‌ ಗಳನ್ನು ತೆಗೆದುಕೊಂಡು ಹೋಗಲು ಅಧಿಕೃತವಾಗಿ ಅನುಮತಿಸಿದೆ. ಈ ಹಿಂದೆಯೂ ಸಹ ಇದಕ್ಕೆ ಅನುಮತಿ ಇತ್ತು, ಆದರೆ ಈ ಕುರಿತು ಸೈಕಲ್ ಸವಾರರಲ್ಲಿ ಹೆಚ್ಚು ಅರಿವಿರಲಿಲ್ಲ.

ಈ ಮಡಚಿಡುವ ಸೈಕಲ್‌ ಗಳನ್ನು ಕೊನೆಯ ಬೋಗಿಯಲ್ಲಿ ಇಡಬಹುದು. ಈ ಬೆಳವಣಿಗೆಯಿಂದ ಇನ್ನು ಮುಂದೆ ದೂರ ಪ್ರಯಾಣಿಸುವವರು, ಮೆಟ್ರೋ ರೈಲು ಹಿಡಿಯಲು ಸ್ವಲ್ಪ ದೂರ ಕ್ರಮಿಸಬೇಕಾದಂತಹವರು ತಮ್ಮ ಜೊತೆಗೆ ಸೈಕಲ್ ಅನ್ನು ಕೊಂಡೊಯ್ಯುವ ಮೂಲಕ ಮೆಟ್ರೊ ರೈಲಿನಿಂದ ಇಳಿದ ಮೇಲೆ ಪುನಃ ಅವರ ಸೈಕಲ್‌ ನಲ್ಲಿ ಅವರು ತಲುಪಬೇಕಾದಂತಹ ಸ್ಥಳವನ್ನು ತಲುಪಬಹುದಾಗಿದೆ.

“ಈ ಮಡಚುವ ಸೈಕಲ್‌ ಗಳ ಗಾತ್ರ ೬೦ ಸೆಂ.ಮೀ x ೪೫ ಸೆಂ.ಮೀ x ೨೫ ಸೆಂ.ಮೀ.ಗಿಂತ ಹೆಚ್ಚಾಗಿರಬಾರದು ಹಾಗೂ ೧೫ ಕೆಜಿಗಿಂತ ಹೆಚ್ಚು ತೂಕವಿರಬಾರದು. ಪ್ರವೇಶದ್ವಾರದಲ್ಲಿ ಸೈಕಲ್‌ ಗಳನ್ನು ಬ್ಯಾಗೇಜ್ ಸ್ಕ್ಯಾನ್ನರ್ ಮೂಲಕ ತಪಾಸಣೆ ಮಾಡಲಾಗುವುದು. ಮೆಟ್ರೋ ಕೋಚ್‌ ಗಳ ಒಳಭಾಗ ಹಾನಿಯಾಗದಿರುವ ಹಾಗೆ ಸೈಕಲ್‌ ಗಳನ್ನು ಸರಿಯಾದ ರೀತಿಯಲ್ಲಿ ಪ್ಯಾಕ್ ಮಾಡಲಾಗುವುದು. ಜೊತೆಗೆ, ಇದರಿಂದಾಗಿ ಸಹಪ್ರಯಾಣಿಕರಿಗೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ,” ಎಂದು ಬಿಎಂಆರ್‌ಸಿಎಲ್ ಹೇಳಿಕೆಯೊಂದರಲ್ಲಿ ಮಾಹಿತಿ ನೀಡಿದೆ.

ಬಿಎಂಆರ್‌ಸಿಎಲ್‌ ನ ಎಂಡಿ ಅಂಜುಮ್ ಪರ್ವೇಜ್ ಅವರು ಈ ಸಂಬಂಧ ಮಾತನಾಡಿ ಮೆಟ್ರೊ ರೈಲಿನ ಕೊನೆಯ ಬೋಗಿಯಲ್ಲಿ ಸೈಕಲ್‌ ಗಳನ್ನು ಇಡಲು ಅನುಮತಿಸಿರುವುದನ್ನು ದೃಢಪಡಿಸಿದರು. ಆದರೆ, ಮುಂಬೈ ಮೆಟ್ರೊ ಮಾದರಿಯಂತೆ ಬೋಗಿಗಳ ಒಳಭಾಗದಲ್ಲಿರುವಂತೆ ಸೈಕಲ್ ರ್ಯಾಮಕ್‌ ಗಳಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

ಸೈಕಲ್ ಸವಾರರಿಗೆ ಅನುಕೂಲ ಮಾಡಿಕೊಟ್ಟಿರುವುದಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಬಿಎಂಆರ್‌ಸಿಎಲ್ ಸಿಪಿಆರ್‌ ಒ ಯಶವಂತ್ ಚವ್ಹಾಣ್ ಅವರು, “ಸೈಕಲ್ ಸವಾರರು ತಮ್ಮ ಮಡಚುವ ಸೈಕಲ್‌ ಗಳನ್ನು ಗಾಲಿಖುರ್ಚಿಗಳನ್ನು ಇಟ್ಟುಕೊಳ್ಳಲು ವಿಕಲಚೇತನರಿಗಾಗಿ ಒದಗಿಸಿರುವ ಸ್ಥಳದಲ್ಲಿ ಇಟ್ಟುಕೊಳ್ಳಬಹುದು. ಇದಕ್ಕೆ ಮೆಟ್ರೋ ರೈಲು ಚಾಲಕರ ಕ್ಯಾಬಿನ್‌ ನ ಹಿಂಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೊನೆಯ ಬೋಗಿಯನ್ನು ಸೈಕಲ್ ಸವಾರರು ಹಾಗೂ ಇತರೆ ಪ್ರಯಾಣಿಕರಿಗಾಗಿ ಒದಗಿಸಲು ನಿರ್ಧರಿಸಿದ್ದೇವೆ,” ಎಂದು ತಿಳಿಸಿದರು.

ಬೆಂಗಳೂರು ಬೈಸಿಕಲ್ ಮೇಯರ್ ಸತ್ಯ ಶಂಕರನ್ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. “ಈ ಉಪಕ್ರಮದಿಂದಾಗಿ ಸೈಕಲ್‌ ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಲಿದೆ. ಬಿಎಂಆರ್‌ಸಿಎಲ್ ನಿಲ್ದಾಣಗಳಲ್ಲಿಯೂ ಸೈಕಲ್ ಪಾರ್ಕಿಂಗ್‌ ಗೆ ಸ್ಥಳಾವಕಾಶ ಒದಗಿಸಲು ಆಲೋಚಿಸಬೇಕು ಹಾಗೂ ಶರ್ಡ್ಖ ಬೈಸಿಕಲ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಆಲೋಚಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮಲ್ಲಿ ಪ್ರಸ್ತುತ ಲಭ್ಯವಿರುವ ಮಡಚುವ ಸೈಕಲ್‌ ಗಳು ಮೆಟ್ರೋ ಸೂಚಿಸಿರುವ ಗಾತ್ರದ ಪ್ರಕಾರ ಇವೆಯೋ ಇಲ್ಲವೋ ಅನ್ನುವುದನ್ನೂ ಸಹ ವಿಶ್ಲೇಷಿಸಬೇಕು. ಸೈಕಲ್ ತಯಾರಿಸುವ ಸಂಸ್ಥೆಗಳು ಈ ಅಳತೆಯನ್ನು ಪರಿಗಣಿಸಿ ತಮ್ಮ ಸೈಕಲ್‌ ಗಳ ವಿನ್ಯಾಸದಲ್ಲಿ ಅಳವಡಿಸಿಕೊಳ್ಳಬೇಕು. ಮೆಟ್ರೋ ಬ್ಯಾಗ್ಗೇಜ್ ಸ್ಕ್ಯಾನರ್‌ ಗಳ ಬದಲಿಗೆ ಹ್ಯಾಂಡ್ ಸ್ಕ್ಯಾನ್ನರ್‌ ಗಳ ಬಳಕೆಯ ಬಗ್ಗೆ ಆಲೋಚಿಸುವುದು ಉತ್ತಮ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೈಕಲ್ ಸವಾರರಾದ ರಾಜೀವ್ ಮಾಳಗಿ ಅವರು ಈ ಘೋಷಣೆಯಿಂದ ಅಸಂತೃಪ್ತರಾಗಿದ್ದಾರೆ. “ನಾನು ಬಳಸುವಂತಹ ಮಡಚುವ ಸೈಕಲ್ ಮೆಟ್ರೋ ನೀಡಿರುವ ನಿಗಧಿತ ಅಳತೆಯ ಪ್ರಕಾರ ಇಲ್ಲ. ಸ್ಕ್ಯಾನರ್ ಮೂಲಕ ಹೋಗದಿರುವಂತಹ ಮಡಚುವ ಸೈಕಲ್‌ ಗಳಿಗೆ ಅದರಿಂದ ವಿನಾಯಿತಿ ನೀಡಬೇಕು,” ಎಂದು ಕೋರಿದರು.

ಬೆಂಗಳೂರು ಸೆಂಟ್ರಲ್‌ ನ ಎಂಪಿ ಪಿ.ಸಿ. ಮೋಹನ್ ಅವರು ಸೈಕಲ್ ಸವಾರರನ್ನು ಬೆಂಬಲಿಸಿದ್ದಾರೆ. ತಮ್ಮ ಟ್ವಿಟ್ಟರ್ ಸಂದೇಶವೊಂದರಲ್ಲಿ ಅವರು, “ಸಾರ್ವಜನಿಕರು ಹಾಗೂ ಸೈಕಲ್ ಸವಾರರ ಕೋರಿಕೆಗಳನ್ನು ಪರಿಗಣಿಸಿ ಬಿಎಂಆರ್‌ಸಿಎಲ್ ಬೇರೆ ಸೈಕಲ್‌ ಗಳಿಗೂ ಅನುಮತಿ ನೀಡಬೇಕು. ಇದರಿಂದ ಮೆಟ್ರೋ ಬಳಸುವಂತಹ ಅನೇಕರಿಗೆ ಮೊದಲ ಹಾಗೂ ಅಂತಿಮ ಸ್ಥಳ ಕ್ರಮಿಸುವಲ್ಲಿ ಇರುವ ತಡೆಗಳು ನಿವಾರಣೆಯಾಗುತ್ತವೆ. ಹಾಗಾಗಿ, ಬಿಎಂಆರ್‌ಸಿಎಲ್ ಎಲ್ಲಾ ರೀತಿಯ ಸೈಕಲ್‌ ಗಳಿಗೂ ಅನುಮತಿ ನೀಡಬೇಕು,” ಎಂದು ಕೋರಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: now- Permission – bicycles – metro-bangalore

The post ಈಗ ಮೆಟ್ರೊದಲ್ಲಿ ಸೈಕಲ್‌ ಗಳಿಗೂ ಸ್ಥಳಾವಕಾಶ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹಳೆಯ ನೋಟುಗಳನ್ನು ಬದಲಾಯಿಸಬೇಕೆ? ಅದಕ್ಕಾಗಿ ನೀವು ಈಗ ಆರ್‌ ಬಿಐ ಗೆ ಹೋಗಬೇಕಿಲ್ಲ
ಬೆಂಗಳೂರು, ನವೆಂಬರ್ 11, 2021 (www.justkannada.in): ಭಾರತೀಯ ರಿಜರ್ವ್ ಬ್ಯಾಂಕ್ (ಆರ್‌ಬಿಐ) ಆರು ತಿಂಗಳ ಹಿಂದೆಯೇ ಹಾಳಾಗಿರುವ, ಹಾನಿಯಾಗಿರುವ ನೋಟುಗಳನ್ನು ಬದಲಾಯಿಸಿಕೊಡಲು ಎಲ್ಲಾ ಬ್ಯಾಂಕ್‌ ಗಳ ಎಲ್ಲಾ ಶಾಖೆಗಳಿಗೂ ಅಧಿಕಾರ ನೀಡಿದೆ. ನಿಮ್ಮ ಬಳಿ ಹಾಳಾಗಿರುವ ನೋಟುಗಳಿದ್ದರೆ, ನೀವು ಖಾತೆ ಹೊಂದಿರುವ ಬ್ಯಾಂಕ್‌ ಗೆ ಹೋಗಿ ಆ ನೋಟುಗಳನ್ನು ನೀಡಿ ಉತ್ತಮ ನೋಟುಗಳನ್ನು ಪಡೆದುಕೊಳ್ಳಬಹುದು. ಆದರೆ ಬಹುತೇಕ ಎಲ್ಲಾ ಬ್ಯಾಂಕ್‌ ಗಳೂ ಸಹ ಆರ್‌ಬಿಐನ ಈ ಆದೇಶವನ್ನು ಪಾಲಿಸುತ್ತಿಲ್ಲ. ಈ ಕಾರಣದಿಂದಾಗಿ ಬೆಂಗಳೂರಿನ ಆರ್‌ಬಿಐ ಮುಖ್ಯ ಕಚೇರಿಯ ಮುಂದೆ ಪ್ರತಿ ದಿನ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರ ದೊಡ್ಡ ಸಾಲೇ ಕಾಯುತ್ತಿರುತ್ತದೆ.

ಪ್ರತಿ ದಿನ ಜನರು ತಮ್ಮ ಹಳೆಯ ಹಾಗೂ ಗಲೀಜಾಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ಬೆಂಗಳೂರಿನ ಆರ್‌ ಬಿಐ ಮುಖ್ಯ ಶಾಖೆಗೆ ತೆರಳುತ್ತಾರೆ. ಈ ಸಂಬಂಧ ವಿತರಣಾ ಇಲಾಖೆಯು ಕ್ಲೈಮ್ಸ್ ವಿಭಾಗದೊಂದಿಗೆ ಆರ್‌ಬಿಐನ ಜನಸ್ನೇಹಿ ಮಾರ್ಗಸೂಚಿಗಳನ್ನು ಜನರಿಗೆ ತಿಳಿಸುವ ಉದ್ದೇಶದೊಂದಿಗೆ ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು, ಸಣ್ಣ ಹಣಕಾಸಿನ ಬ್ಯಾಂಕುಗಳು ಹಾಗೂ ಪಾವತಿ ಬ್ಯಾಂಕ್‌ ಗಳೂ ಒಳಗೊಂಡಂತೆ ಖಾಸಗಿ ಬ್ಯಾಂಕುಗಳಿಗೂ ಈ ಸೇವೆ ಒದಗಿಸಬಹುದು ಎಂದು ದೃಢಪಡಿಸುವ ಉದ್ದೇಶದೊಂದಿಗೆ ಸಹಾಯವಾಣಿಯೊಂದನ್ನು ಆರಂಭಿಸಿದೆ.

ಈ ವರ್ಷ ಏಪ್ರಿಲ್ ತಿಂಗಳಲ್ಲಿ ಆರ್‌ಬಿಐ ಒಂದು ಸುತ್ತೋಲೆಯನ್ನು ಹೊರಡಿಸಿತ್ತು. ಆ ಸುತ್ತೋಲೆಯ ಪ್ರಕಾರ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳಲ್ಲಿಯೂ ಸಹ ಈ ಕೆಳಕಂಡ ಗ್ರಾಹಕರ ಸೇವೆಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ಎಲ್ಲಾ ಡಿನಾಮಿನೇಷನ್‌ಗಳ ತಾಜಾ, ಉತ್ತಮ ಗುಣಮಟ್ಟದ ನೋಟುಗಳು ಹಾಗೂ ಕಾಯಿನ್‌ ಗಳನ್ನು ವಿತರಿಸುವುದು, ಗಲೀಜಾಗಿರುವ, ಹಾನಿಯಾಗಿರುವ ನೋಟುಗಳನ್ನು ಬದಲಾಯಿಸಿಕೊಡುವುದು ಈ ಸೇವೆಯಲ್ಲ್ಲಿ ಸೇರಿದೆ. ಇದಕ್ಕಾಗಿ ಸಾರ್ವಜನಿಕರು ಆರ್‌ ಬಿಐನ ಪ್ರಾದೇಶಿಕ ಕಚೇರಿಗಳಿಗೆ ಅಲೆಯಬೇಕಾಗಿಲ್ಲ.

ಜೊತೆಗೆ ಈ ಸುತ್ತೋಲೆಯಲ್ಲಿ ಎಲ್ಲಾ ಬ್ಯಾಂಕ್ ಶಾಖೆಗಳೂ ಸಹ ಎಲ್ಲಾ ಕೆಲಸದ ದಿನಗಳಂದೂ ಸಹ ಸಾರ್ವಜನಿಕರಿಗೆ ಯಾವುದೇ ತಾರತಮ್ಯತೆ ಇಲ್ಲದೆ ಈ ಸೇವೆಯನ್ನು ಒದಗಿಸುವುದಾಗಿಯೂ ತಿಳಿಸಿದೆ. ಆದರೂ ಸಹ ಜನರು ಬ್ಯಾಂಕುಗಳಿಗೆ ಈ ಸೇವೆಯನ್ನು ಪಡೆಯಲು ಹೋದರೆ, ಬ್ಯಾಂಕ್ ಸಿಬ್ಬಂದಿಗಳು ನೋಟುಗಳನ್ನು ಬದಲಾಯಿಸಿಕೊಡಲು ನಿರಾಕರಿಸುತ್ತಿದ್ದಾರೆ. ಆರ್‌ ಬಿಐಗೆ ಹೋಗುವಂತೆ ಸೂಚಿಸುತ್ತಿದ್ದಾರೆ.

ಬೆಂಗಳೂರು ನಗರದ ಓರ್ವ ಬ್ಯಾಂಕ್ ಗ್ರಾಹಕ ಪ್ರಸಾದ್ ಅವರು ತಮ್ಮ ಕೆಲವು ಸ್ನೇಹಿತರೊಂದಿಗೆ ತಮ್ಮ ಬಳಿಯಿಂದ ಕೆಲವು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಖಾಸಗಿ ಬ್ಯಾಂಕ್ ಒಂದಕ್ಕೆ ತೆರಳಿದರು. ಆದರೆ ಆ ಬ್ಯಾಂಕ್‌ ನ ಸಿಬ್ಬಂದಿಗಳು ನಿರಾಕರಿಸಿ, ಆರ್‌ಬಿಐಗೆ ತೆರಳುವಂತೆ ಸೂಚಿಸಿದ್ದಾರೆ. ಅವರು ಆರ್‌ಬಿಐನ ವಿತರಣಾ ಇಲಾಖೆಯ ಕ್ಲೈಮ್ಸ್ ವಿಭಾಗಕ್ಕೆ ತೆರಳಿದಾಗ ಯಾವುದೇ ಬ್ಯಾಂಕ್ ಶಾಖೆಯಲ್ಲಾದರೂ ಹಾಳಾಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಅದಕ್ಕಾಗಿ ನೀವು ಬ್ಯಾಂಕ್‌ ನ ಖಾತೆ ಹೊಂದಿರಬೇಕಷ್ಟೆ, ಯಾವುದೇ ಶಾಖೆಯಲ್ಲಾದರೂ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

“ನಂತರ ನಾವು ನಮ್ಮ ಬ್ಯಾಂಕ್‌ ಗೆ ಹಿಂದಿರುಗಿ ಆ ಬ್ಯಾಂಕ್‌ ನ ಸಿಬ್ಬಂದಿಯೊಂದಿಗೆ ವಾದ ಮಾಡಿದೆವು. ಆಗ ಅವರು ಆರ್‌ಬಿಐನ ಸಹಾಯವಾಣಿ ಸಂಖ್ಯೆ ೦೮೦-೨೨೧೮೦೧೦೪ – ಇಷ್ಯೂ ಡಿಪಾರ್ಟ್ಮೆಂಟ್ ಹಾಗೂ ೦೮೦-೨೨೧೮೦೫೪೩/೫೪೯ ಕ್ಲೈಮ್ಸ್ ಸೆಕ್ಷನ್ ಈ ಸಂಖ್ಯೆಗೆ ಕರೆ ಮಾಡಿ ಸೇವೆ ನೀಡಬೇಕೆಂದು ದೃಢಪಡಿಸಿದ ನಂತರ ಒಪ್ಪಿಕೊಂಡರು,” ಎಂದು ಪ್ರಸಾದ್ ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರು ಮಿರರ್

Key words: Replace- old notes-You- don’t – go – RBI -now

The post ಹಳೆಯ ನೋಟುಗಳನ್ನು ಬದಲಾಯಿಸಬೇಕೆ? ಅದಕ್ಕಾಗಿ ನೀವು ಈಗ ಆರ್‌ ಬಿಐ ಗೆ ಹೋಗಬೇಕಿಲ್ಲ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭಾರತದ ಹಿಂದಿನ ಒಲಿಂಪಿಕ್ಸ್ ಪದಕ ವಿಜೇತರು ಈಗ ಏನು ಮಾಡುತ್ತಿದ್ದಾರೆ ಗೊತ್ತೆ..?
ನವದೆಹಲಿ, ಆಗಸ್ಟ್ 9, 2021(www.justkannada.in): ವಿಶ್ವದ ಅತ್ಯಂತ ಪ್ರತಿಷ್ಠಿತ ಹಾಗೂ ಅತ್ಯುನ್ನತ ಕ್ರೀಡಾಕೂಟವೆಂದೇ ಪರಿಗಣಿಸಲ್ಪಡುವ ಒಲಿಂಪಿಕ್ಸ್ ಕ್ರೀಡಾಕೂಟ ೧೮೯೬ರಲ್ಲಿ ಆರಂಭವಾಯಿತು. ವಿಶ್ವದ ಇತರೆ ರಾಷ್ಟ್ರಗಳ ಜೊತೆ, ಭಾರತವೂ ಸಹ ಪ್ರತಿಯೊಂದು ಕ್ರೀಡೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದೆ.

ಆದರೆ ಈವರಗೆ ಭಾರತ, ಟೋಕ್ಯೊ 2020 ಒಲಂಪಿಕ್ಸ್ ಹೊರತುಪಡಿಸಿದಂತೆ ವಿವಿಧ ಒಲಂಪಿಕ್ಸ್ ಕ್ರೀಡಾಕೂಟಗಳಿಂದ ಕೇವಲ ೨೮ ಪದಕಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಗೆದ್ದ ಪದಕಗಳ ಸಂಖ್ಯೆ ಹೆಚ್ಚಿಲ್ಲದಿದ್ದರೂ ಸಹ ಭಾರತದ ಕ್ರೀಡಾಪಟುಗಳು ತಮ್ಮ ಚಾರಿತ್ರಿಕ ಪ್ರದರ್ಶನದ ಮೂಲಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ತಮ್ಮದೇ ಆದ ಛಾಪನ್ನು ಸೃಷ್ಟಿಸಿದ್ದಾರೆ.

ವಿವಿಧ ಒಲಿಂಪಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿದ ಭಾರತದ ಕ್ರೀಡಾಪಟುಗಳು ಪ್ರಸ್ತುತ ಏನು ಮಾಡುತ್ತಿದ್ದಾರೆ ಎಂದು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ:

ಲಿಯಾಂಡರ್ ಪೇಸ್:

ಭಾರತದ ಟೆನ್ನಿಸ್ ಕ್ರೀಡಾಪಟು ಲಿಂಯಾಡರ್ ಪೇಸ್ ೧೯೯೬ರಲ್ಲಿ ಅಟ್ಲಾಂಟಾ ಬೇಸಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದು ಟೆನ್ನಿಸ್ ಕ್ರೀಡೆಯಲ್ಲಿ ಭಾರತಕ್ಕೆ ಸಂದಂತಹ ಮೊಟ್ಟ ಮೊದಲ ಒಲಿಂಪಿಕ್ಸ್ ಪದಕ ಹಾಗೂ ಅಟ್ಲಾಂಟಾ ಕ್ರೀಡಾಕೂಟದಲ್ಲಿ ಭಾರತ ಗಳಿಸಿದಂತಹ ಏಕೈಕ ಪದಕವಾಗಿತ್ತು. ೧೯೮೦ ನಂತರ, ಅಂದರೆ ಸುಮಾರು ೧೬ ವರ್ಷಗಳ ಸುದೀರ್ಘ ಅವಧಿಯ ನಂತರ ಪೇಸ್ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಒಲಿಂಪಿಕ್ಸ್ ಯಶಸ್ಸಿನ ನಂತರ ಲಿಯಾಂಡರ್ ಪೇಸ್, ವಿವಿಧ ಕ್ರೀಡಾಕೂಟಗಳಲ್ಲಿ ಟೆನ್ನಿಸ್ ಡಬಲ್ಸ್ ವಿಭಾಗದಲ್ಲಿ ಭಾಗವಹಿಸಿ ಹಲವು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದಿದ್ದಾರೆ. ಅವರಿಗೆ ಭಾರತ ಸರ್ಕಾರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪದ್ಮಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹಾಗೂ ಅರ್ಜುನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ ಪೇಸ್ ಹರ್ಯಾಣ ರಾಜ್ಯ ಸರ್ಕಾರದ ಕ್ರೀಡಾ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ಣಂ ಮಲ್ಲೇಶ್ವರಿ:

ಕರ್ಣಂ ಮಲ್ಲೇಶ್ವರಿ ಸಿಡ್ನಿಯಲ್ಲಿ ನಡೆದಂತಹ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ೫೪ ಕೆಜಿ ವಿಭಾಗದ ತೂಕ ಎತ್ತುವ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಮೊಟ್ಟ ಮೊದಲ ಮಹಿಳಾ ಒಲಿಂಪಿಕ್ಸ್ ಪದಕ ವಿಜೇತೆ ಎನ್ನುವ ಗೌರವಕ್ಕೆ ಪಾತ್ರರಾದರು.

ಒಲಿಂಪಿಕ್ಸ್ ನಂತರ ಆಕೆ ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಆಕೆ ದೇಶದ ಯುವಜನರನ್ನು ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಗಳಲ್ಲಿ ಪ್ರತಿನಿಧಿಸಲು ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜ್ಯವರ್ಧನ್ ಸಿಂಗ್ ರಾಥೋರ್

ರಾಜ್ಯವರ್ಧನ್ ಸಿಂಗ್ ರಾಥೋರ್ ೨೦೦೪ರಲ್ಲಿ ಅಥೆನ್ಸನಲ್ಲಿ ನಡೆದಂತಹ ಒಲಿಂಪಿಕ್ಸ್ ನಲ್ಲಿ ಪುರುಷರ ಡಬಲ್ ಟ್ರಾö್ಯಪ್ ಷೂಟಿಂಗ್‌ ನಲ್ಲಿ ಬೆಳ್ಳಿ ಪದಕದ ವಿಜೇತರಾಗಿದ್ದರು. ಇವರು ಭಾರತದ ಮೊಟ್ಟ ಮೊದಲ ಒಲಿಂಪಿಕ್ಸ್ ಪದಕ ವಿಜೇತರೆನಿಸಿಕೊಂಡರು.

ರಾಥೋರ್ ಮೇ ೨೦೧೯ರವರೆಗೆ ಕೇಂದ್ರ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಅವರು ಲೋಕಸಭಾ ಸದಸ್ಯರಾಗಿದ್ದಾರೆ.

ಅಭಿನವ್ ಬಿಂದ್ರಾ

ಅಭಿನವ್ ಬಿಂದ್ರಾ ೨೦೦೮ರಲ್ಲಿ ಬೀಜಿಂಗ್‌ ನಲ್ಲಿ ನಡೆದಂತಹ ಒಲಿಂಪಿಕ್ಸ್ ನಲ್ಲಿ ಪುರುಷರ ೧೦ ಮೀ. ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕವನ್ನು ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಬಿಂದ್ರಾ ಕೇವಲ ಶೂಟರ್ ಅಷ್ಟೇ ಅಲ್ಲದೇ ಉದ್ಯಮಿಯೂ ಆಗಿದ್ದಾರೆ. ಅವರು ಕ್ರೀಡೆಗಳಲ್ಲಿ ತಂತ್ರಜ್ಞಾನವನ್ನು ಪರಿಚಯಿಸುವ ಕೆಲಸದಲ್ಲಿ ತೊಡಗಿರುವ ಉದ್ಯಮ ಅಭಿನವ್ ಫ್ಯೂಚರಿಸ್ಟಿಕ್ಸ್ ಪ್ರೈ. ಲಿ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ನಿವೃತ್ತರಾದ ನಂತರ ಅಭಿನವ್ ಬಿಂದ್ರಾ ಭಾರತದ ಕ್ರೀಡಾಪಟುಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜೇAದ್ರ ಸಿಂಗ್

೨೦೦೮ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ವಿಜೇಂದ್ರ ಸಿಂಗ್ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದರು. ನಂತರ ಆತ ವಿವಿಧ ಟೆಲಿವಿಷನ್ ಷೋಗಳಲ್ಲಿ ಭಾಗವಹಿಸಲಾರಂಭಿಸಿದರು.

ನAತರ ಅವರು ವೃತ್ತಿಪರ ಬಾಕ್ಸರ್ ಆಗಲು ನಿರ್ಧರಿಸಿದರು. ಜೊತೆಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ೨೦೧೯ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ದಕ್ಷಿಣ ದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸಿದರು. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗಲಿಲ್ಲ.

ಗಗನ್ ನಾರಂಗ್

ಗಗನ್ ನಾರಂಗ್ ೨೦೧೨ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಪುರುಷರ ೧೦ ಮೀ. ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು. ಪ್ರಸ್ತುತ ಗಗನ್, ಅವರದೇ ಆದ ಅಕಾಡೆಮಿಯನ್ನು ನಡೆಸುತ್ತಿದ್ದು, ಈ ವರ್ಷದ ಟೋಕ್ಯೋ ಒಲಿಂಪಿಕ್ಸ್ ಗೆ  ತಮ್ಮ ಅಕಾಡೆಮಿಯಿಂದ ಆರು ಜನರನ್ನು ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯ ಕುಮಾರ್

ವಿಜಯ್ ಕುಮಾರ್ ೨೦೧೨ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪುರುಷರ ೨೫ ಮೀ ರ್ಯಾ್ಪಿಡ್ ಪಿಸ್ತೂಲ್ ಷೂಟಿಂಗ್‌ ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಪ್ರಸ್ತುತ ಅವರು ಹಿಮಾಚಲ ಪ್ರದೇಶದಲ್ಲಿ ಡಿಎಸ್‌ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯೋಗೇಶ್ವರ್ ದತ್

ಯೋಗೇಶ್ವರ್ ದತ್ ೨೦೧೨ರ ಲಂಡನ್ ಒಲಿಂಪಿಕ್ಸ್ ನಲ್ಲಿ ೬೦ ಕೆಜಿ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಪ್ರಸ್ತುತ ಅವರು ತಮ್ಮದೇ ಸ್ವಂತ ಕುಸ್ತಿ ಅಕಾಡೆಮಿಯನ್ನು ನಡೆಸುತ್ತಿದ್ದು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಆಸಕ್ತರನ್ನು ತರಬೇತುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಜೊತೆಗೆ ಅವರು ‘ಲರ್ನ್ ರಷ್ಯಾ ರಷ್ಯನ್’ ಎಂಬ ಉಪಕ್ರಮವನ್ನೂ ಕೈಗೊಂಡಿದ್ದಾರೆ.

ಸೈನಾ ನೇಹ್ವಾಲ್

ಸೈನಾ ನೇಹ್ವಾಲ್ ೨೦೧೨ರ ಲಂಡನ್ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದರು.

ಪ್ರಸ್ತುತ ಆಕೆ ವಿವಿಧ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ೨೦೧೮ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿಯೂ ಸಹ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಮೇರಿ ಕೋಂ

ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಂ, ಬಾಕ್ಸಿಂಗ್‌ನಲ್ಲಿ ೨೦೧೨ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟು ಹೆಮ್ಮೆಯನ್ನು ತಂದರು.

ಪ್ರಸ್ತುತ ಅವರು ಟೋಕ್ಯೋ ೨೦೨೦ ಒಲಿಂಪಿಕ್ಸ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರೆಸಿದ್ದಾರೆ.

ಸಾಕ್ಷಿ ಮಲ್ಲಿಕ್

೨೦೧೬ರ ರಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಸಾಕ್ಷಿ ಮಲ್ಲಿಕ್ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ದೊರಿಕಿಸಿಕೊಟ್ಟರು. ಪ್ರಸ್ತುತ ಆಕೆ ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ, ಜೆಎಸ್‌ಡಬ್ಯೂ ಕ್ರೀಡಾ ಉತ್ಕೃಷ್ಟತಾ ಕಾರ್ಯಕ್ರಮದೊಂದಿಗೆ ಸಹಯೋಗವನ್ನು ಹೊಂದಿದ್ದಾರೆ.

ಪಿವಿ ಸಿಂಧು

ಪಿವಿ ಸಿಂಧು ೨೦೧೬ರ ರಿಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಬ್ಯಾಡ್ಮಿಂಟ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದುಕೊಡುವ ಮೂಲಕ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಭಾನುವಾರ ಟೋಕ್ಯೊದಲ್ಲಿ ನಡೆದಂತಹ ಒಲಿಂಪಿಕ್ಸ್ನಲ್ಲಿ ಆಕೆ ಚೀನಾದ ಹೀ ಬಿಂಗ್‌ಜಿಯೊ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದು ಎರಡನೆಯ ಪದಕವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧು ಪ್ರಸ್ತುತ ಅಂತರಾಷ್ಟ್ರೀಯ ಮಟ್ಟದ ವಿವಿಧ ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: former Olympics- medalists – India- now- know – doing.

The post ಭಾರತದ ಹಿಂದಿನ ಒಲಿಂಪಿಕ್ಸ್ ಪದಕ ವಿಜೇತರು ಈಗ ಏನು ಮಾಡುತ್ತಿದ್ದಾರೆ ಗೊತ್ತೆ..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕರ್ನಾಟಕದಲ್ಲಿ ಈಗ ಇರೋದು ನಮ್ಮದೇ ಸರ್ಕಾರ ಎಂದು ಹೇಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.
ಬೆಂಗಳೂರು,ಜುಲೈ,29,2021(www.justkannada.in):  ರಾಜ್ಯದಲ್ಲಿ ಈಗಿರುವ ಸರ್ಕಾರ ಜನತಾ ಪರಿವಾರದ ಸರ್ಕಾರ. ಇದು ನಮ್ಮದೇ ಸರ್ಕಾರ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಾನು ಸ್ನೇಹಿತರು. ಅವರು ನಮ್ಮದೇ ಪರಿವಾರದಿಂದ ಬಂದಿರುವವರು. ಈಗ ರಾಜ್ಯದಲ್ಲಿ ನಡೆಯುತ್ತಿರುವುದು ಜನತಾ ಪರಿವಾರ ಸರ್ಕಾರ.  ನಾನು ಸರ್ಕಾರವನ್ನ ಅಸ್ಥಿರಗೊಳಿಸುವುದಿಲ್ಲ. ಬಿ.ಎಸ್. ಯಡಿಯೂರಪ್ಪರಿಗೂ ನಾವು ಎಲ್ಲ ಸಹಕಾರ ನೀಡಿದ್ದೆವು.  ಈಗ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೂ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಹಾಗೆಯೇ ಹಿರಿಯ ಬಿಜೆಪಿ ನಾಯಕರಾಗಿದ್ದ ದಿವಂಗತ ಅನಂತಕುಮಾರ್ ಅವರ ಪುತ್ರಿ ವಿಜೇತಾ ಅವರು ಕರ್ನಾಟಕದಲ್ಲಿ  ‘ಜೆಡಿಎಸ್  ಪ್ರಬಲ ರಾಜಕೀಯ ಶಕ್ತಿಯಾಗಿದೆ’ ಎಂದು ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ  ಎಚ್.ಡಿ.ಕುಮಾರಸ್ವಾಮಿ, ರಾಜ್ಯ ರಾಜಕಾರಣದ ಈ ಪರಿಸ್ಥಿತಿಯಲ್ಲಿ ಜೆಡಿಎಸ್​ ಬಗ್ಗೆ ಇಂತಹ ಹೇಳಿಕೆಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಹೇಳಿಕೆ ಪಕ್ಷಕ್ಕೆ ಒಂದು ರೀತಿಯಲ್ಲಿ ಉತ್ಸಾಹ ತುಂಬಿದೆ. ಕರ್ನಾಟಕದಲ್ಲಿ ಜೆಡಿಎಸ್​​ ಶಕ್ತಿಯುತವಾಗಿದೆ ಎಂದು ಅವರು ಹೇಳಿರುವುದಕ್ಕೆ ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

Key words: Former CM -HD Kumaraswamy, – now- our – government -Karnataka

The post ಕರ್ನಾಟಕದಲ್ಲಿ ಈಗ ಇರೋದು ನಮ್ಮದೇ ಸರ್ಕಾರ ಎಂದು ಹೇಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬನ್ನೇರುಘಟ್ಟ ಈಗ ಆನೆಗಳ ಸಂತಾನೋತ್ಪತ್ತಿ ಕೇಂದ್ರ ಸ್ಥಾನ.
ಬೆಂಗಳೂರು, ಜುಲೈ 5, 2021 (www.justkannada.in): ಬನ್ನೇರುಘಟ್ಟ ಬಯಾಲಾಜಿಕಲ್ ಪಾರ್ಕ್ (ಬಿಬಿಪಿ), ಕೋವಿಡ್-ಸಾಂಕ್ರಾಮಿಕದಿಂದಾಗಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸಹ ಈಗ ದೇಶದ ಅತ್ಯುತ್ತಮ ಆನೆಗಳ ಸಂತಾನೋತ್ಪತ್ತಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

ಬಿಬಿಪಿ ಸಿಬ್ಬಂದಿಗಳು ಸೃಷ್ಟಿಸಿರುವ ಆನೆ-ಸ್ನೇಹಿ ವಾತಾವರಣ ಹಾಗೂ ಅನುಸರಿಸುತ್ತಿರುವ ಆನೆಗಳ ಸರಿಯಾದ ಪೌಷ್ಠಿಕತೆ ನಿರ್ವಹಣೆಯ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ, 14 ಹೆಣ್ಣಾನೆಗಳು ಗರ್ಭ ಧರಿಸಿರುವುದಾಗಿ ಅಧಿಕಾರಿಗಳೂ ತಿಳಿಸಿದ್ದಾರೆ.

ಬಿಬಿಪಿಯ ಪಶುವೈದ್ಯಕೀಯ ಸೇವಾ ವಿಭಾಗದ ಸಹಾಯಕ ನಿದೇರ್ಶಕರಾದ ಡಾ. ಉಮಾಶಂಕರ್ ಅವರ ಪ್ರಕಾರ ಇದಕ್ಕೆ ಹಲವಾರು ಕಾರಣಗಳಿವೆಯಂತೆ. “ಬನ್ನೇರುಘಟ್ಟ ಜೈವಿಕ ಉದ್ಯಾನವನ ಇಡೀ ದೇಶದಲ್ಲಿಯೇ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವಂತಹ ಏಕೈಕ ಪ್ರಾಣಿ ಸಂಗ್ರಾಹಲಯವಾಗಿದೆ (zoo). ಜೊತೆಗೆ ನಾವು ಇಲ್ಲಿ ಆನೆಗಳನ್ನು ಕಾಡಿನಲ್ಲಿ ಸುತ್ತಾಡಲು ಬಿಡುತ್ತೇವೆ. ಆನೆಗಳನ್ನು ರಾತ್ರಿ ವೇಳೆ ಕಾಡಿನೊಳಗೆ ಅಡ್ಡಾಡಲು ಬಿಟ್ಟು, ಬೆಳಿಗ್ಗೆ ವಾಪಸ್ಸು ಕರೆದುಕೊಂಡು ಬರುತ್ತೇವೆ. ಇದರಿಂದ ಆನೆಗಳಿಗೆ ಭಾಗಶಃ ಕಾಡಿನ ವಾತಾವರಣ ಲಭಿಸುವುದರ ಜೊತೆಗೆ, ಕಾಡಿನಲ್ಲಿರುವ ಆನೆಗಳೊಂದಿಗೆ ಬೆರೆಯುವ ಅವಕಾಶವೂ ಲಭಿಸುತ್ತದೆ,” ಎನ್ನುತ್ತಾರೆ

ಇಲ್ಲಿ ಕುತೂಹಲಕಾರಿಯಾಗಿರುವ ವಿಷಯವೇನೆಂದರೆ ದೇಶದ ಇತರೆ ಶಿಬಿರಗಳು ಅಥವಾ ಪ್ರಾಣಿ ಸಂಗ್ರಾಲಯಗಳಲ್ಲಿ ಆನೆಗಳು ಗರ್ಭಧರಿಸಲು ಸುಮಾರು 12 ರಿಂದ 14 ವರ್ಷಗಳು ಬೇಕಾಧರೆ, ಬನ್ನೇರುಘಟ್ಟದಲ್ಲಿನ ಆನೆಗಳು ಒಂಬತ್ತು ವರ್ಷಗಳ ವಯಸ್ಸಿಗೆ ಗರ್ಭ ಧರಿಸುತ್ತವೆಯೆಂತೆ!

“ಆನೆಗಳಿಗೆ ಒದಗಿಸಲಾಗುತ್ತಿರುವ ಪೌಷ್ಠಕ ಆರೈಕೆ, ಸರಿಯಾದ ಆನೆಗಳ ಗುಂಪು ನಿರ್ವಹಣೆ ಹಾಗೂ ಒತ್ತಡ-ಮುಕ್ತ ವಾತಾವರಣಗಳಿಂದಾಗಿ ಇಲ್ಲಿನ ಆನೆಗಳು ಬೇಗನ ಬಸಿರಾಗುತ್ತವೆ. ಇಲ್ಲಿರುವ ಎಲ್ಲಾ ಆನೆಗಳೂ ಸಹ ಆರೋಗ್ಯವಂತವಾಗಿದ್ದು, ಉತ್ತಮ ಸ್ಥಿತಿಯಲ್ಲಿವೆ,” ಎನ್ನುತ್ತಾರೆ ಉಮಾಶಂಕರ್.

ಬಿಬಿಪಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್ ಸಿಂಘ್ ಅವರು ಈ ಕುರಿತು ಮಾತನಾಡುತ್ತಾ, “ಬಿಬಿಪಿಯಲ್ಲಿ ಸುಮಾರು 14 ಹೆಣ್ಣಾನೆಗಳು ಹಾಗೂ 11 ಗಂಡಾನೆಗಳಿವೆ. ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯ ಆನೆಗಳಿಗೆ ಸೂಕ್ತವಾಗಿರುವಂತಹ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ್ದು, ರಾತ್ರಿ ವೇಳೆ ನೈಸರ್ಗಿಕವಾಗಿ ಬೆಳೆದಿರುವ ಆಹಾರವನ್ನು ಸೇವಿಸುತ್ತವೆ. ಜೊತೆಗೆ ಅವುಗಳಿಗೆ ಹಸಿರು ಹುಲ್ಲು ಹಾಗೂ ಕಾಲೋಚಿತ ಹಣ್ಣುಗಳು ಒಳಗೊಂಡಂತೆ ಪ್ರತಿ ದಿನ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ. ಮಾವುತರ ಜೊತೆಗೆ ಇಲ್ಲಿನ ಪ್ರಾಣಿಸಂಗ್ರಹಾಲಯವನ್ನು ನೋಡಿಕೊಳ್ಳುವ ಸಿಬ್ಬಂದಿಗಳು ಮತ್ತು ಕವಾಡಿಗಳು ದಿನಪೂರ್ತಿ ಆನೆಗಳ ಆರೈಕೆಯಲ್ಲಿ ತೊಡಗಿರುತ್ತಾರೆ. ಇವೆಲ್ಲಾ ಕಾರಣಗಳಿಂದಾಗಿ ಇಲ್ಲಿನ ಆನೆಗಳಿಗೆ ಅತ್ಯುತ್ತಮ ಸೌಲಭ್ಯಗಳು ಲಭಿಸಿದಂತಾಗಿದೆ,” ಎಂದರು.

ಬಿಬಿಪಿಯ ಶೈಕ್ಷಣಿಕ ಅಧಿಕಾರಿ ಹಾಗೂ ಪ್ರಾಣಿಗಳ ನಡವಳಿಕೆಯ ವಿಶ್ಲೇಷಕಿ ಅಮಲಾ ಎಂ ಅನಿಲ್ ಅವರು, ಇಲ್ಲಿಗೆ ರಕ್ಷಿಸಿ ತರಲ್ಪಟ್ಟಿರುವ ಆನೆಗಳ ನಡವಳಿಕೆ ಕುರಿತು ಬಹಳ ನಿಕಟವಾಗಿ ಕೆಲಸ ನಿರ್ವಹಿಸಿದ್ದು ಅವುಗಳ ನಡವಳಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ಆನೆಗಳಿಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನೆರವಾಗುತ್ತಿದ್ದಾರಂತೆ.

ಮನುಷ್ಯರು ಕಿವಿಗಳನ್ನು ಸ್ವಚ್ಛಗೊಳಿಸಲು ಇಯರ್ ಬಡ್‌ಗಳನ್ನು ಉಪಯೋಗಿಸುವಂತೆ ಇಲ್ಲಿನ ಆನೆಗಳು ಕಿವಿಗಳನ್ನು ಸ್ವಚ್ಛಗೊಳಿಸಲು ಸಣ್ಣ ತೆಳುವಾದ ಮರದ ರೆಂಬೆಗಳನ್ನು ಬಳಸುತ್ತವಂತೆ! ಅದರಲ್ಲಿಯೂ ವಿಶೇಷವಾಗಿ ಕೊಲ್ಲಾಪುರದ ದೇವಾಲಯದಿಂದ ರಕ್ಷಿಸಿ ತಂದಿರುವಂತಹ ಸುಂದರ್ ಎಂಬ ಹೆಸರಿನ 21-ವರ್ಷ ವಯಸ್ಸಿನ ಆನೆಯ ನಡವಳಿಕೆ ತಜ್ಞರನ್ನೂ ವಿಸ್ಮಿತಗೊಳಿಸಿದೆಯಂತೆ! ಬಿಬಿಪಿ ಈಗಾಗಲೇ ಅತೀ ಹೆಚ್ಚಿನ ಸಂಖ್ಯೆಯ ಮಾಂಸಾಹಾರ ಪ್ರಾಣಿಗಳನ್ನು ಹೊಂದಿರುವ ಹೆಮ್ಮೆಯನ್ನು ಹೊಂದಿದೆ.

ಕಳೆದ ಒಂದು ವರ್ಷದಲ್ಲಿ ಆನೆಗಳ ಜೊತೆಗೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಎರಡು ಹೆಣ್ಣು ಹುಲಿಗಳು ಹಾಗೂ ಸುಮಾರು 10 ಸಿಂಹಿಣಿಗಳು ಕರುಗಳಿಗೆ ಜನ್ಮ ನೀಡಿವೆ. ಬಿಬಿಪಿ ಕರ್ನಾಟಕದ ಇತರೆ ಪ್ರಾಣಿ ಸಂಗ್ರಹಾಲಯಗಳೀಗೆ ಸಿಂಗದ ಮರಿಗಳನ್ನು ಉಡುಗೊರೆಯನ್ನೂ ನೀಡಿವೆ!

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Bannerghatta – now – breeding -ground – elephants.

The post ಬನ್ನೇರುಘಟ್ಟ ಈಗ ಆನೆಗಳ ಸಂತಾನೋತ್ಪತ್ತಿ ಕೇಂದ್ರ ಸ್ಥಾನ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.