agianst Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಕುಮಾರಸ್ವಾಮಿ ಅವರೇ ಶಕುನಿ, ಮಂಥರೆ ಮಾತು ಕೇಳಬೇಡಿ- ಹೆಚ್.ಡಿಕೆ ವಿರುದ್ಧ ಗುಡುಗಿದ ಶಾಸಕ ಜಿ.ಟಿ ದೇವೇಗೌಡ…
ಮೈಸೂರು,ಮಾರ್ಚ್,15,2021(www.justkannada.in):  ಜೆಡಿಎಸ್ ನಲ್ಲಿ ದಳಪತಿಗಳ ನಡುವೆ ವಾಕ್ಸಮರ ಮುಂದುವರೆದಿದ್ದು ಇದೀಗ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಶಾಸಕ  ಜಿ. ಟಿ.ದೇವೇಗೌಡ ಗುಡುಗಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಜಿ,ಟಿ ದೇವೇಗೌಡರು, ಕುಮಾರಸ್ವಾಮಿ ಅವರೆ ಶಕುನಿ, ಮಂಥರೆ ಮಾತು ಕೇಳಬೇಡಿ ಎನ್ನುವ ಮೂಲಕ ಶಾಸಕ ಸಾ.ರಾ.ಮಹೇಶ್ ಹೆಸರು  ಹೇಳದೆ ಶಕುನಿ ಎಂದು ಕರೆದರು.

ಶಕುನಿ ಕೌರವನ ಜೊತೆ ಸೇರಿ ಕೌರವ ವಂಶವನ್ನೇ ನಾಶ ಮಾಡಿದ. ಮಂದರೆ ರಾಮನ ಪಟ್ಟಾಭಿಷೇಕ ತಪ್ಪಿಸಿ ಕಾಡಿಗೆ ಕಳುಹಿಸಿದಳು. ನಾಟಕದಲ್ಲಿ ಹೇಳುವ ಈ ಪ್ರಸಂಗಗಳಂತೆ ನಡೆದುಕೊಳ್ಳಬೇಡಿ ಕುಮಾರಸ್ವಾಮಿ ಅವರೇ. ನೀವು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಅರ್ಥಪೂರ್ಣವಾಗಿ ತಿಳಿದುಕೊಳ್ಳಿ. ಅವರು ಹೇಳಿದ್ದನ್ನೇ ಕಾಪಿ, ಜರಾಕ್ಸ್ ಹೊಡೆಯಲು ಹೋಗಬೇಡಿ. ನಿಮ್ಮ ನಾಯಕತ್ವಕ್ಕೆ ಬೆಲೆ ಇದೆ. ಅದಕ್ಕೆ ಕುಂದು ತರುವ ಮಾತು ಆಡಿಲ್ಲ ಎಂದು ಜಿ.ಟಿ ದೇವೇಗೌಡರು ಕಿಡಿಕಾರಿದರು.

ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ….

ಕುಮಾರಸ್ವಾಮಿ ಅವರು ಜಿ.ಟಿ.ದೇವೇಗೌಡರ ಬೇರು ತೆಗೆಯುತ್ತಿಲ್ಲ. ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ. ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಊರೂರಿಗೆ ಹೋಗಿ ಪ್ರಚಾರವನ್ನೂ ಮಾಡದೆ ಮನೆಯಲ್ಲಿ ಕುಳಿತಿದ್ದೇನೆ.  ನೀವು ತಾಲ್ಲೂಕುಗಳನ್ನು ಸುತ್ತುತ್ತಿದ್ದೀರಿ. ನನ್ನನ್ನು ನಾನು ಎಲ್ಲಿಯೂ ಆಲದಮರ ಅಂತ ಕರೆದುಕೊಂಡಿಲ್ಲ. ಆದ್ರೆ ನನ್ನ ವಿರುದ್ಧ ನೀವು ತಾಲೂಕುಗಳಿಗೆ ಹೋಗಿ ಮಾತನಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಪಿರಿಯಾಪಟ್ಟಣದಲ್ಲಿ ಶಾಸಕ ಮಹದೇವು ಸಂಕಷ್ಟ ಕಾಲದಲ್ಲೂ ಜೆಡಿಎಸ್‌ನಲ್ಲೇ ಉಳಿದುಕೊಂಡರು.  ಅವರ ಮಗನ ವಿರುದ್ಧ ನೀವು ಪ್ರಚಾರ ಮಾಡಿದ್ದೀರಿ. ಜೆಡಿಎಸ್ ಬದಲು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದೀರಿ. ಕಾಂಗ್ರೆಸ್ ಮಾಜಿ ಶಾಸಕ ವೆಂಕಟೇಶ್ ಜತೆಗೆ ಮಾತನಾಡಿಕೊಂಡು ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೀರಿ ಎಂದು ಜಿ.ಟಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಈಗಲೂ ಜೆಡಿಎಸ್‌ನಲ್ಲೇ ಇದ್ದೇನೆ….

ಸಾ.ರಾ.ಮಹೇಶ್ ಛತ್ರಕ್ಕೆ ಬಂದು ನನ್ನನ್ನು ಜೆಡಿಎಸ್‌ನಿಂದ ಹೊರಗೆ ಹಾಕುತ್ತೇವೆ ಅಂತ ಹೇಳಿದ್ದೀರಿ.  ಪದೇ ಪದೇ ನನ್ನನ್ನು ಯಾಕೆ ಅವಮಾನ ಮಾಡುತ್ತೀರಿ. ನಾನು ಈಗಲೂ ಜೆಡಿಎಸ್‌ನಲ್ಲೇ ಇದ್ದೇನೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಸಾಲಿನಲ್ಲೇ ನನಗೆ ಖುರ್ಚಿ ಇದೆ. ನಾನು ಈಗಲೂ ಜೆಡಿಎಸ್ ಶಾಸಕರ ಜತೆಯಲ್ಲೇ ಕುಳಿತುಕೊಳ್ಳುತ್ತಿದ್ದೇನೆ.  ನಾನು ಎಲ್ಲಿಗೂ ಹೋಗದಂತೆ ಜೆಡಿಎಸ್‌ನಲ್ಲಿ ಕೂಡಿಹಾಕಿ ಬೀಗ ಹಾಕಲಾಗಿದೆ ಎಂದು ಜಿ.ಟಿ ದೇವೇಗೌಡರು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಅವರು ಯಾರ್ಯಾರದ್ದೋ ಮಾತು ಕೇಳಿಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಎಚ್.ಡಿ.ಕೋಟೆಯಲ್ಲಿ ಮೈಮುಲ್ ಪ್ರಚಾರದ ವೇಳೆ  ಮೈಸೂರು ಹೈಕಮಾಂಡ್ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡ ಎನ್ನುವ ಆಲದ ಮರವನ್ನು ಬುಡಸಮೇತ ಕಿತ್ತುಹಾಕಿ ಹೊಸ ಗಿಡ ನೆಡುತ್ತೇವೆ ಅಂತ ಹೇಳಿದ್ದಾರೆ. ಅವರ ಮಾತು ಕೇಳಿಕೊಂಡು ಕುಮಾರಸ್ವಾಮಿ ಕೂಡ ನನ್ನ ವಿರುದ್ಧ ಮಾತನಾಡಿದ್ದಾರೆ.  ನಾನು ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ನಾನು ಮನಸ್ಸು ಮಾಡಿದ್ದಾರೆ ಶಾಶ್ವತವಾಗಿ ಮೈಮುಲ್ ಅಧ್ಯಕ್ಷನಾಗಿರುತ್ತಿದ್ದೆ. ಯಾವ ಕಾಲದಲ್ಲೋ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುತ್ತಿದ್ದೆ. ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದಾಗ ಕುಮಾರಸ್ವಾಮಿ ಸಹಕಾರ ಕೊಡಲಿಲ್ಲ. ಸಾ.ರಾ.ಮಹೇಶ್ ಮಾತು ಕೇಳಿಕೊಂಡು ಪ್ರತಿಸ್ಪರ್ಧಿ ಚಂದ್ರಶೇಖರ್ ಪರವಾಗಿ ಮತಯಾಚನೆ ಮಾಡಿದರು. ಜನರ ಆಶೀರ್ವಾದದಿಂದ ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಿದ್ದಾನೆ.  ಜನ ಯಾರ ಪರವಾಗಿದ್ದಾರೆ ಎಂಬುದನ್ನು ಮೈಮುಲ್ ಚುನಾವಣೆ ಫಲಿತಾಂಶ ನಿರ್ಣಯ ಮಾಡಲಿದೆ ಎಂದು  ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಕುಮಾರಸ್ವಾಮಿ ಅವರೆ ಪದೇ ಪದೇ ಯಾಕೆ ನನ್ನ ಬಗ್ಗೆ ಮಾತನಾಡುತ್ತೀರಿ. ಯಾವಾಗಲು ಯಾಕೆ ನನ್ನ ಮಾನ ಮರ್ಯಾದೆ ತೆಗಿತಿದ್ದಿರಿ. ಅಂತಹದ್ದು ನಾನು ಏನು ಮಾಡಿದ್ದೇನೆ. ಏನ್ ಮಾಡಿದ್ದೀನಿ ಅಧಿಕೃತವಾಗಿ ಹೇಳಿ. ನ್ಯಾಯಾಲಯದಲ್ಲಿ ನೀವೇ ಕೇಸ್ ಹಾಕಿಸಿದ್ದೀರಿ. ಅದರ ತೀರ್ಪನ್ನ ನಾವು ಪಾಲನೆ ಮಾಡಿಕೊಂಡು ಹೋಗುತ್ತಿದ್ದೇವೆ. ನ್ಯಾಯಾಲಯದ ವಿರುದ್ಧವಾಗಿ ನೀವು ಮಾತನಾಡುತ್ತಿದ್ದೀರಿ ಎಂದು ಹೆಚ್.ಡಿಕೆ ವಿರುದ್ದ ಜಿ.ಟಿ ದೇವೇಗೌಡರು ಹರಿಹಾಯ್ದರು.

ENGLISH SUMMARY….

MLA GTD advices HDK to not to listen to the words of ‘Shakuni,’ ‘Mandare’

Mysuru, Mar.15, 2021 (www.justkannada.in): The war of words between JDS leaders has continued. It is now the turn of former Chief Minister H.D. Kumaraswamy and JDS MLA G.T.Devegowda.

Speaking to the media persons at Chamundi Hills in Mysuru today, MLA G.T. Devegowda said, “Kumaraswami please don’t listen to the words of ‘Shakuni,’ and ‘Mandare’. By mentioning the name of ‘Shakuni’, he meant MLA Sa. Ra. Mahesh.

“Shakuni spoilt the entire Kouravas by joining hands with them. ‘Mandare’ prevented the coronation of Rama and sent him to the forest. Hence, Kumaraswamy please don’t behave like the incidents that have taken place in the epic. You were the Chief Minister of the State for two terms. Please behave properly. Please don’t try to copy and xerox them. Your leadership has value, don’t lose it with your words,” he said.

Keywords: G.T. Devegowda/ JDS MLA/ H.D. Kumaraswamy/ war of words

Key words: mysore- mla-GT Devegowda-outrage-agianst- hd kumaraswamy

The post ಕುಮಾರಸ್ವಾಮಿ ಅವರೇ ಶಕುನಿ, ಮಂಥರೆ ಮಾತು ಕೇಳಬೇಡಿ- ಹೆಚ್.ಡಿಕೆ ವಿರುದ್ಧ ಗುಡುಗಿದ ಶಾಸಕ ಜಿ.ಟಿ ದೇವೇಗೌಡ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಮೇಶ್ ಜಾರಕಿಹೋಳಿ ರಾಸಲೀಲೆ ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ ವಿರುದ್ಧ ಐಜಿಗೆ ದೂರು…
ಮಂಡ್ಯ,ಮಾರ್ಚ್,4,2021(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೋಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ ಆರ್.ಟಿಐ  ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ತನಿಖೆ ನಡೆಸುವಂತೆ  ಬೆಂಗಳೂರಿನ ಐಜಿ  ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ.

ಮಂಡ್ಯದ ಭಾರತ ಸಂವಿಧಾನ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪೂರ್ಣಚಂದ್ರ  ಎಂಬುವವರು ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು ನೀಡಿದ್ದಾರೆ. ರಾಜ್ಯದ ಪ್ರಮುಖ ರಾಜಕಾರಣಿಗಳು  ಮತ್ತು ಅಧಿಕಾರಿಗಳ ಅನೇಕ ಸಿಡಿಗಳನ್ನು ಇಟ್ಟುಕೊಂಡು ದಿನೇಶ್ ಕಲ್ಲಹಳ್ಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.

ಹಾಗೆಯೇ ಸಚಿವರ ರಾಸಲೀಲೆ ಸಿ.ಡಿ ಬಿಡುಗಡೆ ಮಾಡಿ ಸಮಾಜದ ಸ್ವಾಸ್ಥ ಹಾಳು ಮಾಡುತ್ತಿದ್ದು, ತಕ್ಷಣವೇ ದೂರು ನೀಡಿರುವ ದಿನೇಶ್ ಕಲ್ಲಹಳ್ಳಿರನ್ನು ಬಂಧಿಸಿ ತನಿಖೆ ನಡೆಸುವಂತೆ ಪೂರ್ಣಚಂದ್ರ ಒತ್ತಾಯಿಸಿದ್ದಾರೆ.

ಕೃಪೆ- internet

ತನಿಖೆ ನಡೆಸಿ ಈತನ ಬಳಿ ಸಿಡಿಗಳು ಎಷ್ಟಿವೆ.  ಇದರ ಹಿಂದೆ ಇರುವ ಪ್ರಭಾವಿಗಳು ಯಾರು ಎನ್ನುವುದನ್ನ ಬಹಿರಂಗ ಪಡಿಸಬೇಕು ಎಂದು ಮನವಿ ಮಾಡಿ ಐಜಿ  ಹಾಗೂ ಮಾನವಹಕ್ಕು ಆಯೋಗಕ್ಕೆ ಪೂರ್ಣಚಂದ್ರ ದೂರು ಸಲ್ಲಿಕೆ ಮಾಡಿದ್ದಾರೆ.

Key words: Ramesh jarakihioli –Rasaleele- CD- case- complains –agianst- Dinesh Kallahalli

The post ರಮೇಶ್ ಜಾರಕಿಹೋಳಿ ರಾಸಲೀಲೆ ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ ವಿರುದ್ಧ ಐಜಿಗೆ ದೂರು… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಾರಿಗೆ ವ್ಯವಸ್ಥೆ ನಂಬಿದವರ ರಕ್ತ ಹೀರಿ ಸರ್ಕಾರ ನಡೆಸುತ್ತಿದ್ದಾರೆ- ಪ್ರಧಾನಿ ಮೋದಿ ವಿರುದ್ದ ಡಿ.ಕೆ ಶಿವಕುಮಾರ್ ಗುಡುಗು…
ಬೆಂಗಳೂರು,ಜೂ,29,2020(www.justkannada.in):  ಪೆಟ್ರೋಲ್ ಡಿಸೇಲ್ ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ. ಸಾರಿಗೆ ವ್ಯವಸ್ಥೆ ನಂಬಿದವರ ರಕ್ತ ಹೀರಿ ಸರ್ಕಾರ ನಡೆಸುತ್ತಿದ್ದಾರೆ. ಮೋದಿ ಅವರಿಗೆ ಕಣ್ಣು, ಕಿವಿ ಜತೆ ಹೃದಯವೂ ಇಲ್ಲ ಎಂದು  ಡಿ.ಕೆ ಶಿವಕುಮಾರ್  ವಾಗ್ದಾಳಿ ನಡೆಸಿದರು.

ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಇಂದು ಕಾಂಗ್ರೆಸ್ ನಾಯಕರು ಸೈಕಲ್ ಜಾಥಾ ಚಳುವಳಿ ನಡೆಸಿದರು. ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರನ್ನು ಜೀವಂತ ಸುಡುತ್ತಿದೆ. ಇದು ನಮ್ಮ ಹೋರಾಟವಲ್ಲ.  ಜನರನ್ನ ಉಳಿಸುವ ಹೋರಾಟ. ದೇಶದ ಎಲ್ಲಾ ವರ್ಗದ ಜನರನ್ನ ಬದುಕಿಸಲು ನಡೆಸುತ್ತಿರುವ ಹೋರಾಟ ಎಂದರು.

ಜನರ ಧ್ವನಿಯಾಗುವುದು ನಮ್ಮ ಕರ್ತವ್ಯ. ಹೀಗಾಗಿ ಪೊಲೀಸ್ ಅಧಿಕಾರಿಗಳು ನಮ್ಮ ವಿರುದ್ಧ ಯಾವ ಕೇಸ್ ಬೇಕಾದರೂ ಹಾಕಿಕೊಳ್ಳಲಿ. ನಾನು ಇವರ ಯಾವ ಕೇಸ್ ಗೂ ಹೆದರುವವನಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: petrol-diesel-KPCC president- DK Shivakumar-agianst- pm modi

The post ಸಾರಿಗೆ ವ್ಯವಸ್ಥೆ ನಂಬಿದವರ ರಕ್ತ ಹೀರಿ ಸರ್ಕಾರ ನಡೆಸುತ್ತಿದ್ದಾರೆ- ಪ್ರಧಾನಿ ಮೋದಿ ವಿರುದ್ದ ಡಿ.ಕೆ ಶಿವಕುಮಾರ್ ಗುಡುಗು… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕ್ರಿಶ್ಚಿಯನ್ ದೇಶಕ್ಕೆ ಹೋಗಿ ಕೈ ಒಡ್ಡುವ ಅವರ ಮಕ್ಕಳು ನಮ್ಮ ಹಳ್ಳಿಗೆ ಬಂದು ಕೆಲಸ ಮಾಡೋಕೆ ಆಗಲ್ವೆ- ಕಲ್ಲಡ್ಕ ಪ್ರಭಾಕರ್ ವಿರುದ್ದ ಸಂಸದ ಡಿ,ಕೆ ಸುರೇಶ್ ವಾಗ್ದಾಳಿ…
ರಾಮನಗರ,ಜ,16,2020(www.justkannada.in):  ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ನಡೆದ ಕನಕಪುರ ಚಲೋದಲ್ಲಿ ತನ್ನ ಮತ್ತು ತನ್ನ ಅಣ್ಣ ಡಿಕೆ ಶಿವಕುಮಾರ್  ಮೇಲೆ ವಾಗ್ದಾಳಿ ನಡೆಸಿದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ವಿರುದ್ದ ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.

ರಾಮನಗರ ಕನಕಪುರ ತಾಲ್ಲೂಕಿನ ತುಂಗಣಿಯಲ್ಲಿ ಇಂದು ಮಾತನಾಡಿದ ಸಂಸದ ಡಿ.ಕೆ ಸುರೇಶ್, ಕಲ್ಲಡ್ಕ ಪ್ರಭಾಕರ್  ಭಾರತದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ  ಮಾತನಾಡ್ತಾರೆ. ಆದರೆ  ಅವರ ಮಕ್ಕಳು ಕೆಲಸ ಮಾಡುವುದು ಮಾತ್ರ ಅಮೇರಿಕಾದಲ್ಲಿ.   ಕ್ರಿಶ್ಚಿಯನ್ ದೇಶಕಕ್ಕೆ ಹೋಗಿ ಅವರ ಮಕ್ಕಳು  ಕೈ ಒಡ್ಡುತ್ತಾರೆ. ಯಾಕೆ ನಮ್ಮ ಹಳ್ಳಿಗೆ ಬಂದು ಕೆಲಸ ಮಾಡಲು ಆಗಲ್ಲವೇ..?  ಎಂದು ಲೇವಡಿ ಮಾಡಿದರು.

ಪ್ರಭಾಕರ್ ಇಲ್ಲಿಗೆ ಬಂದು ಭಾಷಣ ಮಾಡುತ್ತಾರೆ. ಅವರಿಗೆ ಹೃದಯಾಘಾತವಾದಾಗ ಯಾವ ಆಸ್ಪತ್ರೆಗೆ ಹೋಗಿದ್ರು. ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿಗೆ ಯಾವುದೇ ಜಾತಿ ಧರ್ಮ ಇಲ್ಲ  ಬರುವುದಿಲ್ಲವೇ ಎಂದು ಸಂಸದ ಡಿ.ಕೆ ಸುರೇಶ್ ಪ್ರಶ್ನಿಸಿದರು.

ಏಸುಪ್ರತಿಮೆ ನಿರ್ಮಾಣ ವಿರೋಧಿಸಿ ಇತ್ತೀಚೆಗೆ ಬಿಜೆಪಿ  ಹಿಂದೂ ಜಾಗರಣ ಸಂಘಟನೆ ವತಿಯಿಂದ ಕನಕಪುರದಲ್ಲಿ ನಡೆದ  ಬೃಹತ್ ಸಮಾವೇಶದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಪಾಲ್ಗೊಂಡು ಡಿ.ಕೆ ಬ್ರದರ್ಸ್ ವಿರುದ್ದ ವಾಗ್ದಾಳಿ ನಡೆಸಿದ್ದರು.

Key words: Ramanagar-MP-DK suresh-Outrage-agianst-rss leader-kalladka prabhakar

The post ಕ್ರಿಶ್ಚಿಯನ್ ದೇಶಕ್ಕೆ ಹೋಗಿ ಕೈ ಒಡ್ಡುವ ಅವರ ಮಕ್ಕಳು ನಮ್ಮ ಹಳ್ಳಿಗೆ ಬಂದು ಕೆಲಸ ಮಾಡೋಕೆ ಆಗಲ್ವೆ- ಕಲ್ಲಡ್ಕ ಪ್ರಭಾಕರ್ ವಿರುದ್ದ ಸಂಸದ ಡಿ,ಕೆ ಸುರೇಶ್ ವಾಗ್ದಾಳಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.