Vivi Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು ವಿವಿ ಹಾಗೂ ಲಕ್ನೋದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆ ಜೊತೆ ಒಡಂಬಡಿಕೆಗೆ ಸಹಿ
ಮೈಸೂರು,ಡಿಸೆಂಬರ್,15,2020(www.justkannada.in) : ಮೈಸೂರು ವಿಶ್ವವಿದ್ಯಾಲಯ ಹಾಗೂ ಲಕ್ನೋದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯೊಂದಿಗೆ ಸಂಶೋಧನೆಗಳಿಗೆ ಸಹಕಾರಿ ಮತ್ತು ಸಹಕಾರದ ಉದ್ದೇಶದಿಂದ ಐದು ವರ್ಷಗಳ ಒಡಂಬಡಿಕೆಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಲಕ್ನೋದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ತಪಸ್ ಕೆ.ಕುಂದು ಅವರು ಸಹಿ ಮಾಡಿದರು.

ಮಾನಸಗಂಗೋತ್ರಿ ಆವರಣದಲ್ಲಿರುವ ವಿಜ್ಞಾನಭವನದಲ್ಲಿ ಮಂಗಳವಾರ ವಿವಿ ವತಿಯಿಂದ ಆಯೋಜಿಸಿದ್ದ ಎಪಿಜೆನೆಟಿಕ್ಸ್ : ಜೀವನ ಮೀರಿದ ವಂಶವಾಹಿಗಳು ವಿಷಯ ಕುರಿತು ಲಕ್ನೋದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ತಪಸ್ ಕೆ.ಕುಂದು ಅವರ ಉಪನ್ಯಾಸ ಕಾರ್ಯಕ್ರಮವನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು. ಮದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಈ ಸಂದರ್ಭ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಒಪ್ಪಂದದಂತೆ ಎರಡೂ ಸಂಸ್ಥೆಗಳು ಒಟ್ಟಿಗೆ ಸೇರಲು ಒಪ್ಪಿಕೊಂಡಿವೆ. ಪರಸ್ಪರ ಆಸಕ್ತಿಯ ಗುರುತಿಸಲ್ಪಟ್ಟ  ಕ್ಷೇತ್ರಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದೆ ಎಂದರು.

ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ ಐದು (5) ವರ್ಷಗಳವರೆಗೆ ಒಪ್ಪಂದವು ಮಾನ್ಯವಾಗಿರುತ್ತದೆ.  ಈ ಮೂಲಕ ಸಹಕಾರಿ ಸಹಕಾರವನ್ನು ಒದಗಿಸಲು ಈ ಒಪ್ಪಂದ ಸ್ಥಾಪಿಸಲಾಗಿದೆ. ಆಸಕ್ತಿಯ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಹಕಾರಿ ಸಂಶೋಧನಾ ಕಾರ್ಯಕ್ರಮಗಳು, ವಿದ್ಯಾರ್ಥಿ ತರಬೇತಿ ಕಾರ್ಯಕ್ರಮಗಳು, ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳು,  ಸಲಕರಣೆಗಳ ಸೌಲಭ್ಯ ಹಂಚಿಕೆ,  ಜಂಟಿ ಯೋಜನೆಗಳ ಸಲ್ಲಿಕೆ- ಸಹಯೋಗಿಗಳು ನಂತರ ಕೆಲಸವನ್ನು ಪ್ರಾರಂಭಿಸುತ್ತಾರೆ.  ಅಗತ್ಯ ಅನುಮೋದನೆ ಸಿಎಸ್ಐಆರ್-ಸಿಡಿಆರ್ ಮತ್ತು ಯುಒಎಂ ಕ್ರಮವಾಗಿ ಪಡೆಯುವುದಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅನುಷ್ಠಾನದ ಪ್ರಗತಿಯನ್ನು ಯುಒಎಂ ಮತ್ತು ಸಿಎಸ್ಐಆರ್-ಸಿಡಿಆರ್ಐ ಪರಸ್ಪರ ನಿರ್ಧರಿಸಿದಂತೆ ಪರಿಶೀಲಿಸಲಾಗುತ್ತದೆ. ಸಹಯೋಗದ ಪ್ರಯೋಜನಗಳನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ.  ಎರಡೂ ಪಕ್ಷಗಳು ಮತ್ತು ಅವರ ವಿದ್ಯಾರ್ಥಿ ಸಹಯೋಗಿ ಸಂಸ್ಥೆಗಳಿಗೆ ಯೋಜನೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಭೇಟಿ ನೀಡಬಹುದು ಮತ್ತು ಪರಸ್ಪರ ಹಣಕಾಸಿನ ಹೊಣೆಗಾರಿಕೆ ಇಲ್ಲದೆ ಸಾಕಷ್ಟು ವಿಮಾ ರಕ್ಷಣೆ ಹೊಂದಿರುತ್ತಾರೆ.  ಈ ಒಪ್ಪಂದವು ಎರಡೂ ಸಂಸ್ಥೆಗಳಿಗೆ ಪರಸ್ಪರ ಪ್ರಯೋಜನಕಾರಿಯಾಗಲಿದೆ ಮತ್ತು ಸಮುದಾಯದ ವೈಜ್ಞಾನಿಕ ಅಗತ್ಯಗಳಿಗೆ ಹೆಚ್ಚಿನ ಕೊಡುಗೆ ನೀಡಲು ನಮಗೆ ಸಹಾಯ ಮಾಡುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಮೈಸೂರು ವಿವಿಯಲ್ಲಿ ಎಂಎಚ್‌ಆರ್‌ಡಿ ಕಾರ್ಯಕ್ರಮದಡಿಯಲ್ಲಿ ಸ್ಥಾಪಿಸಲಾದ ಒಂದು ಪ್ರಮುಖ ಉತ್ಪಾದಕ ಸಂಶೋಧನೆ ಮತ್ತು ಕೋರ್ ಇನ್ ಸ್ಟ್ರುಮೆಂಟ್ ಸೌಲಭ್ಯವಾದ ವಿಜ್ನಾನ ಭವನದಲ್ಲಿ ವಿಜ್ಞಾನದ ವಿವಿಧ ವಿಭಾಗಗಳಲ್ಲಿ, ವಿಶೇಷವಾಗಿ ಔಷಧ ಅನ್ವೇಷಣೆಯ ಕುರಿತು ಸಂಶೋಧನೆಗಳನ್ನು ಒಳಗೊಂಡಿದೆ. ಪ್ರಸ್ತುತ ಹತ್ತು ಕ್ಕೂ ಹೆಚ್ಚು ಪ್ರಖ್ಯಾತ ವಿಜ್ಞಾನಿಗಳು ವಿಜ್ನಾನ ಭವನದಲ್ಲಿ  ವಿವಿಯ ಯುವ ಅಧ್ಯಾಪಕರೊಂದಿಗೆ ವಿವಿಧ ಸಂಶೋಧನಾ ಅಂಶಗಳಲ್ಲಿ ವಿಶೇಷ ಉಲ್ಲೇಖ ಅನ್ವೇಷಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

CSIR-CDRI ಒಂದು ಪ್ರವರ್ತಕ ಔಷಧ ಸಂಶೋಧನಾ ಸಂಸ್ಥೆಯಾಗಿದ್ದು, SAR, QSAR, ಕಾಂಬಿನೇಟೋರಿಯಲ್ ಸಂಶ್ಲೇಷಣೆ, ಬಯೋಇನ್ ಫಾರ್ಮಾಟಿಕ್ಸ್, ಪ್ರೋಟಿಯೋಮಿಕ್ಸ್, ಜೀನೋಮಿಕ್ಸ್, ರೆಗ್ಯುಲೇಟರಿ ಟಾಕ್ಸಿಕಾಲಜಿ, ಫಾರ್ಮಾಕಾಲಜಿ, ಫಾರ್ಮಾಕೊಕಿನೆಟಿಕ್ಸ್, ಫಾರ್ಮಾಸ್ಯೂಟಿಕ್ಸ್ ಮತ್ತು ಪರಿಣತಿ ಸೇರಿದಂತೆ ವಾಣಿಜ್ಯೀಕರಣದ ಹಂತದವರೆಗೆ ಹೊಸ ಔಷಧದ ಎಲ್ಲಾ ಮೂಲಸೌಕರ್ಯ ಸೌಲಭ್ಯಗಳನ್ನು ಮತ್ತು ಅಭಿವೃದ್ಧಿಯನ್ನು ಹೊಂದಿದೆ ಎಂದು ವಿವರಿಸಿದರು.

ಸಿನಿಕಲ್ ಪ್ರಯೋಗಗಳನ್ನು ನಡೆಸುವಲ್ಲಿ ಮತ್ತು ಸಂಯೋಜಿಸುವಲ್ಲಿ ನಮ್ಮ ವಿಶ್ವವಿದ್ಯಾಲಯದ ಸಂಶೋಧನಾ ಚಟುವಟಿಕೆಗಳನ್ನು ಪೂರೈಸಲು ನಿಮ್ಮ ಅತ್ಯಾಧುನಿಕ ಸಂಶೋಧನಾ ಸೌಲಭ್ಯವನ್ನು ಬಳಸಿಕೊಳ್ಳುವ ಅವಕಾಶದ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ವಿಜ್ಞಾನ ಭವನ ಕಾರ್ಯಕ್ರಮ ಸಂಯೋಜಕ ಚಂದ್ರನಾಯಕ್ ಇತರರು ಉಪಸ್ಥಿತರಿದ್ದರು.

English summary….

University of Mysore signs MoU with Central Drug Research Institute, Lucknow

Mysore, Dec. 15, 2020 (www.justkannada.in): Vice-Chancellor of the University of Mysore, Prof. G. Hemanth Kumar today signed a five-year term MoU with the Central Drug Research Institute of Lucknow.

A lecture on the topic “Epigenetics: Genes Beyond Life” was held at the Vignana Bhavana in Manasagangotri, by Prof. Tamas K. Kundu, Director Central Drug Research Institute (CDRI), Lucknow. Prof. G. Hemanth Kumar inaugurated the programme.

The MoU will be valid for five years and covers exchanging and organising Cooperative Research Programmes on specific subjects, student training programmes, teacher exchange programmes, exchanging tools and facilities, submission of joint projects, etc.

Keywords: University of Mysore/ MoU/ CDRI

key words : Mysore-Vivi-well-Central-medicine-Lucknow-research-institute-

Signing-Covenant

The post ಮೈಸೂರು ವಿವಿ ಹಾಗೂ ಲಕ್ನೋದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆ ಜೊತೆ ಒಡಂಬಡಿಕೆಗೆ ಸಹಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ವಿವಿಗೆ ಸುಧೀರ್ಘವಾದ ಇತಿಹಾಸ, ಪರೆಂಪರೆಯಿರುವುದು ಹೆಮ್ಮೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್
ಮೈಸೂರು,ಡಿಸೆಂಬರ್,12,2020(www.justkannada.in) : ಮೈಸೂರು ವಿವಿಗೆ ಸುಧೀರ್ಘವಾದ ಇತಿಹಾಸ, ಒಂದು ಪರೆಂಪರೆಯಿರುವುದು ಹೆಮ್ಮೆ ಪಡುವಂತಹ ವಿಷಯ. ವಿವಿಯ ಅಭಿವೃದ್ಧಿಗಾಗಿ ಹಿರಿಯ ವಿದ್ಯಾರ್ಥಿಗಳ ಸಂಘವು ಕೈಗೊಳ್ಳುವ ಎಲ್ಲ ಕಾರ್ಯಕ್ಕೆ ವಿವಿಯ ಬೆಂಬಲವಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಶನಿವಾರ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ  ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ 3ನೇ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ವಿವಿಧ ಕ್ಷೇತ್ರದ 8 ಮಂದಿ ಸಾಧಕರಿಗೆ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಒಂದು ಮನೆ, ಸಂಸ್ಥೆ, ವಿವಿಯಾಗಲೀ ಅಲ್ಲಿ ಹಿರಿಯರು ಇದ್ದರೇ ಭೂಷಣ. ಹಿರಿಯರು ಎಂದರೆ ಅನುಭವ, ಅನುಭವಕ್ಕೆ ಸಮನಾವಾದದ್ದೂ ಯಾವುದೂ ಇಲ್ಲ. ಅದನ್ನ ಗಳಿಸಿಕೊಳ್ಳುವುದು ಬಹಳ ಮುಖ್ಯ. ಪರಂಪರೆ ಇಲ್ಲದ ವಿದ್ಯಾಸಂಸ್ಥೆ ಯಾವ ಆದರ್ಶವನ್ನು ಬಿತ್ತಲಾರದು ಎಂದರು.

ನೂರ ನಾಲ್ಕು ವರ್ಷ ಸುದೀರ್ಘ ಇತಿಹಾಸವಿರುವ ವಿವಿಯಲ್ಲಿ ಕಲಿತವರ ಲೆಕ್ಕವಿಟ್ಟಿದ್ದರೆ ದಶಲಕ್ಷಗಳ ದಾಟಿ ಕೋಟಿ ತಲುಪ್ಪುತ್ತಿತ್ತೇನೋ, ವಿವಿಯ ಸರ್ವಾಂಗೀಣ ಬೆಳವಣಿಗೆಗೆ ಕಾಮಧೇನು, ಕಲ್ಪವೃಕ್ಷವಾಗಬಹುದಾಗಿದ್ದ ಹಿರಿಯ ವಿದ್ಯಾರ್ಥಿಗಳ ಸಂಘವು ತಡವಾಗಿ ಅಸ್ತಿತ್ವಕ್ಕೆ ಬಂತು. ಜಗತ್ತಿನ ದೊಡ್ಡ ವಿವಿಗಳ ಏಳಿಗೆಗೆ ಹಿರಿಯ ವಿದ್ಯಾರ್ಥಿಗಳ ಪಾತ್ರ ಪ್ರಧಾನವಾಗಿದೆ ಎಂದು ಹೇಳಿದರು.

ಇದ್ದುದನ್ನು ಹಂಚಿ ತಿನ್ನುವುದು ನಮ್ಮ ರಕ್ತದಲ್ಲಿಯೇ ಬಂದಿದೆ. ಆ ದೃಷ್ಟಿಯಿಂದ ಹೇಳುವಾಗ ಹಿರಿಯ ವಿದ್ಯಾರ್ಥಿಗಳ ಸಂಘ ಅಸಾಧ್ಯವಾಗಿ ತೋರುವ ಹಲವು ಸಾಧನೆಗಳನ್ನು ಮಾಡಬಹುದಾಗಿದೆ.  ಕೊರೊನಾದಿಂದಾಗಿ ಅನೇಕ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಸಾಧ್ಯವಾಗಿಲ್ಲ. ಆದರೆ, ಪರಿಸ್ಥಿತಿ ತಿಳಿಯಾದ ಮೇಲೆ ಒಂದೊಂದಾಗಿ ಉದ್ದೇಶಿತ ಕಾರ್ಯಕ್ರಮಗಳನ್ನು ನೆರವೇರಿಸಬೇಕು ಎಂದು ಮನವಿ ಮಾಡಿದರು.

ಒಂದು ಸುವರ್ಣ ಸೇತುವೆಯಾಗಿ ಹಿರಿಯ ವಿದ್ಯಾರ್ಥಿಗಳ ಸಂಘ ಕ್ರೀಯಾಶೀಲವಾಗಿರಬೇಕೆಂದು ನಂಬಿದ್ದೇನೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 8 ಮಂದಿಯನ್ನು ಗುರುತಿಸಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ. ವಿವಿಯ ಅಭಿವೃದ್ಧಿಗೆ ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನ ಅಗತ್ಯವಾಗಿದೆ. ಅವರ ಚಿಂತನದ್ರವ್ಯ ಮಹತ್ವದ್ದಾಗಿದೆ ಎಂದು ತಿಳಿಸಿದರು.

English summary…..

It is a pride that MU has rich history and legacy: MU VC

Mysuru, Dec. 12, 2020 (www.justkannada.in): “It is indeed a matter of pride that the Mysore University has a rich and long history and a legacy. The university supports all the activities of the senior students association for the development of the university,” opined Prof. G. Hemanth Kumar, Vice-Chancellor, Mysore University.

Speaking at the achievers’ felicitation programme he said, “the Mysore University has a 104-year-long history. If we had actual figures of all those who have learned here perhaps it would cross 10 million. The Senior Students Association which could have helped a lot for the development of the university came into existence very lately. The contribution of alumnus in the development of many reputed universities across the world is laudable,” he added.

Keywords: Mysore University/ Prof. G. Hemanth Kumar/ legacy/ Senior Students association

key words : Long-live-Mysore-Vivi-Proud-history-heritage-Chancellor-Prof.G.Hemant Kumar

The post ಮೈಸೂರು ವಿವಿಗೆ ಸುಧೀರ್ಘವಾದ ಇತಿಹಾಸ, ಪರೆಂಪರೆಯಿರುವುದು ಹೆಮ್ಮೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದೇಶದ ಎಲ್ಲ ವಿವಿ ನೆಲಕಚ್ಚುತ್ತಿದ್ದು, ಸರ್ಕಾರ, ರಾಜಕೀಯ ವ್ಯಕ್ತಿಗಳಿಗೆ ವಿವಿಗಳ ಮೇಲೆ ಗೌರವವಿಲ್ಲ : ಪ್ರೊ.ಕೆ.ಎಸ್.ರಂಗಪ್ಪ ವಿಷಾದ
ಮೈಸೂರು,ಡಿಸೆಂಬರ್,12,2020(www.justkannada.in) : ಯಾವುದೇ ವಿವಿಗಳನ್ನು ಸರಕಾರ ನಡೆಸುವುದಕ್ಕೆ ಆಗುತ್ತಿಲ್ಲ. ದೇಶದಲ್ಲಿ ಎಲ್ಲ ವಿವಿಗಳು ನೆಲಕಚ್ಚುತ್ತಿವೆ. ಯಾವ ಸರ್ಕಾರ, ರಾಜಕೀಯ ವ್ಯಕ್ತಿಗೂ ವಿವಿಗಳ ಮೇಲೆ ಗೌರವವಿಲ್ಲ. ಹೀಗಾಗಿ, ಮೈಸೂರು ವಿವಿಯನ್ನಾದರೂ ಉಳಿಸಿಕೊಳ್ಳಬೇಕಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ವಿಷಾದವ್ಯಕ್ತಪಡಿಸಿದರು.

ಶನಿವಾರ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ  ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ 3ನೇ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ವಿವಿಧ ಕ್ಷೇತ್ರದ 8 ಮಂದಿ ಸಾಧಕರಿಗೆ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಿವಿಗಳ ಕುರಿತಂತೆ ಹಿಂದೆ ರಾಜಕೀಯ ನಾಯಕರಿಗೆ ಗೌರವವಿತ್ತು. ಆದರೆ, ಇಂದು ಇಲ್ಲ. ದೇಶದಲ್ಲಿಯೇ ಮೈಸೂರು ವಿವಿ 25 ವರ್ಷದಿಂದ ನಂ.6ಸ್ಥಾನದಲ್ಲಿದ್ದರೂ, ನಮ್ಮಲ್ಲಿ 75% ಸಿಬ್ಬಂದಿಯಿಲ್ಲ. ನೆನ್ನೆ ಎಂಎಸ್ಸಿ ಮುಗಿಸಿದವರು ಇಂದು ಎಂಎಸ್ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕೆ ಅತಿಥಿ ಉಪನ್ಯಾಸಕರಾಗಿ ಬರುತ್ತಾರೆ. ಹೀಗಾದರೆ, ವಿವಿ ಘನತೆ ಹೇಗೆ ಉಳಿಯಲು ಸಾಧ್ಯ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಒಂದು ವಿವಿಯನ್ನಾದರೂ, ಉಳಿಸಿಕೊಳ್ಳುವ ಕಾರ್ಯವಾಗಬೇಕಿದೆ. ಮೈಸೂರು ವಿವಿಗೆ ಹಳೆಯ, ಮತ್ತು ಒಳ್ಳೆಯ ಹೆಸರು ಇರುವುದರಿಂದ ಹೇಗೆ ನಡೆಯುತ್ತಿದೆ. ಬೇರೆ ವಿವಿಗಳಲ್ಲಿ ಚೇರ್, ಟೇಬಲ್ ಅಷ್ಟೇ ಇದೆ. ಹೀಗಾದರೆ, ಹೇಗೆ ನಡೆಸಲು ಸಾಧ್ಯ ಎಂದು ಬೇಸರವ್ಯಕ್ತಪಡಿಸಿದರು.

ವಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು 30% ಸಿಬ್ಬಂದಿ. ಸರಕಾರವು ಆ ಸಿಬ್ಬಂದಿಗೂ ಸಂಬಳ ಕೊಡುವುದಕ್ಕೆ ಕಷ್ಟ ಪಡುತ್ತಿದೆ. ಶಿಕ್ಷಣದಲ್ಲಿ ಗುಣಮಟ್ಟ ಬಯಸುವುದು ಹೇಗೆ. ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆದು ಮಾಡಿ ವಿವಿ ನಡೆಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ಸಮಸ್ಯೆ ಎದುರಾಗುತ್ತದೆ. ಹೀಗಾಗಿ, ಎಲ್ಲರೂ ಜೊತೆಗೂಡಿ ವಿವಿಯ ಬೆಳೆಸಬೇಕಿದೆ ಎಂದರು.

ವಿವಿಯಲ್ಲಿ ವಿಜ್ಞಾನ, ತಂತ್ರಜ್ಞಾನಕ್ಕೆ ಪ್ರೋತ್ಸಾಹ ಇಲ್ಲದಂತ್ತಾಗಿದೆ. ಸರಕಾರಕ್ಕೆ ಒಲವು ಇಲ್ಲ. ಹೀಗಾಗಿ, ಅಸೋಸಿಯೇಷನ್ ಅಥವಾ ಪ್ರಪಂಚದ ವಿವಿಧೆಡೆ ಸಾಧನೆ ಮಾಡಿರುವ ವಿವಿಯ ವಿದ್ಯಾರ್ಥಿಗಳು ಸಹಾಯ ಮಾಡಿದರೆ ಸರ್ಕಾರದ ನೆರವು ಇಲ್ಲದೆಯೇ ವಿವಿಯನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಅಸೋಸಿಯೇಷನ್ ವತಿಯಿಂದ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಗುರುತಿಸಿ ಫೆಲೋಶಿಪ್ ನೀಡುವ ಯೋಜನೆ ರೂಪಿಸಿದ್ದು, ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.

ಕಾಶ್ಮೀರ್ ವಿವಿ ವಿಶ್ರಾಂತ ಕುಲಪತಿ ಪದ್ಮಶ್ರೀ ಜೆ.ಎ.ಕೆ.ತರೀನ್,  ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್,  ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈ.ವಿ.ವಿ.ಹಿ.ವಿ ಸಂಘದ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ ಇತರರು ಇದ್ದರು.

English summary….

Functioning of universities in the Country has become difficult: Prof. K.S. Rangappa

Mysuru, Dec. 12, 2020 (www.justkannada.in): “The government is not in a position to run the universities in the country today. It has become very difficult for all the universities to function to its full potential. Unfortunately, neither the government nor none of the politicians have any respect for the Universities. Therefore, we need to save at least Mysore University,” opined Prof. K.S. Rangappa, former Vice-Chancellor, Mysore University.

Speaking at a felicitation function held for achievers at the Rani Bahaddur auditorium in Mysuru today, he said, “in earlier days politicians had respect towards universities. But now it is absent. Mysore University has maintained 6th rank in the country for the last 25 years. Despite this, there the university lacks 75% of staff. As a result of this, those who completed M.Sc. yesterday are coming to teach M.Sc. students here from the next day, as guest lecturers. How can the reputation of this university remain in such a situation? he questioned.

“We should save at least one university in our State. Mysore University is still functioning because of the reputation it has gained over the decades. The situation of other universities in the State is worse. It has become impossible to run the universities,” he lamented. He also added that majority of the universities are functioning with only 30% of staff and cannot afford to pay their salaries. It is impossible to collect more fees from the students also, as it will result in social injustice. Hence, everyone should join hands, he observed.

Keywords: Prof. K.S. Rangappa/ Mysore University/ Reputation of universities

key words :Vivi-bites-all-over-country-VV-government- political-figures-No-Respect-Prof.K.S.Rangappa-regrets

The post ದೇಶದ ಎಲ್ಲ ವಿವಿ ನೆಲಕಚ್ಚುತ್ತಿದ್ದು, ಸರ್ಕಾರ, ರಾಜಕೀಯ ವ್ಯಕ್ತಿಗಳಿಗೆ ವಿವಿಗಳ ಮೇಲೆ ಗೌರವವಿಲ್ಲ : ಪ್ರೊ.ಕೆ.ಎಸ್.ರಂಗಪ್ಪ ವಿಷಾದ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವಿವಿಯಲ್ಲಿ ಸಕಾರಾತ್ಮಕವಾದ ಸ್ಪರ್ಧೆ, ಪ್ರೋತ್ಸಾಹ ಮನೋಭಾವ ಅಗತ್ಯ : ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ
ಮೈಸೂರು,ನವೆಂಬರ್,18,2020(www.justkannada.in) : ವಿವಿಯ ಎಲ್ಲಾ ವಿಭಾಗಗಳಲ್ಲಿ ಸಕಾರಾತ್ಮಕವಾದ ಸ್ಪರ್ಧೆ ಹಾಗೂ ಪ್ರೋತ್ಸಾಹ ಮನೋಭಾವ ಅಗತ್ಯವಾಗಿದ್ದು, ಖಾಸಗೀಕರಣದ ನಡುವೆ ನಮ್ಮನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.

ಮೈಸೂರು ವಿವಿ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ‘’ವಿಶ್ವದ ಅಗ್ರ 2% ವಿಜ್ಞಾನಿಗಳಾಗಿ ಗುರುತಿಸಲಾದ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ರಸಾಯನಶಾಸ್ತ್ರ ಅಧ್ಯಯನ ವಿಭಾಗ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಬಸವಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮ ರಾಜ್ಯದವರೇ ನಮ್ಮನ್ನು ಗುರುತಿಸಲಿಲ್ಲ ಅಂಥಹದರಲ್ಲಿ ಪ್ರಪಂಚದ ಟಾಪ್ 2% ವಿಜ್ಞಾನಿಗಳಾಗಿ ನಮ್ಮನ್ನು ಗುರುತಿಸಿದ್ದು, ಆಶ್ಚರ್ಯಕರ ಸಂಗತಿ. ಈ ಆಯ್ಕೆಯಲ್ಲಿ ಯಾವುದೇ ರಾಜಕೀಯ ನಡೆಯುವುದಿಲ್ಲ. ವೈಜ್ಞಾನಿಕವಾಗಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ರಾಜ್ಯದಲ್ಲಿ ಆಯ್ಕೆಮಾಡುವಂತೆ ಮೆರಿಟ್ ಬದಲಾಯಿಸಿ ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದರು.

ಅನೆಲಿಟಿಕಲ್ ಕೆಮಿಸ್ಟ್ರಿ(Analytical chemistry)ವಿಭಾಗದಲ್ಲಿ ಪ್ರೊ.ಕೆ.ಬಸವಯ್ಯ ಅವರನ್ನು ಗುರುತಿಸಿರುವುದು ಸಂತೋಷದ ವಿಷಯ. ಅನೇಕರು ಅನೆಲಿಟಿಕಲ್ ಕೆಮಿಸ್ಟ್ರಿ ವಿಭಾಗವನ್ನು ಮುಚ್ಚುವಂತೆ ಸಲಹೆ ನೀಡಿದ್ದರು. ಇದಕ್ಕೆ ನಾನು ವಿರೋಧವ್ಯಕ್ತಪಡಿಸಿದ್ದೇ. ಇಂದು ಪ್ರೊ.ಕೆ.ಬಸವಯ್ಯ ಅವರನ್ನು ಗುರುತಿಸಿರುವುದು ವಿಭಾಗದ ಘನತೆಯನ್ನು ಹೆಚ್ಚಿಸಿದೆ ಎಂದರು.

ಪ್ರಸ್ತುತ ಸಕಾರಾತ್ಮಕವಾದ ಸ್ಪರ್ಧೆ ಕಡಿಮೆಯಾಗಿದೆ. ಈ ಹಿಂದೆ ಸ್ಪರ್ಧಾತ್ಮಕವಾಗಿ ಸಂಶೋಧನೆ ಮಾಡುತ್ತಿದ್ದೆವು. ಆದರೆ, ಯಾವುದೇ ರೀತಿ ಅಸೂಯೆ ಪಡುತ್ತಿರಲಿಲ್ಲ. ರಸಾಯನಶಾಸ್ತ್ರ ಅಧ್ಯಯನ ವಿಭಾಗ ಒಂದು ಭಾಗವಾದರೆ, ವಿವಿಯ ಇತರೆ ವಿಭಾಗಗಳು ಒಂದು ವಿಭಾಗದಂತಾಗಿದೆ. ರಸಾಯನಶಾಸ್ತ್ರ ವಿಭಾಗದಲ್ಲಿ ಟಾಪ್ 2% ವಿಜ್ಞಾನಿಗಳಾಗಿ ಇಬ್ಬರನ್ನು ಗುರುತಿಸಲಾಗಿದೆ. ಬೇರೆ ವಿಭಾಗದಿಂದ ಯಾಕೆ ಆಯ್ಕೆಯಾಗಿಲ್ಲ ಎಂದು ಪ್ರಶ್ನಿಸಿದರು.

ರಸಾಯನಶಾಸ್ತ್ರ ವಿಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ಎಲ್ಲಾ ಸಮುದಾಯದಲ್ಲಿ ಬುದ್ಧಿವಂತರು ಇದ್ದಾರೆ. ಎಲೆಮರೆಕಾಯಿಗಳಂತಿರುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿವಿಯಲ್ಲಿ ಸುಮಾರು 15 ವರ್ಷಗಳಿಂದ ನೇಮಕವಾಗಿಲ್ಲ. ವಿಭಾಗವನ್ನು ಮೂರು ಜನರಿಂದ ನಡೆಸಲು ಸಾಧ್ಯವೇ?, ಯಾವುದೇ ವಿಭಾಗ ಹಾಳಾಗಬಾರದು. ಹೀಗಾಗಿ, ಅಭಿವೃದ್ಧಿಗೆ ಒತ್ತು ನೀಡಿ ಎಂದು ಸಲಹೆ ನೀಡಿದರು.

ಇನ್ನು ಹತ್ತು ವರ್ಷದವರೆಗೆ ಯಾವ ವಿಭಾಗ ಇರುವುದೋ, ಇಲ್ಲವೋ ಗೊತ್ತಿಲ್ಲ. ವಿಭಾಗಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಸರಕಾರದಿಂದ ಏನು ಪ್ರಯೋಜನವಿಲ್ಲ. ಸರಕಾರವೇ ಖಾಸಗೀಕರಣಕ್ಕೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ನಮ್ಮನ್ನು ನಾವು ಉಳಿಸಿಕೊಳ್ಳುವುದು ಅಗತ್ಯ. ಈಗಲೇ ಸಂಬಳ ಸಿಗುತ್ತಿಲ್ಲ. ಇನ್ನು ಹತ್ತು ವರ್ಷದ ಬಳಿಕ ಏನಾಗುವುದೊ ಎಂದು ಎಚ್ಚರಿಕೆ ನೀಡಿದರು.

ಹಿರಿಯರು ಪ್ರತಿಭಾವಂತ ಹೊಸ ತಲೆಮಾರನ್ನು ವಿವಿಗೆ ಉಳಿಸಿಹೋಗಬೇಕಿದೆ. ಒಳ್ಳೆಯ ಸಾಹಿತಿಗಳನ್ನು ಮರೆಯುತ್ತಿದ್ದೇವೆ. ಸುಳ್ಳು ಸಾಹಿತಿಗಳು ಉಳಿಯುತ್ತಿದ್ದು, ಇವರಿಂದ ಸಾಹಿತ್ಯ ಉಳಿಯುವುದಿಲ್ಲ. ಸರಕಾರವು ಎಲ್ಲವನ್ನೂ ಖಾಸಗೀಕರಣ ಮಾಡಿ ಮುಚ್ಚುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು.

ನಾನು ಏನು ಆಗಬೇಕು ಅದು ಆಗಿದ್ದೇನೆ. ನಾನು ಅಂಥಹ ಕೆಟ್ಟ ಕೆಲಸ ಏನು ಮಾಡಿಲ್ಲ. ಸಾಧ್ಯವಾದರೆ ನಿಮ್ಮ ಕೈಲಾದರೆ ನೀವು ಮಾಡಿ, ಇಲ್ಲವಾದರೆ ಮಾಡುವವರಿಗೆ ಪ್ರೋತ್ಸಾಹ ನೀಡಿ. ಎಲ್ಲಾ ವಿಭಾಗಗಳು ನಂಬರ್ 1 ಆಗಲಿ ಎಂದು ತಿಳಿಸಿದರು.

English summary….

Positive attitude of competition, encouragement essential in University: former VC Prof. K.S. Rangappa

Mysuru, Nov. 18, 2020 (www.justkannada.in): “An environment with positive and healthy competition and encouragement is required in all the Departments of the University, we should survive on our own in this era of privatisation,” opined Prof. K.S. Rangappa, former Vice Chancellor, Mysore University.

The Department of Research in Chemistry, Mysore University had organised a programme to felicitated Prof. K.S. Rangappa, former Vice Chancellor, Mysore University and Prof. K. Basavaiah, Retd. Professor, of Department of Research in Chemistry, who were recently identified as the world’s best 2% scientists.

In his address Prof. K.S. Rangappa expressed his view that positive competition has disappeared in recent years. “We had a healthy competition in undertaking research works, which has disappeared today. We never used to jealous on others. The Department of Research in Chemistry has become a separate division from others. Two of us have been recognised as the top 2% scientists in the world, why not in other departments?” he questioned.

He expressed his happiness for recognizing the services and achievements of Prof. K. Basavaiah of Department of Analytical Chemistry and mentioned that indeed it had increased the pride of the department. He advised to further develop the Department of Chemistry and wished all the Departments of the university would become the best.

key words :Positive-competition-Vivi-need-encouraging-attitude-Retired-Chancellor-Prof.K.S.Rangappa

The post ವಿವಿಯಲ್ಲಿ ಸಕಾರಾತ್ಮಕವಾದ ಸ್ಪರ್ಧೆ, ಪ್ರೋತ್ಸಾಹ ಮನೋಭಾವ ಅಗತ್ಯ : ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಅಧ್ಯಾಪಕರ ಪಾಲಿಗೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರೇ ಲೋಕನಾಯಕ ; ಮೈಸೂರು ವಿವಿ ಕುಲಪತಿ
ಮೈಸೂರು,ಸೆಪ್ಟೆಂಬರ್,05,2020(www.justkannada.in) ; ಅಧ್ಯಾಪಕರ ಪಾಲಿಗೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರೆ ಲೋಕನಾಯಕ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯ ಡಾ.ಎಸ್.ರಾಧಾಕೃಷ್ಣನ್ ತತ್ತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದ ವತಿಯಿಂದ ಶನಿವಾರ ವಿಜ್ಞಾನಭವನದಲ್ಲಿ ಆಯೋಜಿಸಿದ್ದ ‘’ಶಿಕ್ಷಕರ ದಿನಾಚರಣೆ’’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಿಗೆ ಮಾದರಿಯಾಗುವಂತಹ ಎಲ್ಲಾ ಮೌಲ್ಯಗಳನ್ನು ಒಳಗೊಂಡಿದ್ದರು. ಅವರ ಶ್ರೇಷ್ಠ ಚಿಂತನೆಗಳನ್ನು ಈ ದಿನದಂದು ಸ್ಮರಿಸಲಾಗುವುದು ಎಂದರು.

ದೇಶ ಸುಭಿಕ್ಷವಾಗಿರುವುದಕ್ಕೆ ಶಿಕ್ಷಣದಿಂದ ಮಾತ್ರ ಸಾಧ್ಯ. ಯುವಜನಾಂಗವನ್ನು ಸರಿದಾರಿಯತ್ತ ನಡೆಸುವ ನಿಟ್ಟಿನಲ್ಲಿ ರಾಧಾಕೃಷ್ಣನ್ ಅವರ ಪಾತ್ರವು ಅಪಾರ. ಸ್ವಾಮಿ ವಿವೇಕಾನಂದ, ಕುವೆಂಪು, ರಾಧಾಕೃಷ್ಣನ್ ರಂತಹ ಮಹಾತ್ಮರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಆದರ್ಶ ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.

ಮೈಸೂರು ವಿವಿ ಸಂಜೆ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಅನಂತರಾಮು ಅವರು ’ಅಧ್ಯಾಪಕ ಜೀವನ ಮೌಲ್ಯಗಳು’’ ವಿಷಯ ಕುರಿತು ಮಾತನಾಡಿ, ಶಿಕ್ಷಕ ವೃತ್ತಿಯು ಪುರಾತನ, ಪವಿತ್ರವಾದ ವೃತ್ತಿಯಾಗಿದೆ, ದಾನಗಳಲ್ಲಿಯೇ ಶ್ರೇಷ್ಠ ದಾನ ವಿದ್ಯಾದಾನವಾಗಿದೆ. ಶಿಕ್ಷಕರು ನಿತ್ಯ ಅಧ್ಯಯನಶೀಲರಾಗಿ ಮೌಲ್ಯಗಳನ್ನು ಬಿತ್ತುವ ಕಾರ್ಯಮಾಡಬೇಕು ಎಂದು ಹೇಳಿದರು.

ಗುರುವೆಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ಈ ಮೂವರನ್ನು ಒಳಗೊಂಡಂತಹ ವಿಶೇಷ ವ್ಯಕ್ತಿ. ವಿದ್ಯಾರ್ಥಿಗಳನ್ನು ಬ್ರಹ್ಮನಂತೆ ತಿದ್ದುವ, ವಿಷ್ಣುವಂತೆ ಮೌಲ್ಯಗಳನ್ನು ಪಾಲಿಸುವ, ಮಹೇಶ್ವರನಂತೆ ಉತ್ತಮ ವಿಷಯಗಳೆಡೆಗೆ ನಡೆಸುವ ಕಾರ್ಯವನ್ನು ಮಾಡುತ್ತಾರೆ ಎಂದು ಹೇಳಿದರು.

ಶಿಕ್ಷಕರು ತಾವು ಬೋಧಿಸುವ ವಿಷಯದ ಕುರಿತು ಆಳವಾಗಿ ತಿಳಿದಿರಬೇಕು. ಅದಲ್ಲದೇ, ಇತರೆ ವಿಷಯಗಳ ಬಗ್ಗೆಯೂ ಸಾಮಾನ್ಯಜ್ಞಾನವಿರಬೇಕು. ಉತ್ತಮ ಸಂವಹನ ಕೌಶಲ್ಯವಿರಬೇಕು. ನಿರಂತರ ಅಧ್ಯಯನದಲ್ಲಿ ತೊಡಗುವ ಮೂಲಕ ಹೊಸ, ಹೊಸ ವಿಷಯಗಳನ್ನು ತಿಳಿದು ವಿದ್ಯಾರ್ಥಿಗಳಿಗೂ ಅದನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.

ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥರಾದ ಶ್ರೀ ಸ್ವಾಮಿ ಯುಕ್ತೇಶಾನಂದಜಿ ಮಹಾರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿಯು ವಿಶೇಷವಾದ ವೃತ್ತಿಯಾಗಿದೆ. ರಾಧಕೃಷ್ಣ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಗುರು, ಶಿಷ್ಯ ಸಂಬಂಧವು ಅನಂತವಾಗಿದ್ದು, ಶಿಷ್ಯರನ್ನು ಹೆಜ್ಜೆ,ಹೆಜ್ಜೆಗೂ ಸರಿಯಾದ ದಾರಿಯಲ್ಲಿ ನಡೆಸುವುದು ಗುರುವಿನ ಕಾರ್ಯವಾಗಿದೆ ಎಂದರು.

ಗುರು ಎಂದರೆ ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಹೊಂದಿದವರು ಎಂದರ್ಥ. ಹೀಗಾಗಿ, ಪರಿಪೂರ್ಣತೆಗೆ ಒತ್ತು ಕೊಡುವುದರ ಜೊತೆಗೆ ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಕಲಿಯಬೇಕು, ವಿದ್ಯಾರ್ಥಿಗಳಿಗೂ ಅದನ್ನು ಕಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ,ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ವಿಜ್ಞಾನ ಭವನದ ಸಂಯೋಜಕ ಚಂದ್ರನಾಯಕ್ ಇತರರು ಉಪಸ್ಥಿತರಿದ್ದರು.

key words ; Dr.Sarvepalli-role-faculty-Radhakrishnan-world-leader-Chancellor-Mysore-Vivi

The post ಅಧ್ಯಾಪಕರ ಪಾಲಿಗೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರೇ ಲೋಕನಾಯಕ ; ಮೈಸೂರು ವಿವಿ ಕುಲಪತಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.