wanted Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಸುಮಾರು 36 ಸರಗಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಸರಗಳ್ಳನ ಬಂಧನ.
ಬೆಂಗಳೂರು,ಅಕ್ಟೋಬರ್,25,2022(www.justkannada.in): ಸುಮಾರು 36 ಸರಗಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನ ಬೆಂಗಳೂರಿನ ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕುಖ್ಯಾತ ಸರಗಳ್ಳ ಸೈಯದ್ ಪರ್ವೇಜ್ ಬಂಧಿತ ಆರೋಪಿ.  ಬಂಧಿತನಿಂಧ  92 ಗ್ರಾಂ ತೂಕದ 2 ಚಿನ್ನದ ಸರಗಳನ್ನ ವಶಕ್ಕೆ ಪಡೆಯಲಾಗಿದೆ. ಈತ ಸುಮಾರು  36 ಸರಗಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ. ಎನ್ನಲಾಗಿದೆ.

ಆರೋಪಿ ಸೈಯದ್ ಮನೆಯಲ್ಲಿ ಯಾರು ಇಲ್ಲದ ವೇಳೆ ನುಗ್ಗಿ ಚಿನ್ನದ ಸರ ಕದಿಯುತ್ತಿದ್ದ. ಪ್ರಕರಣ ಸಂಬಂಧ  ತಿಲಕ್ ನಗರ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Key words: arrest – notorious thief – wanted – 36 theft cases-bangalore

The post ಸುಮಾರು 36 ಸರಗಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಸರಗಳ್ಳನ ಬಂಧನ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರು ರೈಲು ನಿಲ್ದಾಣದಲ್ಲಿ ಮಾಸ್ಕ್ ಹಿಂದಿರುವ ‘ವಾಂಟೆಡ್’ ವ್ಯಕ್ತಿಯನ್ನು ಪತ್ತೆಹಚ್ಚುವ ಹೊಸ ತಂತ್ರಜ್ಞಾನ ಅಳವಡಿಕೆ.
ಬೆಂಗಳೂರು ಅಕ್ಟೋಬರ್ 7, 2021 (www.justkannada.in): ಈ ಹಿಂದೆ ವರದಿಯಾಗಿದ್ದಂತಹ ಅನೇಕ ಪ್ರಕರಣಗಳ ಹಿನ್ನೆಲೆಯಲ್ಲಿ, ಬೆಂಗಳೂರಿನ ಕಂಠೀರವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕೃತಕ ಬುದ್ಧಿವಂತಿಕೆ ಆಧಾರಿತ ಮುಖ ಗುರುತಿಸುವ ಕ್ಯಾಮೆರಾಗಳನ್ನು (AI-based face recognition cameras) ಅಳವಡಿಸಿದ ದೇಶದ ಮೊಟ್ಟ ಮೊದಲ ರೈಲು ನಿಲ್ದಾಣ ಎಂದು ಗುರುತಿಸಕೊಂಡಿದೆ. ಅಧಿಕಾರಿಗಳ ಪ್ರಕಾರ ಯಾವುದಾದರೂ ಅಪರಾಧಿ ಮಾಸ್ಕ್ ಧರಿಸಿದ್ದರೂ ಸಹ ಈ ಕ್ಯಾಮೆರಾಗಳಲ್ಲಿ ಅವರ ಮುಖ ಕಾಣಿಸುತ್ತದಂತೆ, ಇದರಿಂದ ಅಪರಾಧಿಗಳನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲು ನೆರವಾಗುತ್ತದೆ.

ಅಪರಾಧ ಪ್ರಕರಣಗಳಲ್ಲಿ ಸಿಲುಕಿ ತಪ್ಪಿಸಿಕೊಂಡು ಓಡಾಡುವ ಅಪರಾಧಿಗಳು ಪೊಲೀಸರ ಕಣ್ಣು ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುತ್ತಾರೆ. ಅದರಲ್ಲಿ ಮಾಸ್ಕ್ ಧರಿಸಿ ಓಡಾಡುವುದೂ ಸಹ ಒಂದು. ಮೇಲಾಗಿ ಈ ಕೋವಿಡ್ ಸನ್ನಿವೇಶ ಉದ್ಭವಿಸಿರುವ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಿ ಓಡಾಡುವುದು ಸಾಮ್ಯಾವಾಗಿಬಿಟ್ಟಿದೆ. ಇದು ಅಪರಾಧಿಗಳಿಗೆ ತಪ್ಪಿಸಿಕೊಳ್ಳುವ ಸುಲಭ ದಾರಿಯಾಗಿ ಹೊರಹೊಮ್ಮಿದೆ. ಆದರೆ ಹೀಗೆ ಮಾಸ್ಕ್ ಧರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಅಪರಾಧಿಗಳನ್ನು ಈ ಕ್ಯಾಮೆರಾಗಳು ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ. ಮಾಸ್ಕ್ ಧರಿಸಿರುವ ಯಾವುದೇ ವ್ಯಕ್ತಿಯ ಮುಖ ಈ ವಿನೂತನ, ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿರುವ ಕ್ಯಾಮೆರಾದಲ್ಲಿ ಕಾಣುತ್ತದೆ. ಈಗಾಗಲೇ ಈ ಸಿಸ್ಟಂನ ಡೇಟಾಬೇಸ್‌ನಲ್ಲಿ ೧೦೦ಕ್ಕೂ ಹೆಚ್ಚಿನ ಸಂಖ್ಯೆಯ ನಾಪತ್ತೆ ಆಗಿರುವ ಅಪರಾಧಿಗಳ ಭಾವಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿದೆ ಮತ್ತು ಇನ್ನೂ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.

ರೈಲ್ವೆ ಭದ್ರತಾ ಪಡೆ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಒಟ್ಟು ರೂ.೨.೪ ಕೋಟಿ ವೆಚ್ಚದಲ್ಲಿ ೧೫೭ ಈ ರೀತಿಯ ಮುಖ ಗುರುತಿಸುವ ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿದೆ. ಇಲ್ಲಿ ಗಮನಿಸಬೇಕಾಗಿರುವ ಮುಖ್ಯವಾದ ಸಂಗತಿ ಮತ್ತು ಶ್ಲಾಘನೀಯ ಸಂಗತಿ ಏನೆಂದರೆ ಈಗಾಗಲೇ ಈ ತಂತ್ರಜ್ಞಾನದ ಮೂಲಕ ಕೆಲವು ಅಪರಾಧಿಗಳನ್ನು ಸೆರೆ ಹಿಡಿಯಲಾಗಿದೆ.

ಅಪರಾಧಿಗಳು ಹಾಗೂ ಕಳ್ಳರ ಓಡಾಟದ ಮೇಲೆ ನಿಗಾವಹಿಸಲು ಕಮ್ಯಾಂಡ್ ಸೆಂಟರ್‌ ನಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಸಿಸಿಟಿವಿ ಫುಟೇಜ್ ಅನ್ನು ನಿರಂತರವಾಗಿ ಗಮನಿಸುವ ಕಾರ್ಯಕ್ಕಾಗಿಯೇ ನಿಯೋಜಿಸಲಾಗಿದೆ. ವಾಂಟೆಡ್ ಅಪರಾಧಿ ಅಥವಾ ಕಳ್ಳನ ಮುಖವನ್ನು ಪತ್ತೆ ಹಚ್ಚುವ ಕ್ಯಾಮೆರಾದಲ್ಲಿ ‘ಪಾಪ್-ಅಪ್’ ಸಂದೇಶ (pop-up message) ಮೂಡುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ತಾನಾಗಿಯೇ ರವಾನಿಯಾಗುತ್ತದೆ. ಈ ತಂತ್ರಜ್ಞಾನ ನಗರ ಪೊಲೀಸರಿಗೂ ಬಹಳ ಉಪಯುಕ್ತವಾಗಿದೆ.

ನೈಋತ್ಯ ರೈಲ್ವೆಯ ರೈಲ್ವೆ ಭದ್ರತಾ ಪಡೆಗಳ ಮುಖ್ಯ ಭದ್ರತಾ ಆಯುಕ್ತ ಅಲೋಕ್ ಕುಮಾರ್ ಅವರು ಈ ಕುರಿತು ಮಾತನಾಡುತ್ತಾ, “ನಾವು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಿನೂತನ ತಂತ್ರಜ್ಞಾನದ ಮುಖ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಿ ಈಗಾಗಲೇ ಒಂದು ತಿಂಗಳಿಂದ ಪ್ರಾಯೋಗಿಕವಾಗಿ ಅಪರಾಧಿಗಳನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ವಿಶೇಷ ತಂತ್ರಜ್ಞಾನದ ಕ್ಯಾಮೆರಾಗಳು ಮಾಸ್ಕ್ಗಳು, ಟೋಪಿಗಳು ಅಥವಾ ಮತ್ಯಾವುದಾದರೂ ರೀತಿಯ ವಸ್ತುಗಳನ್ನು ಧರಿಸಿದ್ದರೂ ಸಹ ವ್ಯಕ್ತಿಗಳ ಮುಖವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ. ವ್ಯಕ್ತಿಯ ೧೫-೨೦%ರಷ್ಟು ಮುಖ ಈ ಕ್ಯಾಮೆರಾದಲ್ಲಿ ಗೋಚರಿಸುತ್ತದೆ. ಇದು ಸಾಮಾನ್ಯ ಸಿಸಿಟಿವಿ ಕ್ಯಾಮೆರಾಗಳಂತಲ್ಲ. ಪ್ರಸ್ತುತ ನಾವು ಈ ವ್ಯವಸ್ಥೆಯ ಅನುಕೂಲಗಳು ಹಾಗೂ ಅನಾನುಕೂಲಗಳನ್ನು ಅಂದಾಜಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಈ ತಂತ್ರಜ್ಞಾನವನ್ನು ಇತರೆ ಸ್ಥಳಗಳಲ್ಲಿಯೂ ಅನುಷ್ಠಾನಗೊಳಿಸಲು ಇನ್ನೂ ಆರು ತಿಂಗಳ ಸಮಯ ಬೇಕಾಗಬಹುದು,” ಎಂದು ವಿವರಿಸಿದರು.

ಈ ಕೃತಕ ಬುದ್ಧಿವಂತಿಕೆ ಆಧಾರಿತ ತಂತ್ರಜ್ಞಾನ, ೨೦ ವರ್ಷಗಳ ಹಿಂದೆ ತೆಗೆದಿರುವ ವ್ಯಕ್ತಿಯ ಚಿತ್ರದೊಂದಿಗೆ ಈಗಿನ ಚಿತ್ರವನ್ನು ಸರಿಹೊಂದಿಸಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಮುಂದಿನ ೧೫-೨೦ ವರ್ಷಗಳಲ್ಲಿ ಬೇಕಾಗುವ ತಂತ್ರಜ್ಞಾನದ ಬದಲಾವಣೆಗೂ ಅವಕಶವಿದೆ. ಈ ತಂತ್ರಜ್ಞಾನ ಈಗಾಗಲೇ ನಗರ ಪೊಲೀಸರಿಗೆ ತಪ್ಪಿಸಿಕೊಂಡಿದ್ದ ವಿಶೇಷಚೇತನ ಮಹಿಳೆಯೊಬ್ಬರನ್ನು ಪತ್ತೆ ಹಚ್ಚುವಲ್ಲಿ ನೆರವಾಗಿದೆ. ಜೊತೆಗೆ ಈ ವಿನೂತನ ತಂತ್ರಜ್ಞಾನ ತಪ್ಪಿಸಿಕೊಂಡಿರುವ ಮಕ್ಕಳನ್ನೂ ಸಹ ಗುರುತಿಸಲು ನೆರವಾಗಲಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: New technology – detect- wanted- person –behind- mask – Bangalore railway station

The post ಬೆಂಗಳೂರು ರೈಲು ನಿಲ್ದಾಣದಲ್ಲಿ ಮಾಸ್ಕ್ ಹಿಂದಿರುವ ‘ವಾಂಟೆಡ್’ ವ್ಯಕ್ತಿಯನ್ನು ಪತ್ತೆಹಚ್ಚುವ ಹೊಸ ತಂತ್ರಜ್ಞಾನ ಅಳವಡಿಕೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಚಿವರ ಆಶಯದಂತೆ ಶುರುವಾಯ್ತು ರೇಷ್ಮೆ ಮಾರುಕಟ್ಟೆಯಲ್ಲಿ ಆನ್ ಲೈನ್ ವ್ಯವಹಾರ…
ಬೆಂಗಳೂರು,ಜನವರಿ,21,2021(www.justkannada.in):  ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಆದರೆ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಮಾತ್ರ ನಿರಂತರ ಅನ್ಯಾಯವಾಗುತ್ತಲೇ ಇದೆ. ಈ ಕಾರಣದಿಂದಲೇ ರೇಷ್ಮೆ ಮಾರುಕಟ್ಟೆಯಲ್ಲಿ ಹರಾಜು ಮತ್ತು ಮಾರಾಟ ವ್ಯವಸ್ಥೆಯಲ್ಲಿ ಇ ಹಣ ಪಾವತಿ ತಂದು ಪಾರದರ್ಶಕ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವ ಬಗ್ಗೆ ಬಜೆಟ್ ನಲ್ಲಿಯೇ ಸರ್ಕಾರ ಘೋಷಣೆ ಮಾಡಲಾಗಿತ್ತು.

ಅಂತೆಯೇ ಈಗ  ಇ ಟೆಂಡರ್ ಪದ್ದತಿ ಜಾರಿಗೆ ತರಲಾಗಿದ್ದು, ಹಲವು ದಶಕಗಳಿಂದ ಸಂಕಷ್ಟ ಅನುಭವಿಸುತ್ತಿದ್ದ ರೈತರು ಈಗ ನೆಮ್ಮದಿಯ ನಿಟ್ಟುಸಿರು  ಬಿಟ್ಟಿದ್ದಾರೆ. ನಗದು ವ್ಯವಹಾರ ಇದ್ದ ಕಾರಣ ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಅದೆಷ್ಟೋ ರೈತರು ಮಾರುಕಟ್ಟೆಯಲ್ಲಿ ವ್ಯವಹಾರ ಮುಗಿಸಿ, ಹಣ ಪಡೆದು ಹೋಗುವಾಗ ಪಿಕ್ ಪಾಕೆಟ್ ಆಗಿರುವ ಉದಾಹರಣೆಯೂ ಸಾಕಷ್ಟಿತ್ತು. ಕೆಲವು ವೇಳೆ ಮಧ್ಯವರ್ತಿಗಳಿಂದಾಗಿ ರೈತರಿಗೆ ಕಡಿಮೆ ಹಣ ಲಭ್ಯವಾಗುತ್ತಿತ್ತು. ಈ ಎಲ್ಲ ಕಾರಣಗಳಿಂದ ರೈತರು ಹೈರಾಣಾಗಿದ್ದರು. ಸಚಿವ ಡಾ| ನಾರಾಯಣ ಗೌಡ ರೇಷ್ಮೆ ಇಲಾಖೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಮಾರುಕಟ್ಟೆಯಲ್ಲಿ ನಗದು ವ್ಯವಹಾರಕ್ಕೆ ಬ್ರೇಕ್ ಹಾಕುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಶಿಡ್ಳಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ಇ ಟೆಂಡರ್ ಹಾಗೂ ಇ ಹಣ ಪಾವತಿ ಆರಂಭಿಸಲಾಗಿತ್ತು. ಶಿಡ್ಳಘಟ್ಟದಲ್ಲಿ ನಡೆಸಿದ ಪ್ರಯೋಗ ಸಂಪೂರ್ಣ ಯಶಸ್ಸಾಗಿದೆ. ರೈತರು, ರೀಲರುಗಳು ಸುಗಮವಾಗಿ ವ್ಯವಹಾರ ನಡೆಸಿದ್ದಾರೆ. ರಾಜ್ಯದ ಎಲ್ಲ ರೇಷ್ಮೆ ಮಾರುಕಟ್ಟೆಗೂ ಇದನ್ನ ವಿಸ್ತರಿಸಲಾಗಿದೆ.

ಜನೆವರಿ 20 ರಿಂದ ಶಿಡ್ಳಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ನಗದು ರಹಿತ (ಕ್ಯಾಶ್ ಲೆಸ್) ವ್ಯವಹಾರ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಖರೀದಿ ಇನ್ನು ಮುಂದೆ ನಗದು ರಹಿತವಾಗಿ ನಡೆಯಲಿದೆ. ಗೂಡು ಖರೀದಿಸಿದ ರೀಲರ್ ಗಳು ಮಾರ್ಕೆಟ್ ಆಫೀಸರ್ ಅಕೌಂಟ್ ಗೆ ಹಣ ಜಮ ಮಾಡುತ್ತಾರೆ. ಮಾರ್ಕೇಟ್ ಆಫೀಸರ್ ಅಕೌಂಟ್ ನಿಂದ ರೇಷ್ಮೆ ಬೆಳೆಗಾರರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಜಮಾ ಆಗಲಿದೆ. ಮೊದಲು ಬಹಿರಂಗವಾಗಿ ರೇಷ್ಮೆ ಗೂಡು ಹರಾಜು ಮಾಡಲಾಗುತ್ತಿತ್ತು. ಈಗ ಮೊಬೈಲ್ ಆಪ್ ಮೂಲಕ ಹರಾಜು ಪ್ರಕ್ರಿಯೆ ನಡೆಯಲಿದೆ. ಜನೆವರಿ 4 ರಂದು ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ಸಚಿವರು, ರೇಷ್ಮೆ ಬೆಳೆಗಾರರು ಮತ್ತು ರೀಲರುಗಳು ಇ ಹಣ ಪಾವತಿಗೆ ಆಸಕ್ತಿ ಹೊಂದಿದ್ದಾರೆ. ಆದರೂ ಮಾರುಕಟ್ಟೆಯಲ್ಲಿ ಇ ಹಣ ಪಾವತಿ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅಧಿಕಾರಿಗಳಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ 15 ದಿನಗಳ ಒಳಗಾಗಿ ಪ್ರಕ್ರಿಯೆ ಆರಂಭವಾಗಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಸಚಿವರ ಆದೇಶದ ಮೇರೆಗೆ ಅಧಿಕಾರಿಗಳು ಪ್ರತಿಯೊಂದು ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ಪರೀಶಿಲಿಸಿ, ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ನಗದು ವ್ಯವಹಾರಕ್ಕೆ ಸಂಪೂರ್ಣ ಬ್ರೇಕ್ ಹಾಕಿ ಟೆಂಡರ್ ಹಾಗೂ ಖರೀದಿಗೆ ಇ ಹಣ ಪಾವತಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಶಿಡ್ಳಘಟ್ಟ ಮಾರುಕಟ್ಟೆಯಲ್ಲಿ ಆನ್ಲೈನ್ ವ್ಯವಹಾರ ಯಶಸ್ಸಾದ ಬಳಿಕ ಈಗ ಎಲ್ಲ ಮಾರುಕಟ್ಟೆಗೆ ಇ ಬ್ಯಾಂಕಿಂಗ್ ವ್ಯವಸ್ಥೆಯನ್ನ ವಿಸ್ತರಿಸಲಾಗಿದೆ. ಈ ಬಗ್ಗೆ ರೈತರಿಗೂ ಸಂಪೂರ್ಣ ಮಾಹಿತಿ ಒದಗಿಸುವ ಕಾರಣಕ್ಕೆ ಪ್ರತಿ ಮಾರುಕಟ್ಟೆಯಲ್ಲಿ ಕರಪತ್ರಗಳು, ಬ್ಯಾನರ್ ಗಳನ್ನ ಅಳವಡಿಸಲಾಗಿದೆ.

ಸುಮಾರು 1 ಲಕ್ಷದ 31 ಸಾವಿರ ರೇಷ್ಮೆ ಬೆಳೆಗಾರರು ಹಾಗೂ 7 ಸಾವಿರ ರೀಲರುಗಳು ರೇಷ್ಮೆ ಉದ್ಯಮದಲ್ಲಿ ತೊಡಗಿದ್ದಾರೆ. ಇಲ್ಲಿವರೆಗೆ ನಗದು ವ್ಯವಹಾರ ನಡೆಸಿದ್ದ ರೈತರು ಮತ್ತು ರೀಲರುಗಳು ಇನ್ನು ಮುಂದೆ ಇ ಹಣ ಪಾವತಿ ಮೂಲಕವೆ ವ್ಯವಹಾರ ನಡೆಸಲಿದ್ದಾರೆ. ಇ ಹಣ ಪಾವತಿ ಆರಂಭಿಸಿ ಎಲ್ಲ ಮಾರುಕಟ್ಟೆಯಲ್ಲಿ ನಗದು ವ್ಯವಹಾರ ಸಂಪೂರ್ಣ ನಿಲ್ಲಿಸಲು ತೀರ್ಮಾನಿಸಲಾಗಿದೆ. ರೀಲರುಗಳು ನಗದು ಠೇವಣಿ ಇಡಬೇಕಾಗಿಲ್ಲ. ಕಂಪ್ಯೂಟರ್ ನಲ್ಲಿ ಎಲ್ಲ ವ್ಯವಹಾರಗಳ ಮಾಹಿತಿಯನ್ನ ಅಪ್ಲೋಡ್ ಮಾಡಲಾಗುತ್ತದೆ. ವ್ಯವಹಾರ ಪ್ರಕ್ರಿಯೆ ಕೂಡ ವೇಗವಾಗಿ ಆಗಲಿದೆ. ಪ್ರತಿದಿನ ಸರಿಸುಮಾರು 150 ಮೆಟ್ರಿಕ್ ಟನ್ ರೇಷ್ಮೆ ಗೂಡಿನ ವಹಿವಾಟು ಆಗುತ್ತಿದೆ. ವಾರ್ಷಿಕವಾಗಿ ಸುಮಾರು 3500 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇನ್ನು ಮುಂದೆ ರಾಜ್ಯದಲ್ಲಿರುವ ಎಲ್ಲ 55 ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನಗದು ವ್ಯವಹಾರ ಸ್ಥಗಿತವಾಗಿ ಆನ್ಲೈನ್ ವ್ಯವಹಾರ ನಡೆಯಲಿದೆ. ಯಾವುದೇ ಕಾರಣಕ್ಕು ಆನ್ಲೈನ್ ವ್ಯವಹಾರ ಸ್ಥಗಿತಗೊಂಡು ನಗದು ವ್ಯವಹಾರ ಆರಂಭವಾದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ. ಅಲ್ಲದೆ ಪ್ರತಿ ಮಾರುಕಟ್ಟೆಯಲ್ಲೂ  ಸರಿಯಾದ ವ್ಯವಹಾರ ನಡೆಯುತ್ತಿದೆ ಎಂಬುದನ್ನ ಖಾತ್ರಿಪಡಿಸಿಕೊಳ್ಳಲು ಸಡನ್ ವಿಸಿಟ್ ಮಾಡಲು ಜಂಟಿ ನಿರ್ದೇಶಕರ ನೇತೃತ್ವದ ವಿಚಕ್ಷಣಾ ದಳ  ರಚಿಸಲಾಗಿದೆ. ರೈತರು, ರೀಲರುಗಳ ದೂರು ಇದ್ಧಲ್ಲಿ ವಿಚಕ್ಷಣಾ ದಳ ಟೀಂ ಕ್ರಮ ತೆಗೆದಕೊಳ್ಳಲಿದೆ.

Key words: Online- business – silk market -began – minister -wanted

The post ಸಚಿವರ ಆಶಯದಂತೆ ಶುರುವಾಯ್ತು ರೇಷ್ಮೆ ಮಾರುಕಟ್ಟೆಯಲ್ಲಿ ಆನ್ ಲೈನ್ ವ್ಯವಹಾರ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.